ಭಟ್ಕಳ ಡೈರಿ ವರದಿ
ಭಟ್ಕಳ: ಮೀನುಗಾರಿಕೆಗೆ ತೆರಳಿದ್ದ ೧೮ ವರ್ಷದ ಯುವಕನೊಬ್ಬ ಸಮುದ್ರದ ಅಲೆಗಳ ರಭಸಕ್ಕೆ ಸಿಲುಕಿ ಪಾತಿದೋಣಿ ಮುಗುಚಿದ ಪರಿಣಾಮ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಬೈಲೂರು ಬಳಿ ಅರಬ್ಬಿ ಸಮುದ್ರದಲ್ಲಿ ನಡೆದಿದೆ. ಮೃತ ಯುವಕನನ್ನು ಬೈಲೂರು ಹರಿಕಂತ್ರಕೇರಿಯ ನಿವಾಸಿ, ವಿದ್ಯಾರ್ಥಿ ನವೀನ್ ಗಣಪತಿ ಹರಿಕಾಂತ (೧೮) ಎಂದು ಗುರುತಿಸಲಾಗಿದೆ.
ನವೀನ್ ತನ್ನ ಸ್ನೇಹಿತರೊಂದಿಗೆ ಬೆಳಗ್ಗೆ ಸುಮಾರು ೫ ಗಂಟೆಗೆ ‘ಶ್ರೀ ಅರಮದೇವಿ’ ಹೆಸರಿನ ಪಾತಿದೋಣಿಯಲ್ಲಿ ಮೀನುಗಾರಿಕೆಗೆ ತೆರಳಿದ್ದರು. ಬೆಳಗ್ಗೆ ೫ರಿಂದ ೫.೩೦ರ ನಡುವೆ ಸಮುದ್ರದಲ್ಲಿ ಅಲೆಗಳ ರಭಸ ಹೆಚ್ಚಾದ ಹಿನ್ನೆಲೆಯಲ್ಲಿ ಪಾತಿದೋಣಿ ಮುಗುಚಿದೆ ಎನ್ನಲಾಗಿದೆ. ಈ ವೇಳೆ ನವೀನ್ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.
ಘಟನೆ ಕುರಿತು ಮೃತನ ತಂದೆ ಗಣಪತಿ ನಾರಾಯಣ ಹರಿಕಾಂತ (೬೦) ಅವರು ನೀಡಿದ ದೂರಿನ ಆಧಾರದ ಮೇಲೆ ಮುರುಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪಿಎಸ್‌ಐ ಲೋಕನಾಥ ರಾಠೋಡ ಅವರು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.
ಇದನ್ನೂ ಓದಿ:
ಭಟ್ಕಳದಲ್ಲಿ ವನ್ಯಜೀವಿ ಸಪ್ತಾಹಕ್ಕೆ ಚಾಲನೆ; ಉರಗ ರಕ್ಷಕರಿಗೆ ಸನ್ಮಾನ
ಓಸಿ ಮಟ್ಕಾ ಜೂಜಾಟ ಆರೋಪ: ಇಬ್ಬರ ವಿರುದ್ಧ ಪ್ರಕರಣ
ಕಡವಾಡ ಸ್ಮಶಾನದಲ್ಲಿ ಕಬ್ಬಿಣದ ಕಂಬಗಳು ಮುರಿದು ಅವ್ಯವಸ್ಥೆ: ಅಧಿಕಾರಿಗಳ ವಿರುದ್ಧ ಆಕ್ರೋಶ




