ಭಟ್ಕಳ: ವಿದೇಶದಲ್ಲಿ ಉದ್ಯೋಗ (job abroad) ಕೊಡಿಸುವುದಾಗಿ ವಂಚಿಸಿರುವ ಬಗ್ಗೆ ಭಟ್ಕಳ (Bhatkal) ಶಹರ ಪೊಲೀಸ್ ಠಾಣೆಯಲ್ಲಿ (police station) ಮೂವರ ವಿರುದ್ಧ ಪ್ರಕರಣ ದಾಖಲಾಗಿದೆ (case filed).
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಭಟ್ಕಳ ತಾಲೂಕಿನ ಮುರುಡೇಶ್ವರ (Murudeshwara) ಕಾಯ್ಕಿಣಿಯ ಜನತಾ ಕಾಲೋನಿ ನಿವಾಸಿ ಅನಿಲ ತಂದೆ ಮಂಜಯ್ಯ ನಾಯ್ಕ (೨೪) ವಂಚನೆಗೆ ಒಳಗಾದವರು. ಭಟ್ಕಳದ ಮಗ್ದುಂ ಕಾಲನಿ ೬ನೇ ಕ್ರಾಸ್ ನಿವಾಸಿ ಮಹಮದ್ ಅಯೂಬ್ ಅಲಿ ತಂದೆ ಮೌಲ್ವಿ ಅಮೀರ ಅಲಿ, ಉಮರ್ ಸ್ಟ್ರೀಟ್ ನಿವಾಸಿ ಅಬ್ದುಲ್ ಮುತಾಲಿಬ್ ಕುಂದನಗೂಡ ಮತ್ತು ಭಟ್ಕಳದ ಅಲ್ತಾಫ್ ವಿರುದ್ಧ ಪ್ರಕರಣ ದಾಖಲಾಗಿದೆ.
Karate Tournament/ ನಾಗಶ್ರೀ ಮಾರ್ಷಲ್ ಆರ್ಟ್ಸ್ ಕರಾಟೆ ವಿದ್ಯಾರ್ಥಿಗಳ ಅಮೋಘ ಸಾಧನೆ
ದೂರಿನಲ್ಲಿ ತಿಳಿಸಿರುವಂತೆ, ವೃತ್ತಿಯಲ್ಲಿ ಕ್ಲೀನರ್ ಆಗಿರುವ ಅನಿಲ ನಾಯ್ಕ ಅವರಿಂದ ಆರೋಪಿಗಳು ವಿದೇಶದಲ್ಲಿ ಉದ್ಯೋಗ (job abroad) ಕೊಡಿಸುತ್ತೇನೆ ಅಂತಾ ಹೇಳಿ ೨,೪೯,೦೦೦ ರೂ ಹಾಗೂ ಪಾಸಪೋರ್ಟನ್ನು ಪಡೆಡಿದ್ದಾರೆ. ಆದರೆ ಈವರೆಗೆ ಉದ್ಯೋಗವನ್ನು ಕೊಡಿಸದೆ, ಹಣವನ್ನು ಹಾಗೂ ಪಾಸಪೋರ್ಟನ್ನು ವಾಪಾಸ್ ಮಾಡದೆ ನಕಲಿ ಉದ್ಯೋಗದ ದಾಖಲಾತಿಗಳನ್ನು ತೋರಿಸಿ ಮೋಸ ಮಾಡಿದ್ದಾರೆ ಎಂದು ದೂರಲಾಗಿದೆ.
passes away/ ಜಾಲಿ ನಾಮಧಾರಿ ಸಮಾಜದ ಮುಖಂಡ ಸುಬ್ರಾಯ ದುರ್ಗಪ್ಪ ನಾಯ್ಕ ನಿಧನ


