ಭಟ್ಕಳ: ಇಲ್ಲಿನ ಸರಕಾರಿ ಮಾದರಿ ಕನ್ನಡ ಗಂಡು ಮಕ್ಕಳ ಶಾಲೆಯಲ್ಲಿ ಒಂದರಿಂದ ಏಳನೇ ತರಗತಿಯ ವಿದ್ಯಾರ್ಥಿಗಳಿಗೆ ಭಟ್ಕಳ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನಿಂದ ಸ್ವಾತಂತ್ರ್ಯೋತ್ಸವದ ಅಂಗವಾಗಿ ಹಮ್ಮಿಕೊಂಡ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಣೆ (Prize distribution) ಕಾರ್ಯಕ್ರಮ ನಡೆಯಿತು.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಒಂದರಿಂದ ಮೂರನೇ ತರಗತಿಯ ವಿದ್ಯಾರ್ಥಿಗಳಿಗೆ ತರಗತಿವಾರು ನಡೆದ ರಾಷ್ಟ್ರಧ್ವಜ ಬಿಡಿಸುವ ಸ್ಪರ್ಧೆಯಲ್ಲಿ ಒಂದನೇ ತರಗತಿಯ ಮಾನ್ವಿತಾ ನಾಯ್ಕ ಪ್ರಥಮ, ವೈಷ್ಣವಿ ದೇವಾಡಿಗ ದ್ವಿತೀಯ, ನೇಹಾ ದೇವಾಡಿಗ ತೃತೀಯ ಸ್ಥಾನ ಪಡೆದರು. ಎರಡನೇ ತರಗತಿಯ ಭಾರತಿ ಮೊಗೇರ ಪ್ರಥಮ, ಗಾನವಿ ನಾಯ್ಕ ದ್ವಿತೀಯ, ಅಕ್ಷತಾ ನಾಯ್ಕ ತೃತೀಯ ಸ್ಥಾನ ಪಡೆದರೆ, ಮೂರನೇ ತರಗತಿಯ ಆಋಷಿ ಶೇಟ್ ಪ್ರಥಮ, ಯಾದವ ನಾಯ್ಕ ದ್ವಿತೀಯ, ಗಾನವಿ ನಾಯ್ಕ ತೃತೀಯ ಸ್ಥಾನ ಪಡೆದರು. ಸ್ಮರಣಶಕ್ತಿ ಸ್ಪರ್ಧೆಯಲ್ಲಿ ನಾಲ್ಕನೇ ತರಗತಿಯಲ್ಲಿ ಅನ್ವಿತಾ ನಾಯ್ಕ ಪ್ರಥಮ, ಹಿಮಾ ನಾಯ್ಕ ದ್ವಿತೀಯ, ತನಿಶ್ ಮೊಗೇರ ತೃತೀಯ; ಶಬ್ದ ಭಂಡಾರ ಸ್ಪರ್ಧೆಯಲ್ಲಿ ಐದನೇ ತರಗತಿಯಲ್ಲಿ ಗ್ರೀಷ್ಮ ನಾಯ್ಕ ಪ್ರಥಮ, ಚಿರಾಗ್ ದೇವಾಡಿಗ ದ್ವಿತೀಯ, ಅಶ್ವಿಕ್ ನಾಯ್ಕ ತೃತೀಯ; ಸ್ವತಂತ್ರ ಹೋರಾಟಗಾರರ ಹೆಸರಿಸುವ ಸ್ಪರ್ಧೆಯಲ್ಲಿ ಆರನೇ ತರಗತಿಯ ಪ್ರಧಾನ ಪ್ರಥಮ, ಸನ್ನಿಧಿ ದ್ವಿತೀಯ, ಅನ್ವಿತ ತೃತೀಯ; ಸ್ವತಂತ್ರ ದಿನಾಚರಣೆ ಭಾಷಣ ಸ್ಪರ್ಧೆಯಲ್ಲಿ ಏಳನೇ ತರಗತಿಯ ವಿದ್ಯಾಧರ ಪ್ರಥಮ, ವಿಸ್ಮಿತ ದ್ವಿತೀಯ ಹಾಗೂ ವಿನೀಶ್ ತೃತೀಯ ಬಹುಮಾನ ಪಡೆದುಕೊಂಡರು. ಪರಿಷತ್ತಿನಿಂದ ವಿಜೇತ ವಿದ್ಯಾರ್ಥಿಗಳಿಗೆ ಪುಸ್ತಕ ಬಹುಮಾನ ಹಾಗೂ ಶಾಲೆಯ ಎಲ್ಲ ವಿದ್ಯಾರ್ಥಿಗಳಿಗೆ ಸಿಹಿಯನ್ನು ವಿತರಿಸಲಾಯಿತು. (Prize distribution)
ಇದನ್ನೂ ಓದಿ: Karate Competition/ ಭಟ್ಕಳ ತಾಲೂಕು ಮಟ್ಟದ ಕರಾಟೆ ಸ್ಪರ್ಧೆ
ಸ್ವಾತಂತ್ರ್ಯೋತ್ಸವ ದಿನ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಭಟ್ಕಳ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಗಂಗಾಧರ ನಾಯ್ಕ ಬಹುಮಾನ ವಿತರಿಸಿ, ಶುಭಹಾರೈಸಿದರು. ಎಸ್ಡಿಎಂಸಿ ಅಧ್ಯಕ್ಷ ಹರೀಶ ದೇವಾಡಿಗ ಕಸಾಪ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಶಾಲಾ ಮುಖ್ಯಾಧ್ಯಾಪಕ ಜನಾರ್ದನ ಮೊಗೇರ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕಾರ್ಯಕ್ರಮದ ವೇದಿಕೆಯಲ್ಲಿ ಎಸ್ಡಿಎಂ ಉಪಾಧ್ಯಕ್ಷೆ ಸುಶೀಲ ಮೊಗೇರ, ಸದಸ್ಯ ನಾಗರಾಜ ದೇವಾಡಿಗ, ನಿವೃತ್ತ ಶಿಕ್ಷಕಿ ಮಾಲತಿ ಕೆ, ಪುಷ್ಪ ನಾಯ್ಕ ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮವನ್ನು ಶಿಕ್ಷಕಿ ರಾಧಾ ದೇವಾಡಿಗ ನಿರ್ವಹಿಸಿದರೆ, ಜಾನಕಿ ದೇವಾಡಿಗ ಬಹುಮಾನ ವಿತರಣೆಯನ್ನು ನಿರ್ವಹಿಸಿದರು. ಜ್ಯೋತಿ ಹೊಸಮನಿ ಸ್ವಾಗತಿಸಿದರು. ಶಿಕ್ಷಕಿ ದೀಪಾ ಗೌಡ ವಂದಿಸಿದರು.
ಇದನ್ನೂ ಓದಿ: Taxi Association/ ಟ್ಯಾಕ್ಸಿ ಸಂಘದ ಪದಾಧಿಕಾರಿಗಳ ಆಯ್ಕೆ
ಮುಂಜಾನೆ ಏಳು ಮೂವತ್ತಕ್ಕೆ ಧ್ವಜಾರೋಹಣ ನಡೆಯಿತು. ತದನಂತರದಲ್ಲಿ ಸ್ವತಂತ್ರ ಹೋರಾಟಗಾರರ ಛದ್ಮವೇಷ ಒಳಗೊಂಡ ವಿದ್ಯಾರ್ಥಿಗಳಿಂದ ಆಕರ್ಷಕ ಪ್ರಭಾತಫೇರಿ ನಡೆಯಿತು. ಸಭಾ ಕಾರ್ಯಕ್ರಮದ ನಂತರ ವಿದ್ಯಾರ್ಥಿಗಳಿಂದ ನಡೆದ ಮನೋರಂಜನಾ ಕಾರ್ಯಕ್ರಮವನ್ನು ವಿದ್ಯಾರ್ಥಿಗಳೇ ನಿರ್ವಹಿಸಿದ್ದು ವಿಶೇಷವಾಗಿತ್ತು.ಕಾರ್ಯಕ್ರಮದಲ್ಲಿ ಎಸ್ಡಿಎಂಸಿ ಸದಸ್ಯರಾದ ಮೋಹನ ನಾಯ್ಕ, ಸುಬ್ರಾಯ ನಾಯ್ಕ, ಲಕ್ಷ್ಮೀಶ ನಾಯ್ಕ, ರವಿಕಾಂತ ಬಾoದೇಕರ, ಮಹೇಶ ನಾಯ್ಕ, ಪಾರ್ವತಿ ನಾಯ್ಕ, ರಾಮಚಂದ್ರ ದೇವಾಡಿಗ, ಭವಾನಿ ನಾಯ್ಕ, ಅಶ್ವಿನಿ ನಾಯ್ಕ, ನಾಗೇಂದ್ರ ಆಚಾರ್ಯ, ಶಿಕ್ಷಕ ವೃಂದದವರು, ಪಾಲಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಇದನ್ನೂ ಓದಿ: Karate tournament/ ಕರಾಟೆ ಪಂದ್ಯಾವಳಿಯಲ್ಲಿ ಭಟ್ಕಳದ ವಿದ್ಯಾರ್ಥಿಗಳ ಸಾಧನೆ



