ಭಟ್ಕಳ: ತಾಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳ ನೌಕರರ ಕ್ರೀಡಾ ಒಕ್ಕೂಟದ ಆಶ್ರಯದಲ್ಲಿ ಪ್ರಥಮ ಬಾರಿಗೆ ಆಯೋಜಿಸಲಾದ “ಸಹಕಾರಿ ಕಪ್ (Cooperative Cup) 2026” ಕ್ರಿಕೆಟ್ ಪಂದ್ಯಾವಳಿ ಶಿರಾಲಿಯ ಜನತಾ ವಿದ್ಯಾಲಯದಲ್ಲಿ ಅತ್ಯಂತ ಯಶಸ್ವಿಯಾಗಿ ನೆರವೇರಿತು.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಭಟ್ಕಳ (Bhatkal) ತಾಲೂಕಿನ ವಿವಿಧ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳ ತಂಡಗಳು ಈ ಪಂದ್ಯಾವಳಿಯಲ್ಲಿ ಉತ್ಸಾಹದಿಂದ ಭಾಗವಹಿಸಿದ್ದು, ಕ್ರೀಡಾಭಿಮಾನಿಗಳಿಗೆ ರೋಚಕ ಪಂದ್ಯಗಳನ್ನು ನೀಡಿದವು. ಅಂತಿಮ ಪಂದ್ಯದಲ್ಲಿ ಅದ್ಭುತ ಆಟ ಪ್ರದರ್ಶಿಸಿದ ಜಿ.ವಿ.ಎಸ್.ಎಸ್. ಕಾಯ್ಕಿಣಿ ತಂಡವು ಪ್ರಥಮ ಸ್ಥಾನ ಪಡೆದು ಸಹಕಾರಿ ಕಪ್ (Cooperative Cup) ೨೦೨೬ರ ಚಾಂಪಿಯನ್ ಆಗಿ ಹೊರಹೊಮ್ಮಿತು. ಉತ್ತಮ ಹೋರಾಟ ನೀಡಿದ ಕೆ.ಡಿ.ಸಿ.ಸಿ. ಭಟ್ಕಳ ತಂಡವು ದ್ವಿತೀಯ ಸ್ಥಾನವನ್ನು ಗಳಿಸಿತು.

ಇದನ್ನು ಓದಿ: national level/ ರಾಷ್ಟ್ರಮಟ್ಟದಲ್ಲಿ ಮೊದಲ ಸ್ಥಾನ ಪಡೆದ ವಿದ್ಯಾಂಜಲಿ ಶಾಲೆಯ ವಿದ್ಯಾರ್ಥಿ

ವೈಯಕ್ತಿಕ ಸಾಧನೆಗಳಲ್ಲಿ ಶ್ರೇಷ್ಠ ಬ್ಯಾಟ್ಸ್‌ಮನ್ ಪ್ರಶಸ್ತಿ – ಮಾರುತಿ ಗೊಂಡ (ಕೆ.ಡಿ.ಸಿ. ಸಿ. ಭಟ್ಕಳ), ಶ್ರೇಷ್ಠ ಬೌಲರ್ ಪ್ರಶಸ್ತಿ – ಪ್ರವೀಣ ನಾಯ್ಕ (ವಿ.ಎಸ್.ಎಸ್. ಭಟ್ಕಳ), ಪ್ಲೇಯರ್ ಆಫ್ ದ ಸೀರಿಸ್ ಪ್ರಶಸ್ತಿ – ಅಕ್ಷಯ ದೇವಾಡಿಗ ( ಜಿ.ವಿ.ಎಸ್.ಎಸ್. ಕಾಯ್ಕಿಣಿ) ಅವರಿಗೆ ಲಭಿಸಿತು.

ಇದನ್ನು ಓದಿ: grand welcome/ ಹುಟ್ಟೂರಿಗೆ ಬಂದ ಹೆಮ್ಮೆಯ ಸೈನಿಕಗೆ ಅದ್ದೂರಿ ಸ್ವಾಗತ 

ಸಹಕಾರಿ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ನೌಕರರಲ್ಲಿ ಸ್ನೇಹಭಾವ, ಒಗ್ಗಟ್ಟು, ಆರೋಗ್ಯಕರ ಜೀವನಶೈಲಿ ಹಾಗೂ ಕ್ರೀಡಾಸ್ಫೂರ್ತಿ ಬೆಳೆಸುವ ಉದ್ದೇಶದಿಂದ ಈ ಪಂದ್ಯಾವಳಿಯನ್ನು ಆಯೋಜಿಸಲಾಗಿತ್ತು. “ಸಹಕಾರದಿಂದ ಸೇವೆ– ಸ್ನೇಹದಿಂದ ಕ್ರೀಡೆ” ಎಂಬ ಧ್ಯೇಯವಾಕ್ಯವನ್ನು ಸಾಕಾರಗೊಳಿಸಿದ ಈ ಪಂದ್ಯಾವಳಿ ಎಲ್ಲರ ಪ್ರಶಂಸೆಗೆ ಪಾತ್ರವಾಯಿತು.

ಇದನ್ನು ಓದಿ: Farewell/ ಸೇವಾ ನಿವೃತ್ತಿಯಾದ ಮುಖ್ಯ ಶಿಕ್ಷಕಗೆ ಬೀಳ್ಕೊಡುಗೆ 

ಸಮಾರೋಪ ಸಮಾರಂಭದಲ್ಲಿ ವಿಜೇತ ಹಾಗೂ ರನ್ನರ್‌ಅಪ್ ತಂಡಗಳಿಗೆ ಬಹುಮಾನ ವಿತರಣೆ ಮಾಡಲಾಯಿತು. ಭಟ್ಕಳ ತಾಲೂಕಿನ ಸಹಕಾರಿ ಸಂಘಗಳ ಇತಿಹಾಸದಲ್ಲಿ ಹೊಸ ಮೈಲಿಗಲ್ಲಾಗಿರುವ “ಸಹಕಾರಿ ಕಪ್” ಮುಂದಿನ ವರ್ಷಗಳಲ್ಲಿ ಇನ್ನೂ ಭವ್ಯವಾಗಿ ಆಯೋಜಿಸುವ ಆಶಯವನ್ನು ಸಂಘದ ಪದಾಧಿಕಾರಿಗಳು ವ್ಯಕ್ತಪಡಿಸಿದರು.

ಇದನ್ನು ಓದಿ: Tribute/ ಎಲ್ ಎಸ್ ನಾಯ್ಕರ ಶ್ರದ್ಧಾಂಜಲಿ ಸಭೆ