ಭಟ್ಕಳ: ಮನೆಯಲ್ಲಿ ಯಾರು ಇಲ್ಲದಾಗ ಶೆಡ್ಡಿನಲ್ಲಿ ನಿಲ್ಲಿಸಿದ್ದ ಸ್ಕೂಟಿಯನ್ನು ಯಾರೋ ಕಳ್ಳತನ ಮಾಡಿಕೊಂಡು (Scooty stolen) ಹೋಗಿರುವ ಬಗ್ಗೆ ಮುರುಡೇಶ್ವರ (Murudeshwar) ಪೊಲೀಸ್ ಠಾಣೆಯಲ್ಲಿ (police station) ಪ್ರಕರಣ ದಾಖಲಾಗಿದೆ (complaint registered). ಭಟ್ಕಳ ತಾಲೂಕಿನ ತೆರ್ನಮಕ್ಕಿಯ ಜನತಾ ಕಾಲೋನಿಯ ಈಶ್ವರ ತಂದೆ ಈರಾ ನಾಯ್ಕ (೫೦) ದೂರು ದಾಖಲಿಸಿದವರು (case registered).
Social work/ ವಾಲಿಬಾಲ್ ಪಂದ್ಯಾವಳಿ ನಡೆಸಿ ಪ್ರೊಜೆಕ್ಟರ್ ತಂದ ಯುವಕರು
ಚಾಲಕ ವೃತ್ತಿಯ ಈಶ್ವರ ನಾಯ್ಕ ಅವರು ಓಡಾಡಲು ಅಂತ ೮ ವರ್ಷಗಳ ಹಿಂದೆ ಸ್ಕೂಟಿಯನ್ನು ಖರೀದಿ ಮಾಡಿದ್ದರು. ಆಗಸ್ಟ್ ೧೪ರಂದು ಅವರ ಹೆಂಡತಿಯ ಅಕ್ಕಳಾದ ಸೀತಾ ರಾಮಚಂದ್ರ ನಾಯ್ಕಇವರ ಮನೆಯ ಗೃಹ ಪ್ರವೇಶ ಕಾರ್ಯಕ್ರಮ (housewarming ceremony) ಇದ್ದುದರಿಂದ ಅವರು ತಮ್ಮ ಹೆಂಡತಿ ಹಾಗೂ ದೊಡ್ಡ ಮಗ ಸೇರಿ ಆ ೧೦ರಂದು ಬೆಳಿಗ್ಗೆ ೧೦ ಗಂಟೆಯ ಸಮಯಕ್ಕೆ ಮೂಡ ಶಿರಾಲಿಗೆ ಹೋಗಿದ್ದರು. ಅವರ ಸಣ್ಣ ಮಗನಾದ ನಾಗೇಂದ್ರ ನಾಯ್ಕ ಮನೆಯಲ್ಲಿ ಉಳಿದಿದ್ದರು. ನಂತರ ಅವರು ಕೂಡ ಮರುದಿನ ಬೆಳಿಗ್ಗೆ ೧೧ ಗಂಟೆಯ ಸಮಯಕ್ಕೆ ಸ್ಕೂಟಿಯನ್ನು ತಮ್ಮ ಮನೆಯ ಶೆಡ್ಡಿನಲ್ಲಿ ನಿಲ್ಲಿಸಿ ಮೂಡ ಶಿರಾಲಿಗೆ ಬಂದಿದ್ದರು. ನಂತರ ಅಲ್ಲಿಂದ ಮರಳಿ ಮಧ್ಯಾಹ್ನ ೩ ಗಂಟೆಯ ಸಮಯಕ್ಕೆ ಮನೆಗೆ ಬಂದು ನೋಡಿದಾಗ ಮನೆಯ ಶೆಡ್ಡಿನಲ್ಲಿ ನಿಲ್ಲಿಸಿದ ಸ್ಕೂಟಿ ಸ್ಥಳದಲ್ಲಿ ಇರಲಿಲ್ಲ ಎಂದು ಮುರುಡೇಶ್ವರ (Murudeshwar) ಪೊಲೀಸ್ ಠಾಣೆಯಲ್ಲಿ ದಾಖಲಿಸಿರುವ ದೂರಿನಲ್ಲಿ ತಿಳಿಸಲಾಗಿದೆ.
Karate Championship/ ಉಡುಪಿಯಲ್ಲಿ ಕರಾಟೆ ಚಾಂಪಿಯನ್ಶಿಪ್: ಭಟ್ಕಳದ ನಾಗಶ್ರೀ ವಿದ್ಯಾರ್ಥಿಗಳ ಸಾಧನೆ


