ಭಟ್ಕಳ: ವಾಲಿಬಾಲ್ ಪಂದ್ಯಾವಳಿಯ ( volleyball tournament) ಆಯೋಜನೆಯ ಬಳಿಕ ಉಳಿದ ೨೫೦೦೦ ರೂ ಹಣವನ್ನು ಶಾಲೆಯೊಂದಕ್ಕೆ ಪ್ರಾಜೆಕ್ಟರ್ ನೀಡುವ ಮೂಲಕ ಆಯೋಜಕರು ಅತ್ಯಂತ ಶ್ಲಾಘನೀಯ ಮತ್ತು ಸಮಾಜಮುಖಿ ಕಾರ್ಯ (Social work) ಮಾಡಿದ್ದಾರೆ.
Karate Championship/ ಉಡುಪಿಯಲ್ಲಿ ಕರಾಟೆ ಚಾಂಪಿಯನ್ಶಿಪ್: ಭಟ್ಕಳದ ನಾಗಶ್ರೀ ವಿದ್ಯಾರ್ಥಿಗಳ ಸಾಧನೆ
ಹೌದು, ಕಳೆದ ಮೂರು ವರ್ಷದ ಹಿಂದೆ ವಾಲಿಬಾಲ್ ಆಟಗಾರನಾದ ದಾಮು ಮೃತಪಟ್ಟ ತನ್ನ ಸ್ನೇಹಿತನ ನೆನಪಿಗಾಗಿ ಆತನ ನಾಲ್ಕು ಜನ ಸ್ನೇಹಿತರಾದ ಶೇಖರ, ಗಿರೀಶ, ಗಣಪತಿ, ವಾಸು “ದಾಮು ಟ್ರೋಫಿ” ಎಂಬ ವಾಲಿಬಾಲ್ ಪಂದ್ಯಾವಳಿ ಆಯೋಜನೆ ಮಾಡಿದ್ದರು. ಪಂದ್ಯಾವಳಿ ಮುಗಿದ ಬಳಿಕ ಅದರಿಂದ ಉಳಿದ ೨೫,೦೦೦ ರೂ ಹಣವನ್ನು ಆ ಊರಿನ ಅತ್ತಿಬಾರ್ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಗೆ (government school) ವಿದ್ಯಾರ್ಥಿಗಳ ಶಿಕ್ಷಣಕ್ಕೆ ಅನುಕೂಲವಾಗುವ ಉದ್ದೇಶಕ್ಕೆ ಪ್ರಾಜೆಕ್ಟರ್ ( projector) ನೀಡಿ ಶಿಕ್ಷಣಕ್ಕೆ ಉತ್ತೇಜನೆ ಮಾಡಿದ್ದಾರೆ. ಪ್ರಾಜೆಕ್ಟರನ್ನು ಶಾಲೆಯ ಮುಖ್ಯ ಶಿಕ್ಷಕ ಅರವಿಂದ ನಾಯ್ಕ, ಎಸ್ಡಿಎಂಸಿ ಅಧ್ಯಕ್ಷ ಹಾಗೂ ಸಹ ಶಿಕ್ಷಕ ಮಂಜುನಾಥ ನಾಯ್ಕ ಸಮ್ಮುಖದಲ್ಲಿ ಹಸ್ತಾಂತರಿಸಿದ್ದಾರೆ (Social work).
Passenger shelter/ ತೆರ‍್ನಮಕ್ಕಿಯಲ್ಲಿ ಪ್ರಯಾಣಿಕರ ತಂಗುದಾಣ ಲೋಕಾರ್ಪಣೆ


