ಭಟ್ಕಳ: ತಾಲೂಕಿನ ಮಾರುಕೇರಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಕೋಟಖಂಡ ಗ್ರಾಮದಲ್ಲಿ ನಡೆದ ಅಡಿಕೆ ಕಳ್ಳತನ ಪ್ರಕರಣವನ್ನು ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯವರು (Bhatkal Rural Police) ಭೇದಿಸಿ, ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಇನ್ನೊಬ್ಬ ಆರೋಪಿ ಪರಾರಿಯಾಗಿದ್ದಾನೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಭಟ್ಕಳದ ಬಿಳಾಲಖಂಡ ಗುಳ್ಮಿಯ ಮೊಹಮ್ಮದ್ ಸಾಧಿಕ್ ಶೇಖ (೨೬), ಮೊಹಮ್ಮದ್ ಖಾಜಾ (೨೦) ಮತ್ತು ಮೂಸಾನಗರದ ಮೊಹಮ್ಮದ್ ಇರ್ಶಾದ್ (೨೮), ಮೊಹಮ್ಮದ್ ಮುಸಾದಿಕ್ (೩೬) ಬಂಧಿತರು. ಇನ್ನೊಬ್ಬ ಆರೋಪಿ ಹೆಬಳೆಯ ಮೊಹಮ್ಮದ್ ನಿಜಾಮ್ ಪರಾರಿಯಾಗಿದ್ದಾನೆ. ಪೊಲೀಸರ ಪ್ರಕಾರ, ಸುಮಾರು ಎರಡು ತಿಂಗಳ ಹಿಂದೆ ಸಾಧಿಕ್ ಶೇಖ ಮತ್ತು ಖಾಜಾ, ನಾಗಪ್ಪಯ್ಯ ಭಟ್ಟ ಅವರ ಹೊಸ ಮನೆಯ ಟೈಲ್ಸ್ ಹಾಕುವ ಕಾಮಗಾರಿ ನಡೆಸುತ್ತಿದ್ದಾಗ, ಪಕ್ಕದ ಹಳೆಯ ಮನೆಯಲ್ಲಿ ಸಂಗ್ರಹಿಸಿದ್ದ ಅಡಿಕೆ ಚೀಲವನ್ನು ಗಮನಿಸಿದ್ದರು. ಬಳಿಕ ತಮ್ಮ ಸಹಚರರ ಸಹಾಯದಿಂದ ಕೆಲ ದಿನಗಳ ನಂತರ ಮಧ್ಯರಾತ್ರಿ ಆ ಮನೆಗೆ ನುಗ್ಗಿ ಅಡಿಕೆ ಚೀಲ ಕದ್ದೊಯ್ದಿದ್ದರು.

ಇದನ್ನೂ ಓದಿ: bikes on fire/ ಒಂದೇ ಮನೆಯ 3 ಬೈಕ್ ತಿಂಗಳೊಳಗೆ ಭಸ್ಮ, ಮನೆಗೂ ಹಾನಿ

ಮನೆಯ ಮಾಲಿಕ ನಾಗಪ್ಪಯ್ಯ ಭಟ್ಟ ಅವರು ಜುಲೈನಲ್ಲಿ ಭಟ್ಕಳ ಗ್ರಾಮೀಣ ಠಾಣೆಯಲ್ಲಿ ದೂರು ದಾಖಲಿಸಿದ್ದರು. ತನಿಖೆ ಕೈಗೊಂಡ ಪೊಲೀಸರು (Bhatkal Rural Police) ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸಿದ್ದು, ಅವರಿಂದ ೧೭೫ ಕೆಜಿ ಅಡಿಕೆ ಹಾಗೂ ಕಳ್ಳತನಕ್ಕೆ ಬಳಸಿದ ಕಾರನ್ನು ವಶಪಡಿಸಿಕೊಂಡಿದ್ದಾರೆ. ಪರಾರಿ ಆರೋಪಿಯ ಬಂಧನಕ್ಕಾಗಿ ಶೋಧ ಮುಂದುವರಿದಿದ್ದು, ಕಾರ್ಯಾಚರಣೆಯಲ್ಲಿ ಪಿಎಸ್‌ಐ ಮಂಜುನಾಥ ಎ ಲಿಂಗಾರೆಡ್ಡಿ, ಎಎಸ್‌ಐ ಗಣಪತಿ ಬೆನಕಟ್ಟಿ ಸೇರಿದಂತೆ ಸಿಬ್ಬಂದಿ ಪಾಲ್ಗೊಂಡಿದ್ದರು.

ಇದನ್ನೂ ಓದಿ: Municipal Council/ ಭಟ್ಕಳ ನಗರಸಭೆಯಾಗಿ ಮೇಲ್ದರ್ಜೆಗೆ