ಭಟ್ಕಳ: ಎರಡು ತಿಂಗಳ ಮೀನುಗಾರಿಕೆ (fishing) ವಿರಾಮದ ಬಳಿಕ ಸಮುದ್ರಕ್ಕಿಳಿದು ಮೀನುಗಾರಿಕೆ ಚಟುವಟಿಕೆ ಪುನರಾರಂಭಿಸಲು ಪರ್ಷಿಯನ್ ಬೋಟ್ (Persian boat) ಮಾಲೀಕರು ಹಾಗೂ ಮೀನುಗಾರರು (fishermen) ಸಜ್ಜಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಮೀನುಗಾರಿಕೆ ಸುಗಮವಾಗಿ ನಡೆಯಬೇಕು, ಬೋಟ್‌ಗಳು ಸುರಕ್ಷಿತವಾಗಿ ಸಂಚರಿಸಬೇಕು ಎಂಬ ಸಂಕಲ್ಪದೊಂದಿಗೆ ಸಮುದ್ರ ಪೂಜೆ (Sea Worship) ನೆರವೇರಿಸಿದರು.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಭಟ್ಕಳ (Bhatkal) ಬಂದರು (port) ಪ್ರದೇಶದ ಸಮುದ್ರ ದಂಡೆಯಲ್ಲಿ (seashore) ಪರ್ಷಿಯನ್ ಬೋಟ್ ಸಂಘದ ವತಿಯಿಂದ ಭಕ್ತಿಭಾವದಿಂದ ಸಮುದ್ರ ಪೂಜೆ (sea worship) ನಡೆಯಿತು. ಮೀನುಗಾರಿಕೆ ಆರಂಭಿಸುವ ಮುನ್ನ ಸಮುದ್ರರಾಜನಿಗೆ ಪೂಜೆ ಸಲ್ಲಿಸಿ, ಸಮುದ್ರದಲ್ಲಿ ಸುರಕ್ಷಿತವಾಗಿ ಸಂಚರಿಸುವಂತೆ ಹಾಗೂ ಮೀನುಗಾರರಿಗೆ ಯಾವುದೇ ರೀತಿಯ ತೊಂದರೆ ಎದುರಾಗದಂತೆ ಪ್ರಾರ್ಥಿಸಲಾಯಿತು.

selected/ ಭಟ್ಕಳ ಎಜುಕೇಶನ್ ಟ್ರಸ್ಟ್ ಅಧ್ಯಕ್ಷರಾಗಿ ಸುರೇಂದ್ರ ಶಾನಭಾಗ ನೇಮಕ

ಬಂದರು ಕುಟುಮೇಶ್ವರ ದೇವಸ್ಥಾನದ ಪುರೋಹಿತ ಮಂಜುನಾಥ ಭಟ್ ನೇತೃತ್ವದಲ್ಲಿ ಧಾರ್ಮಿಕ ವಿಧಿವಿಧಾನಗಳು ನೆರವೇರಿದವು. ಸಮುದ್ರದ ದಂಡೆಯ ಮರಳಿನಲ್ಲಿ ಕಲಶ ಪ್ರತಿಷ್ಠಾಪಿಸಿ, ರುದ್ರ ಪಠಣದೊಂದಿಗೆ ಸಮುದ್ರರಾಜ ಹಾಗೂ ಪರಮೇಶ್ವರನಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ನಂತರ ವಿವಿಧ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿ ಸಮುದ್ರಕ್ಕೆ ಪೂಜೆ ಸಲ್ಲಿಸಲಾಯಿತು.

Murudeshwar/ ಮುರುಡೇಶ್ವರದಲ್ಲಿ ಇಬ್ಬರು ಪೊಲೀಸರ ಮೇಲೆ ಹಲ್ಲೆ: ಆಸ್ಪತ್ರೆಗೆ ದಾಖಲು

ಪರ್ಷಿಯನ್ ಬೋಟ್ ಸಂಘದ ಅಧ್ಯಕ್ಷ ಭಾಸ್ಕರ ದುರ್ಗಯ್ಯ ಖಾರ್ವಿ ಪೂಜಾ ವಿಧಿವಿಧಾನಗಳನ್ನು ನೆರವೇರಿಸಿದರು. ಸಮುದ್ರರಾಜನಿಗೆ ಎಳನೀರು, ಹಾಲು, ಹಣ್ಣು, ಸಕ್ಕರೆ ಹಾಗೂ ಖರ್ಜೂರದಿಂದ ತಯಾರಿಸಿದ ಫಲಪಂಚಾಮೃತದಿಂದ ಅಭಿಷೇಕ ಮಾಡಲಾಯಿತು. ಬಳಿಕ ನೈವೇದ್ಯ ಅರ್ಪಿಸಿ, ಪ್ರಾರ್ಥಿಸಲಾಯಿತು.

BSc course/ ಭಟ್ಕಳದ ಸುಧೀಂದ್ರ ಕಾಲೇಜಿನಲ್ಲಿ ಫೋರೆನ್ಸಿಕ್ ಸೈನ್ಸ್ ಬಿಎಸ್ಸಿ ಕೋರ್ಸ್‌ ಆರಂಭ

ಮೀನುಗಾರಿಕೆ ಎಂಬುದು ಸಮುದ್ರವನ್ನು ಅವಲಂಬಿಸಿರುವ ಸಾವಿರಾರು ಕುಟುಂಬಗಳ ಜೀವನಾಧಾರವಾಗಿದ್ದು, ಪ್ರತಿವರ್ಷ ಮೀನುಗಾರಿಕೆ ಆರಂಭಿಸುವ ಮುನ್ನ ಸಮುದ್ರಕ್ಕೆ ಪೂಜೆ ಸಲ್ಲಿಸುವುದು ಇಲ್ಲಿನ ಮೀನುಗಾರರ ಪ್ರಮುಖ ಧಾರ್ಮಿಕ ಆಚರಣೆಯಾಗಿದೆ. ಇದಕ್ಕೂ ಮೊದಲು ಪ್ರತಿ ವರ್ಷದಂತೆ ಶೃಂಗೇರಿ (Sringeri)  ಶಾರದಾ ಪೀಠದ (Sharada Peetha) ಜಗದ್ಗುರು ಶ್ರೀ ಭಾರತಿ ತೀರ್ಥ ಸ್ವಾಮಿ ಹಾಗೂ ವಿಧುಶೇಖರ ಶ್ರೀಗಳ ಆಶೀರ್ವಾದವನ್ನು ಪಡೆಯಲಾಗಿದೆ ಎಂದು ಸಂಘದ ಪದಾಧಿಕಾರಿಗಳು ತಿಳಿಸಿದರು.

Ministerial post/ ‘ಬಾಳೆ ಎಲೆ ಹಾಕಿ ಊಟ ಬಡಿಸಿ, ಕೊನೆಯಲ್ಲಿ ಇದು ನಿಮ್ಮದಲ್ಲ ಎಂದಂತಾಗಿದೆ’