ಭಟ್ಕಳ: ಇಲ್ಲಿನ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿನ ಖಾಜಿಯಾ ಕಂಪೌಂಡ ಮೈದಾನದಲ್ಲಿ ಭಟ್ಕಳ ಉತ್ಸವ (Bhatkal utsav) ನಡೆಯಲಿದ್ದು, ಸ್ಥಳೀಯ ಪ್ರತಿಭೆಗಳ ಜತೆಗೆ ರಾಜ್ಯ ಕಲಾವಿದರು ಸಾಂಸ್ಕೃತಿಕ ಕಾರ್ಯಕ್ರಮ ಪ್ರದರ್ಶಿಸಲಿದ್ದಾರೆ ಎಂದು ಕ್ರಿಯಾಶೀಲ ಗೆಳೆಯರ ಸಂಘದ ಅಧ್ಯಕ್ಷ ರಮೇಶ ಖಾರ್ವಿ ತಿಳಿಸಿದರು.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಕ್ಕದ ತಾಲೂಕುಗಳಲ್ಲಿ ನಡೆಯುತ್ತಿದ್ದ ಉತ್ಸವ ನಮ್ಮ ತಾಲೂಕಿನಲ್ಲಿ ನಡೆಯುತ್ತಿಲ್ಲ ಎನ್ನುವ ದೃಷ್ಟಿಯಿಂದ ನಮ್ಮ ಕ್ರಿಯಾಶೀಲ ಗೆಳೆಯರ ಸಂಘ ಭಟ್ಕಳ ಉತ್ಸವ ಮಾಡಬೇಕು ಎಂದು ತೀರ್ಮಾನ ಮಾಡಿಕೊಂಡಿದೆ. ಈ ಐತಿಹಾಸಿಕ ಕಾರ್ಯಕ್ರಮ ಸಾಮರಸ್ಯದ ಸಂಕೇತವಾಗಿದೆ. ವಿವಿಧ ಸಮುದಾಯದ ಮುಖಂಡರನ್ನು ಹಾಗೂ ಇಲಾಖೆಯ ಅಧಿಕಾರಿಗಳನ್ನು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳನ್ನು ಉತ್ಸವದಲ್ಲಿನ ಮೇಳಗಳಿಗೆ, ಸಭಾ ಕಾರ್ಯಕ್ರಮಗಳಿಗೆ ಆಹ್ವಾನಿಸಿ ಎಲ್ಲರನ್ನು ಜೊತೆಗೂಡಿಸಿಗೊಂಡು ಭಟ್ಕಳ ಉತ್ಸವ ಮಾಡುತ್ತಿದ್ದೇವೆ. ಈ ಕಾರ್ಯಕ್ರಮಕ್ಕೆ ಅತೀ ಹೆಚ್ಚಿನ ಸಹಕಾರವನ್ನು ಸಚಿವ ಮಂಕಾಳ ವೈದ್ಯ ನೀಡಿದ್ದು, ಸಂಘ-ಸಂಸ್ಥೆಗಳು ಬೆಂಬಲ ನೀಡಿವೆ ಎಂದರು.
ಇದನ್ನು ಓದಿ: Murudeshwar/ ರಿಕ್ಷಾ ನಿಲುಗಡೆಗೆ ವ್ಯವಸ್ಥೆ ಕಲ್ಪಿಸಲು ಮನವಿ
ಕಾರ್ಯಕ್ರಮದ ಸಂಚಾಲಕ ಶ್ರೀಕಾಂತ ನಾಯ್ಕ ಮಾತನಾಡಿ, ಡಿಸೆಂಬರ್ 25ರಿಂದ ಶುರುವಾಗಿ ನಾಲ್ಕು ದಿನಗಳ ಕಾಲ ಕೃಷಿ ಹಾಗೂ ಸಾವಯವ ತರಕಾರಿ ಮೇಳ, ಸೀರೆ ಹಾಗೂ ವಿವಿಧ ಉಡುಪುಗಳ ಮೇಳ, ಇಲಾಖೆಗಳ ಮಾಹಿತಿ ಕೇಂದ್ರ ಹಾಗೂ ವಿವಿಧ ಉದ್ಯಮಗಳ ಮಾಹಿತಿ ಕೇಂದ್ರಗಳು ಆರಂಭಗೊಳ್ಳಲಿವೆ. ಗುಡಿ ಕೈಗಾರಿಕೆ ಹಾಗೂ ವಸ್ತುಗಳ ಪ್ರದರ್ಶನ ಇರಲಿದೆ. ಭಟ್ಕಳದಲ್ಲಿ ಆಹಾರ ಪದಾರ್ಥಕ್ಕೆ ಹೆಚ್ಚಿನ ಬೇಡಿಕೆ ಇರುವುದರಿಂದ ಆಹಾರ ಮೇಳದ ಜೊತೆಗೆ ಮತ್ಸ್ಯ ಮೇಳ ಆಯೋಜಿಸಿದ್ದೇವೆ. ಸ್ವದೇಶಿ ವಸ್ತುಗಳು, ಐಸ್ ಕ್ರೀಮ್, ಹಲಸಿನ ಮೇಳಗಳು ಹಾಗೂ ಮಕ್ಕಳಿಗಾಗಿ ಅಮ್ಯೂಸಮೆಂಟ ಪಾರ್ಕ್ ಗಳು ಭಟ್ಕಳ ಉತ್ಸವದಲ್ಲಿ ಕಾಣಸಿಗಲಿದೆ. ಪ್ರತಿ ದಿನ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಡಿಸೆಂಬರ್ 25ರಂದು ಸಂಜೆ 6:30ಕ್ಕೆ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಉದ್ಘಾಟನೆ ನಡೆಸಿ ಶುಭ ಹಾರೈಸಲಿದ್ದಾರೆ ಎಂದರು.
ಇದನ್ನು ಓದಿ: Clearance/ ರಂಗಿನಕಟ್ಟೆ ಅಶ್ವತ್ಥ ಕಟ್ಟೆ ತೆರವಿಗೆ ದಿನಾಂಕ ನಿಗದಿ
ಅಂದು ಸಂಜೆ 7 ಗಂಟೆಯಿಂದ ಸ್ಥಳೀಯ ಕಲಾವಿದರ ತಂಡವಾದ ಝೆಂಕಾರ ಮೆಲೋಡಿಸ್ ಅವರಿಂದ ಸುಗಮ ಸಂಗೀತ ಕಾರ್ಯಕ್ರಮ ನಡೆಯಲಿದೆ. ಸ್ಥಳೀಯರಿಗೆ ಹೆಚ್ಚಿನ ಪ್ರಾತಿನಿಧ್ಯ ಸಿಗುವ ಉದ್ದೇಶದಿಂದ ಝೆಂಕಾರ ಮೆಲೋಡಿಸ್ ಹಾಗೂ ಫ್ರೆಂಡ್ಸ್ ತಂಡಕ್ಕೆ ಎರಡು ದಿನಗಳ ಕಾರ್ಯಕ್ರಮದ ಜವಾಬ್ದಾರಿ ನೀಡಿದ್ದೇವೆ. ರಾಜ್ಯ ಮಟ್ಟದ ಟಿವಿ ರಿಯಾಲಿಟಿ ಶೋಗಳಲ್ಲಿ ಪಾಲ್ಗೊಂಡಿದ್ದ ಕಲಾವಿದರಿಂದ ಗಾಯನ ನಡೆಯಲಿದೆ. ನೃತ್ಯ ಪ್ರದರ್ಶನ, ಸಂಗೀತ ಪ್ರದರ್ಶನ ಕಾರ್ಯಕ್ರಮ ನಡೆಯಲಿದೆ’ ಎಂದು ತಿಳಿಸಿದರು.
ಇದನ್ನು ಓದಿ: Bomb threat/ ಭಟ್ಕಳ ತಹಶೀಲ್ದಾರ್ ಕಚೇರಿಗೆ ಬಾಂಬ್ ಬೆದರಿಕೆ
ಈ ಸಂದರ್ಭದಲ್ಲಿ ಭಟ್ಕಳ ಉತ್ಸವ ಸಮಿತಿಯ ಗೌರವ ಸಲಹೆಗಾರರಾದ ವೆಂಕಟೇಶ್ ನಾಯ್ಕ, ನಜೀರ್ ಕಾಶಿಂಜಿ, ಭಟ್ಕಳ ಉತ್ಸವ ಸಮಿತಿ ಮೇಳಗಳ ಸಂಯೋಜಕ ಶ್ರೀಧರ್ ಮರವಂತೆ, ಕ್ರಿಯಾಶೀಲ ಸಂಘದ ಗೌರವಾಧ್ಯಕ್ಷ ದೀಪಕ್ ನಾಯ್ಕ, ಮನಮೋಹನ್ ನಾಯ್ಕ, ಕ್ರಿಯಾಶೀಲ ಸಂಘದ ಕಾರ್ಯದರ್ಶಿ ಅರುಣ ನಾಯ್ಕ, ಪಾಂಡುರಂಗ ನಾಯ್ಕ, ದಿನೇಶ ನಾಯ್ಕ, ವೆಂಕಟೇಶ ಮೊಗೇರ, ವಿನಾಯಕ್ ನಾಯ್ಕ, ಅಶೋಕ ನಾಯ್ಕ ಮತ್ತಿತರರು ಇದ್ದರು. ವೆಂಕಟೇಶ ನಾಯ್ಕ, ಪಾಂಡುರಂಗ ನಾಯ್ಕ, ಮನಮೋಹನ ನಾಯ್ಕ, ಭವಾನಿಶಂಕರ ನಾಯ್ಕ, ಸುಧಾರಕ ನಾಯ್ಕ, ಈಶ್ವರ ನಾಯ್ಕ, ಪಾಂಡು ನಾಯ್ಕ ಆಸರಕೇರಿ, ನಜಿರ್ ಕಾಶಿಂಜಿ, ಪಾಂಡುರಂಗ ನಾಯ್ಕ, ಮುಂತಾದವರು ಉಪಸ್ಥಿತರಿದ್ದರು.
ಇದನ್ನು ಓದಿ: Golden chain/ ಕೋರಿಯರ್ ನೆಪದಲ್ಲಿ ಅಜ್ಜಿಯ ಚಿನ್ನದ ಸರ ಹರಿದು ಪರಾರಿ



