ಭಟ್ಕಳ: ತಾಲೂಕಿನಲ್ಲಿ ಗಾಂಜಾದ ಘಮಲು ಹೆಚ್ಚುತ್ತಿದ್ದು, ಒಂದೇ ದಿನ ಗಾಂಜಾ (ganja) ಸೇವಿಸಿದ ಮೂವರ ವಿರುದ್ಧ ಭಟ್ಕಳ (Bhatkal) ತಾಲೂಕಿನಲ್ಲಿ ಪ್ರಕರಣ ದಾಖಲಾಗಿರುವುದು ಇದಕ್ಕೆ ಪುಷ್ಠಿ ನೀಡಿದೆ. ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಎರಡು ಪ್ರಕರಣ ದಾಖಲಾಗಿದ್ದರೆ, ಶಹರ ಪೊಲೀಸ್ ಠಾಣೆಯಲ್ಲಿ ಒಂದು ದೂರು ದಾಖಲಾಗಿದೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯ ಪಿಎಸೈ ಭರಮಪ್ಪ ಬೆಳಗಲಿ ಭಟ್ಕಳ ತಾಲೂಕಿನ ಬೆಳಲಖಂಡದ ಗುಳ್ಮಿ ನಿವಾಸಿ ಕೂಲಿ ಕಾರ್ಮಿಕ ಮಹಮ್ಮದ್ ಹುಸೇನ ಸೈಯ್ಯದ ಅಲ್ಲಾವುದ್ದೀನ್ (೫೬) ಎಂಬುವರನ್ನು ವಶಕ್ಕೆ ಪಡೆದಿದ್ದಾರೆ. ಏ ೧ರಂದು ಸಂಜೆ ೫.೪೦ ಗಂಟೆಯ ಸುಮಾರಿಗೆ ಗುಳ್ಮಿ-ಬೆಳಲಖಂಡ ರಸ್ತೆಯ ಸಾರ್ವಜನಿಕ ಸ್ಥಳದಲ್ಲಿ ಯಾವುದೋ ಮಾದಕ ವಸ್ತು ಸೇವನೆ ಮಾಡಿ ಅಮಲಿನಲ್ಲಿ ವಿಚಿತ್ರವಾಗಿ ವರ್ತಿಸುತ್ತಿರುವುದನ್ನು ನೋಡಿ ಅವರನ್ನು ಮಾತನಾಡಿಸಿದಾಗ, ಬಾಯಿಯಿಂದ ಗಾಂಜಾ ನಮೂನೆಯ ಘಾಟು ವಾಸನೆ ಬರುತ್ತಿದ್ದರಿಂದ ವಶಕ್ಕೆ ಪಡೆದಿದ್ದಾರೆ. ವಿಚಾರಣೆ ಮಾಡಿದಾಗ ಗಾಂಜಾ ಸೇವನೆ ಮಾಡಿರುವ ಬಗ್ಗೆ ಒಪ್ಪಿಕೊಂಡಿರುವುದರಿಂದ, ಭಟ್ಕಳ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ ನಡೆಸಲಾಗಿ ದೃಢಪಟ್ಟಿತ್ತು.

Fisherman/ ಅಳ್ವೆಕೋಡಿಯಲ್ಲಿ ಬೋಟಿನಿಂದ ಬಿದ್ದು ಮೀನುಗಾರ ಸಮುದ್ರಪಾಲು

ಇನ್ನೊಬ್ಬ, ಭಟ್ಕಳದ ಆಜಾದ್ ನಗರದ ಶಿರಸಿ ತಾಲೂಕಿನ ಕಸ್ತೂರಬಾ ನಗರ ಮೂಲದ ಮಲೀಕ ರೆಹಾನ ಅಬ್ದುಲ್ ರಶೀದ (೨೭) ಪಿಎಸೈ ಭರಮಪ್ಪ ಬೆಳಗಲಿ ಕೈಗೆ ಸಿಕ್ಕಿಬಿದ್ದಿದ್ದಾರೆ. ಗಾರೆ ಕೆಲಸ ಮಾಡುವ ಇವರನ್ನು ಏ ೧ರಂದು ಸಂಜೆ ೬.೪೫ರ ಸುಮಾರಿಗೆ ಗಾಂಧಿನಗರದ ಶಮ್ಸ್ ಶಾಲೆಯ ಎದುರಿನ ಸಾರ್ವಜನಿಕ ಸ್ಥಳದಲ್ಲಿ ವಶಕ್ಕೆ ಪಡೆಯಲಾಗಿದೆ.

Green flag/ ಹಸಿರು ಬಾವುಟ ವಿವಾದ: ಕಾನೂನು ಕ್ರಮಕ್ಕೆ ಒತ್ತಾಯ

ಭಟ್ಕಳ ಶಹರ ಪೊಲೀಸ್ ಠಾಣೆಯ ಪಿಎಸೈ ತಿಮ್ಮಪ್ಪ ಎಸ್ ಅವರು ಮುಂಬೈ (Mumbai) ಮೂಲದ ಇರ್ಪಾನ್ ಅಜ್ವರ್ ಖಾನ್ (೨೮) ಎಂಬುವವರನ್ನು ವಶಕ್ಕೆ ಪಡೆದಿದ್ದಾರೆ. ಭಟ್ಕಳದ ಅಲ್ ಬೇಕ್ ರೆಸ್ಟೋರೆಂಟ್‌ನಲ್ಲಿ ಕೆಲಸಕ್ಕಿರುವ ಇವರು ಸೆಂಟ್ರಲ್ ಲಾಡ್ಜನಲ್ಲಿ ವಾಸಿಸುತ್ತಿದ್ದಾರೆ. ಏ ೧ರಂದು ಮಧ್ಯಾಹ್ನ ೧೨-೩೦ ಗಂಟೆಗೆ ಭಟ್ಕಳದ ಹಳೇ ಬಸ್ ನಿಲ್ದಾಣದ ಹತ್ತಿರ ಇವರನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಲಾಗಿದೆ.

Bhatkal Municipal Commissioner/ ಭಟ್ಕಳ‌ ನಗರಸಭೆ ಪೌರಾಯುಕ್ತರಾಗಿ ಬಾಬಾ ಸಾಹೇಬ್ ಮಾನೆ ಅಧಿಕಾರ ಸ್ವೀಕಾರ