ಭಟ್ಕಳ: ಕೇಂದ್ರ ಸರ್ಕಾರದ (central government) ನಿರ್ದೇಶನದಂತೆ ರಾಜ್ಯದಲ್ಲಿ ಆಗಸ್ಟ್ (August) ಮತ್ತು ಸೆಪ್ಟೆಂಬರ್ (September) ತಿಂಗಳ ಪಡಿತರ ಆಹಾರಧಾನ್ಯವನ್ನು (ration) ಒಂದೇ ಅವಧಿಯಲ್ಲಿ ವಿತರಿಸಲಾಗುತ್ತಿದ್ದು, ಪಡಿತರ ಪಡೆಯಲು ಎರಡು ಬಾರಿ ಬೆರಳಚ್ಚು (biometric) ನೀಡಬೇಕಾದ ಪರಿಸ್ಥಿತಿ ಎದುರಾಗಿದೆ. ಆದರೆ ಪಡಿತರ ವಿತರಣೆಗೆ (Ration distribution) ಅಗತ್ಯವಿರುವ ಸರ್ವರ್ ಪದೇಪದೇ ಕೈಕೊಡುತ್ತಿರುವುದರಿಂದ ಪಡಿತರದಾರರು ಹಾಗೂ ನ್ಯಾಯಬೆಲೆ ಅಂಗಡಿಕಾರರು (shop owners) ತೀವ್ರ ತೊಂದರೆ ಅನುಭವಿಸುವಂತಾಗಿದೆ.
Devaraj Urs/ ದೇವರಾಜ ಅರಸು ಜನ್ಮದಿನಾಚರಣೆ
ರಾಷ್ಟ್ರೀಯ ಆಹಾರ ಭದ್ರತಾ ಯೋಜನೆಯಡಿ ಎರಡು ತಿಂಗಳ ಪಡಿತರವನ್ನು ಒಂದೇ ಅವಧಿಯಲ್ಲಿ ವಿತರಿಸುವ ವ್ಯವಸ್ಥೆ ಜಾರಿಯಲ್ಲಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಪಾಲಿನ ಪಡಿತರವನ್ನು ಪಡೆಯಲು ಪ್ರತ್ಯೇಕವಾಗಿ ಬಯೋಮೆಟ್ರಿಕ್ ಪ್ರಕ್ರಿಯೆ ನಡೆಸಬೇಕಾಗಿರುವುದರಿಂದ ಸರ್ವರ್ ಸಮಸ್ಯೆ (server problem) ಮತ್ತಷ್ಟು ಬಿಗಡಾಯಿಸಿದೆ. ನ್ಯಾಯಬೆಲೆ ಅಂಗಡಿಗಳಿಗೆ ತೆರಳುವ ಪಡಿತರದಾರರು ತಮ್ಮ ಕೆಲಸ ಕಾರ್ಯಗಳನ್ನು ಬದಿಗೊತ್ತಿ ಗಂಟೆಗಟ್ಟಲೆ ಸರದಿ ಸಾಲಿನಲ್ಲಿ ಕಾಯಬೇಕಾದ ಸ್ಥಿತಿ ನಿರ್ಮಾಣವಾಗಿದೆ.
Impact/ ‘ಭಟ್ಕಳ ಡೈರಿ’ ವರದಿ ಫಲಶ್ರುತಿ: ತ್ಯಾಜ್ಯ ತೆರವುಗೊಳಿಸಿದ ಭಟ್ಕಳ ನಗರಸಭೆ
ಉತ್ತರ ಕನ್ನಡ (Uttara Kannada) ಜಿಲ್ಲೆಯಲ್ಲಿ ವಿಶೇಷ ವಿತರಣೆಯಡಿ ೧೫,೮೧೮ ಅಂತ್ಯೋದಯ (APL) ಪಡಿತರ ಚೀಟಿದಾರರಿಗೆ ಪ್ರತಿ ಕಾರ್ಡಿಗೆ ೩೫+೩೫ ಕೆಜಿ ಸೇರಿ ಒಟ್ಟು ೭೦ ಕೆಜಿ ಉಚಿತ ಅಕ್ಕಿ ವಿತರಿಸಲಾಗುತ್ತಿದೆ. ಇದೇ ವೇಳೆ ೨,೮೮,೮೩೩ ಆದ್ಯತಾ (BPL) ಪಡಿತರ ಚೀಟಿಗಳ ಪ್ರತಿ ಸದಸ್ಯರಿಗೆ ೫+೫ ಕೆಜಿ ಸೇರಿ ಒಟ್ಟು ೧೦ ಕೆಜಿ ಅಕ್ಕಿ ಹಂಚಿಕೆ ಮಾಡಲಾಗುತ್ತಿದೆ (Ration distribution). ಜಿಲ್ಲೆಯಾದ್ಯಂತ ಪಡಿತರ ವಿತರಣೆ ಭರದಿಂದ ಸಾಗುತ್ತಿದ್ದರೂ, ತಾಂತ್ರಿಕ ಸರ್ವರ್ ಸಮಸ್ಯೆ (technical issue) ವಿತರಣೆಗೆ ದೊಡ್ಡ ಅಡ್ಡಿಯಾಗಿ ಪರಿಣಮಿಸಿದೆ.
Transfer/ ಭಟ್ಕಳದ ಇಬ್ಬರು ಕಂದಾಯ ಶಿರಸ್ತೇದಾರರ ವರ್ಗಾವಣೆ
ಅಧಿಕಾರಿಗಳ ಗಮನಕ್ಕೆ ತಂದರೂ ಸ್ಪಂದನೆ ಇಲ್ಲ:
ಕಳೆದ ಮೇ (May) ಮತ್ತು ಜೂನ್ (June) ತಿಂಗಳಲ್ಲಿಯೂ ಇದೇ ರೀತಿಯ ಸರ್ವರ್ ಸಮಸ್ಯೆಯಿಂದ ಪಡಿತರ ವಿತರಣೆಯಲ್ಲಿ ಅಡಚಣೆ ಉಂಟಾಗಿತ್ತು. ವಿತರಣಾ ಅವಧಿಯ ಕೊನೆಯ ದಿನಗಳಲ್ಲಿ ಸರ್ವರ್ ಸಮಸ್ಯೆಯನ್ನು ಸರಿಪಡಿಸಿ ಪಡಿತರ ವಿತರಿಸಲು ಇಲಾಖೆ ವ್ಯವಸ್ಥೆ ಮಾಡಿತ್ತು. ಈ ಬಾರಿ ಎರಡು ತಿಂಗಳ ಪಡಿತರವನ್ನು ಒಂದೇ ಅವಧಿಯಲ್ಲಿ ವಿತರಿಸುವ ಸಂದರ್ಭದಲ್ಲಿ ಸರ್ವರ್ ಸಮಸ್ಯೆ ಎದುರಾಗದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಆಹಾರ ಇಲಾಖೆ ತಿಳಿಸಿತ್ತು ಎನ್ನಲಾಗಿದೆ. ಆದರೆ ಇದೀಗ ಮತ್ತೆ ಅದೇ ಸಮಸ್ಯೆ ಮರುಕಳಿಸಿದ್ದು, ಈ ಕುರಿತು ಸಾರ್ವಜನಿಕರು ಹಾಗೂ ನ್ಯಾಯಬೆಲೆ ಅಂಗಡಿಕಾರರು ತಾಲೂಕು ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳ ಗಮನಕ್ಕೆ ತಂದರೂ ನಿರೀಕ್ಷಿತ ಸ್ಪಂದನೆ ದೊರೆಯುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ.
village assistants/ ಗ್ರಾಮ ಸಹಾಯಕರ ಅನಿರ್ದಿಷ್ಟಾವಧಿ ಧರಣಿ ಹಿನ್ನೆಲೆ ಕೇಂದ್ರಸ್ಥಾನ ಬಿಡಲು ಅನುಮತಿಗೆ ಮನವಿ
ಒಂದೇ ತಿಂಗಳಲ್ಲಿ ಎರಡು ತಿಂಗಳ ಪಡಿತರ; ಎರಡು ಬಾರಿ ಬೆರಳಚ್ಚು: ಈ ಹಿಂದೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಪಡಿತರ ಸೇರಿ ಪ್ರತಿ ಸದಸ್ಯರಿಗೆ ಒಟ್ಟು ೧೦ ಕೆಜಿ ಅಕ್ಕಿ ಒಂದೇ ಬಯೋಮೆಟ್ರಿಕ್ ಪ್ರಕ್ರಿಯೆಯಲ್ಲಿ ವಿತರಿಸಲಾಗುತ್ತಿತ್ತು. ಪ್ರಸ್ತುತ ವ್ಯವಸ್ಥೆಯಲ್ಲಿ ಎರಡು ತಿಂಗಳ ಪಡಿತರವನ್ನು ಒಂದೇ ಅವಧಿಯಲ್ಲಿ ನೀಡಲಾಗುತ್ತಿರುವುದರಿಂದ ಪ್ರತ್ಯೇಕವಾಗಿ ಬಯೋಮೆಟ್ರಿಕ್ ಪ್ರಕ್ರಿಯೆ ನಡೆಸಬೇಕಾಗಿದೆ. ಸರ್ವರ್ ಲಭ್ಯವಿಲ್ಲದ ಸಂದರ್ಭದಲ್ಲಿ ಬೆರಳಚ್ಚು ಪ್ರಕ್ರಿಯೆ ಪೂರ್ಣಗೊಳ್ಳದೆ ಪಡಿತರ ವಿತರಣೆ ಸಾಧ್ಯವಾಗುತ್ತಿಲ್ಲ. ಹೀಗಾಗಿ ಉಚಿತ ಅಕ್ಕಿ ಪಡೆಯಲು ಬಂದ ಜನರು ನ್ಯಾಯಬೆಲೆ ಅಂಗಡಿಗಳ ಮುಂದೆ ಗಂಟೆಗಟ್ಟಲೆ ಕಾಯುವಂತಾಗಿದೆ.
Editorial/ ಉತ್ತರ ಕನ್ನಡ ಜಿಲ್ಲೆಯ ಮೀನುಗಾರರ ಜೀವಕ್ಕಿಲ್ಲವೇ ಬೆಲೆ?
ಅನ್ನ ನೀರು ಬಿಟ್ಟು ಕಂಪ್ಯೂಟರ್ ಮುಂದೆ ಕುಳಿತುಕೊಳ್ಳುವ ಸ್ಥಿತಿ:
ಸರ್ವರ್ ಸಮಸ್ಯೆಯ ನೇರ ಹೊರೆ ನ್ಯಾಯಬೆಲೆ ಅಂಗಡಿಕಾರರ ಮೇಲೂ ಬೀಳುತ್ತಿದೆ. ಅಧಿಕಾರಿಗಳ ಆದೇಶ ಪಾಲಿಸಬೇಕಾದ ಅನಿವಾರ್ಯತೆಯಿಂದ ಬೆಳಗ್ಗಿನಿಂದ ಸಂಜೆಯವರೆಗೆ, ಕೆಲವೊಮ್ಮೆ ರಾತ್ರಿ ವೇಳೆಯವರೆಗೂ ಕಂಪ್ಯೂಟರ್ (Computer) ಮುಂದೆ ಕುಳಿತು ಪಡಿತರ ವಿತರಣೆ ನಡೆಸಬೇಕಾದ ಪರಿಸ್ಥಿತಿ ಎದುರಾಗಿದೆ. ಸರ್ವರ್ ಕೈಕೊಟ್ಟಾಗ ಪಡಿತರದಾರರ ಅಸಮಾಧಾನ ಹಾಗೂ ಆಕ್ರೋಶವನ್ನು ನ್ಯಾಯಬೆಲೆ ಅಂಗಡಿಕಾರರೇ ಎದುರಿಸಬೇಕಾಗುತ್ತಿದೆ. ತಾಂತ್ರಿಕ ಸಮಸ್ಯೆ ತಮ್ಮ ನಿಯಂತ್ರಣದಲ್ಲಿಲ್ಲದಿದ್ದರೂ, ಜನರ ಪ್ರಶ್ನೆಗಳಿಗೆ ಉತ್ತರಿಸುವ ಜವಾಬ್ದಾರಿ ಮಾತ್ರ ತಮ್ಮ ಮೇಲೆಯೇ ಬೀಳುತ್ತಿದೆ ಎಂದು ನ್ಯಾಯಬೆಲೆ ಅಂಗಡಿಕಾರರು ಅಳಲು ತೋಡಿಕೊಂಡಿದ್ದಾರೆ.
Anxiety/ ಕರಾವಳಿಯಲ್ಲಿ ಮೀನುಗಾರರ ಸಾವು ಏರಿಕೆ: ಉತ್ತರ ಕನ್ನಡ ಜಿಲ್ಲೆಗಿಲ್ಲ ಲೈಫ್ ಜಾಕೆಟ್
ನ್ಯಾಯಬೆಲೆ ಅಂಗಡಿಕಾರರ ಹಿತಕ್ಕೂ ಗಮನ ಅಗತ್ಯ: ಸರ್ಕಾರಗಳು ಪಡಿತರದಾರರಿಗೆ ಉಚಿತ ಅಕ್ಕಿ ಒದಗಿಸುವುದು ಸ್ವಾಗತಾರ್ಹ. ಆದರೆ ಅದನ್ನು ಸಮರ್ಪಕವಾಗಿ ವಿತರಿಸಲು ಅಗತ್ಯವಿರುವ ತಾಂತ್ರಿಕ ವ್ಯವಸ್ಥೆಯನ್ನೂ ಸಮರ್ಪಕವಾಗಿ ಕಲ್ಪಿಸುವುದು ಅಷ್ಟೇ ಮುಖ್ಯ. ಸರ್ವರ್ ಸಮಸ್ಯೆ ಪದೇಪದೇ ಉಂಟಾಗುತ್ತಿದ್ದರೂ ಶಾಶ್ವತ ಪರಿಹಾರ ಕಂಡುಕೊಳ್ಳದಿರುವುದು ಪಡಿತರ ವಿತರಣಾ ವ್ಯವಸ್ಥೆಯ ಮೇಲೆಯೇ ಪ್ರಶ್ನೆ ಮೂಡುವಂತೆ ಮಾಡಿದೆ. ಅಕ್ಕಿ, ಗೋಣಿಚೀಲದ ಧೂಳು ಹಾಗೂ ಜನರ ಒತ್ತಡದ ನಡುವೆ ಕೆಲಸ ಮಾಡುವ ನ್ಯಾಯಬೆಲೆ ಅಂಗಡಿಕಾರರ ಬಗ್ಗೆಯೂ ಸರ್ಕಾರ ಗಮನಹರಿಸಬೇಕಾಗಿದೆ. ಪಡಿತರದಾರರಿಗೆ ಸಮಯಕ್ಕೆ ಸರಿಯಾಗಿ ಆಹಾರಧಾನ್ಯ ಸಿಗುವಂತೆ ಮಾಡುವುದರ ಜೊತೆಗೆ, ವಿತರಕರಿಗೂ ಅನುಕೂಲಕರವಾದ ತಾಂತ್ರಿಕ ವ್ಯವಸ್ಥೆ ಮತ್ತು ಕಾರ್ಯನಿರ್ವಹಣಾ ಪರಿಸರ ಕಲ್ಪಿಸಬೇಕಾಗಿದೆ.
Impact/ ‘ಭಟ್ಕಳ ಡೈರಿ’ ವರದಿ ಫಲಶ್ರುತಿ: ವರದಿ ಬೆನ್ನಲ್ಲೇ ತ್ಯಾಜ್ಯ ತೆರವು
ಸದ್ಯ ಪಡಿತರ ವಿತರಣೆಗೆ ಉಳಿದಿರುವ ದಿನಗಳಲ್ಲಿ ಸರ್ವರ್ ಸಮಸ್ಯೆ ಮುಂದುವರಿದರೆ ಸರದಿ ಸಾಲಿನಲ್ಲಿ ನಿಲ್ಲುವ ಜನರು ಹಾಗೂ ನ್ಯಾಯಬೆಲೆ ಅಂಗಡಿಕಾರರ ಸಂಕಷ್ಟ ಮತ್ತಷ್ಟು ಹೆಚ್ಚುವ ಸಾಧ್ಯತೆಯಿದೆ. ಆದ್ದರಿಂದ ಆಹಾರ ಇಲಾಖೆ ತಕ್ಷಣ ಮಧ್ಯಪ್ರವೇಶಿಸಿ ಸರ್ವರ್ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು ಎಂಬುದು ಸಾರ್ವಜನಿಕರು ಹಾಗೂ ನ್ಯಾಯಬೆಲೆ ಅಂಗಡಿಕಾರರ ಆಗ್ರಹವಾಗಿದೆ.

