ಭಟ್ಕಳ: ಮೊನ್ನೆಯಷ್ಟೇ ನಡೆದ ರಸ್ತೆ ಅಘಾತದಲ್ಲಿ ಬೈಕ್ ಸವಾರನೋರ್ವ ಸಾವನ್ನಪ್ಪಿದ ಭಟ್ಕಳದ (Bhatkal) ನೂರ್ ಮಸೀದಿ ಮುಂಭಾಗದ ಸ್ಥಳದಲ್ಲೇ ಬೈಕ್ ಹಾಗೂ ಮೀನು ಗಾಡಿಯ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ ಅದೃಷ್ಟವಶಾತ್ ಬೈಕ್ ಸವಾರ ಕೊಂಚದರಲ್ಲೇ ಪ್ರಾಣಾಪಾಯದಿಂದ ಪಾರಾದ ಘಟನೆ ರವಿವಾರ ಸಂಜೆ ನಡೆದಿದೆ. ಸದ್ಯ ಅಪಘಾತ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ (Social Media) ವಿಡಿಯೋ ವೈರಲ್ (viral video) ಆಗಿದೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಉಡುಪಿ (Udupi) ಕಡೆಯಿಂದ ಮುರುಡೇಶ್ವರ (Murudeshwara) ಕಡೆಗೆ ಹೋಗುತ್ತಿದ್ದ ಬೈಕ್ ಸವಾರ ರಾಷ್ಟ್ರೀಯ ಹೆದ್ದಾರಿಯಲ್ಲಿ (National Highway) ಬಿದ್ದಿರುವ ಸಣ್ಣ ಗುಂಡಿಗಳನ್ನು ತಪ್ಪಿಸಲು ಹೋದ ವೇಳೆ ಭಟ್ಕಳ ಕಡೆಯಿಂದ ಮಂಗಳೂರು (Mangaluru) ಕಡೆಗೆ ಹೋಗುತ್ತಿದ್ದ ಮೀನು ತುಂಬಿದ ಮಿನಿ ಲಾರಿಗೆ (fish lorry) ಡಿಕ್ಕಿ ಹೊಡೆದಿದ್ದಾನೆ. ಅದೃಷ್ಟವಶಾತ್ ಬೈಕ್ ಸವಾರ ಕೊಂಚದರಲ್ಲೇ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಈ ದೃಶ್ಯ ಸಮೀಪದ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ವಿಡಿಯೋ ವೈರಲ್ ಆಗಿದೆ (viral video). ಶನಿವಾರವಷ್ಟೇ ಇದೇ ಸ್ಥಳದಲ್ಲಿ ದಂಪತಿ ದೇವಸ್ಥಾನಕ್ಕೆ ತೆರಳುವ ವೇಳೆ ಟ್ಯಾಂಕರ್ ಹರಿದು ಬೈಕ್ ಸವಾರ ಸ್ಥಳದ್ದಲ್ಲೇ ಸಾವನ್ನಪ್ಪಿದ್ದರು. ತಾಲೂಕಿನ ಜನತೆ ಆ ಆಘಾತದಿಂದ ಹೊರ ಬರುವ ಮೊದಲೇ ಇನ್ನೊಂದು ಅಪಘಾತ ಸಂಭವಿಸಿದ್ದು ಜನರು ಆತಂಕಿತರಾಗಿದ್ದಾರೆ.
ಇದನ್ನೂ ಓದಿ: achievement in karate/ ಕರಾಟೆಯಲ್ಲಿ ʼವಿದ್ಯಾಂಜಲಿʼ ಮಕ್ಕಳ ರಾಜ್ಯ ಮಟ್ಟದ ಸಾಧನೆ
ಭಟ್ಕಳ ನಗರದ ಹೃದಯ ಭಾಗದಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಐಆರ್‌ಬಿ (IRB infrastructure) ನಡೆಸುತ್ತಿದ್ದ ಚತುಷ್ಪಥ ಕಾಮಗಾರಿ ಬಹಳ ಸಮಯದಿಂದ ಸ್ಥಗಿತಗೊಂಡಿದೆ. ಇತ್ತೀಚಿನ ಮಳೆಯಿಂದಾಗಿ ರಸ್ತೆಯ ಸ್ಥಿತಿ ಹದಗೆಟ್ಟಿದ್ದು, ಉದ್ದಕ್ಕೂ ಗುಂಡಿಗಳು ಸೃಷ್ಟಿಯಾಗಿವೆ. ವಿಶೇಷವಾಗಿ ಬೈಕ್ ಸವಾರರು ಈ ಗುಂಡಿಗಳನ್ನು ತಪ್ಪಿಸಲು ಹೋಗಿ, ನಿಯಂತ್ರಣ ತಪ್ಪಿ ವಾಹನಗಳಿಗೆ ಡಿಕ್ಕಿ ಹೊಡೆಯುತ್ತಿದ್ದಾರೆ. ಆದರೆ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಮಾತ್ರ ಇದ್ಯಾವುದೂ ತಮಗೆ ಸಂಬಂಧಿಸಿದ್ದಲ್ಲ ಎಂಬಂತೆ ಕಣ್ಮುಚ್ಚಿ ಕುಳಿತಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: Followup/ ಮದುವೆ ಮನೆಯಲ್ಲಿ ಸೂತಕದ ಛಾಯೆ



