ಭಟ್ಕಳ: ತಾಲೂಕಿನ ಮುಟ್ಟಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಮರಂಬಳ್ಳಿಯ ಪುರಾತನ ಯೋಗನರಸಿಂಹ ದೇವಸ್ಥಾನಕ್ಕೆ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿ (Raghaveshwara Sri) ಭೇಟಿ ನೀಡಿ ದೇವರು ಹಾಗೂ ದೇವಸ್ಥಾನವನ್ನು ವೀಕ್ಷಿಸಿದರು.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಈ ಸಂದರ್ಭದಲ್ಲಿ ನೆರದ ಭಕ್ತರೊಂದಿಗೆ ಮಾತನಾಡಿದ ಅವರು, ಇದೊಂದು ಅತೀ ಪುರಾತನ ದೇವಸ್ಥಾನವಾಗಿದೆ. ಯೋಗನರಸಿಂಹ ಮೂರ್ತಿಯೂ ಸಹ ಅಪರೂಪದ್ದು. ಇದಕ್ಕೆ ದೊಡ್ಡ ಮಟ್ಟದಲ್ಲೇ ಜೀರ್ಣೋದ್ಧಾರದ ಅಗತ್ಯವಿದೆ. ರಾಜರ ಕಾಲದಲ್ಲಿ ದೇವಸ್ಥಾನ ಹೇಗೆ ಇತ್ತೋ ಅದೇ ರೀತಿ ದೇವಸ್ಥಾನ ಅಭಿವೃದ್ಧಿ ಆಗಬೇಕು. ದೇವಸ್ಥಾನದ ಅಭಿವೃದ್ಧಿಗೆ ತಮ್ಮ ಅಗತ್ಯ ಸಹಕಾರ ನೀಡುವುದಾಗಿ ಹೇಳಿದರು.

ಇದನ್ನು ಓದಿ: Raghaveshwara Shree/ ಶ್ರೀ ಕ್ಷೇತ್ರ ದೇವಿಮನೆಗೆ ರಾಘವೇಶ್ವರ ಶ್ರೀ ಆಗಮನ

ಶ್ರೀಗಳು (Raghaveshwara Sri) ದೇವಸ್ಥಾನದಲ್ಲಿ ಒಂದು ತಾಸಿಗೂ ಅಧಿಕ ಕಾಲ ಇದ್ದು ಪುರೋಹಿತರು ಮತ್ತು ಊರ ಜನರ ಬಳಿ ದೇವಸ್ಥಾನ ಬಗ್ಗೆ ಮಾತನಾಡಿದರು. ಅದರಂತೆ ಶ್ರೀಗಳು ಪುರಾತನ ಯೋಗ ನರಸಿಂಹ ದೇವಸ್ಥಾನ ವೀಕ್ಷಿಸಿ ಜೀರ್ಣೋದ್ಧಾರ ಕಾರ್ಯವನ್ನು ಯೋಗನರಸಿಂಹನೇ ಮಾಡಿಸಿಕೊಳ್ಳುತ್ತಾನೆ ಎಂದರು. ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಸಮಿತಿಯವರು, ಊರಿನ ಮುಖಂಡರು ಮುಂತಾದವರಿದ್ದರು.

ಇದನ್ನು ಓದಿ: Pallakki Utsava/ ಭಟ್ಕಳ ನಗರದಾದ್ಯಂತ ವೆಂಕಟರಮಣ ದೇವರ ಪಾಲಕಿ ಸಂಚಾರ