ಭಟ್ಕಳ: ತಾಲೂಕಿನ ಹೆಬಳೆಯ ಹೆರಿಕೇರಿ ಗ್ರಾಮದಲ್ಲಿ ತೆಂಗಿನ ಮರದಿಂದ ಬಿದ್ದು ಗಾಯಗೊಂಡಿದ್ದ ವೃದ್ಧ ನೋವನ್ನು ಸಹಿಸಲಾಗದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಕುರಿತು ಭಟ್ಕಳ (Bhatkal) ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ (case filed).
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ತಿಮ್ಮಪ್ಪ ಬಡ್ಕ ಗೊಂಡ(೭೪) ಮೃತರು. ಅವರು ತೆಂಗಿನ ಕಾಯಿ ಕೊಯ್ಯುವ ಕೆಲಸ ಮಾಡುತ್ತಿದ್ದು, ಇತ್ತೀಚೆಗೆ ಮರದಿಂದ ಕೆಳಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದರು. ಗಾಯಗಳಿಂದ ಉಂಟಾದ ನೋವು ಹೆಚ್ಚಾಗುತ್ತಿದ್ದಂತೆ ಮನನೊಂದು, ಮನೆಯಲ್ಲಿದ್ದ ಸರ್ಜಿಕಲ್ ಸ್ಪಿರಿಟ್ ಸೇವಿಸಿರುವುದಾಗಿ ತಿಳಿದುಬಂದಿದೆ.
PUC result/ ಮುರುಡೇಶ್ವರದ ಆರ್ ಎನ್ ಶೆಟ್ಟಿ ಪದವಿ ಪೂರ್ವ ಕಾಲೇಜು ಸಾಧನೆ
ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದರೂ, ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ. ಈ ಸಂಬಂಧ ಮೃತರ ಸಹೋದರ ಸುಬ್ರಹ್ಮಣ್ಯ ಬಡ್ಕ ಗೊಂಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು (case filed) ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
Pallakki Utsava/ ಮುಂಡಳ್ಳಿ ಅಮ್ಮನವರ ಅಷ್ಟಬಂಧದಲ್ಲಿ ಸಾಂಗವಾಗಿ ನೆರವೇರಿದ ಪಲ್ಲಕ್ಕಿ ಉತ್ಸವ



