ಭಟ್ಕಳ: ರಾಷ್ಟ್ರೀಯ ಹೆದ್ದಾರಿಗೆ (National Highway) ಹೊಂದಿಕೊಂಡಿರುವ ಮಣ್ಕುಳಿಯ ಪೆಟ್ರೋಲ್ ಬಂಕ್ ಪಕ್ಕದ ರಸ್ತೆಯಲ್ಲಿ ತ್ಯಾಜ್ಯ (waste) ರಾಶಿ ನಿರ್ಮಾಣವಾಗಿರುವ ಕುರಿತು ‘ಭಟ್ಕಳ ಡೈರಿ‘ ಪ್ರಕಟಿಸಿದ್ದ ವರದಿಗೆ ತಕ್ಷಣ ಸ್ಪಂದನೆ ದೊರೆತಿದೆ (Impact). ವರದಿ ಪ್ರಕಟಗೊಂಡ ಬೆನ್ನಲ್ಲೇ ನಗರಸಭೆ (city council) ಪೌರಕಾರ್ಮಿಕರು ಸ್ಥಳದಲ್ಲಿದ್ದ ತ್ಯಾಜ್ಯವನ್ನು ತೆರವುಗೊಳಿಸಿ ಸ್ವಚ್ಛಗೊಳಿಸಿದ್ದಾರೆ.

Waste/ ರಸ್ತೆಯಲ್ಲೇ ತ್ಯಾಜ್ಯ ರಾಶಿ: ಸಾರ್ವಜನಿಕರ ನಿರ್ಲಕ್ಷ್ಯಕ್ಕೆ ನಗರಸಭೆಯ ಮೌನ!

ಮಣ್ಕುಳಿಯ ಪೆಟ್ರೋಲ್ ಬಂಕ್ ಪಕ್ಕದಿಂದ ಗುಳ್ಮೀ ರಸ್ತೆಗೆ ಸಂಪರ್ಕ ಕಲ್ಪಿಸುವ ಸಿಮೆಂಟ್ ರಸ್ತೆಯ ಬದಿಯಲ್ಲಿ ಸಾರ್ವಜನಿಕರು ಮಾಂಸ ಸೇರಿದಂತೆ ವಿವಿಧ ರೀತಿಯ ತ್ಯಾಜ್ಯವನ್ನು ಪ್ರತಿನಿತ್ಯ ಎಸೆಯುತ್ತಿದ್ದರಿಂದ ಸ್ಥಳದಲ್ಲಿ ಕಸದ ರಾಶಿ ನಿರ್ಮಾಣವಾಗಿತ್ತು. ಇದರಿಂದ ದುರ್ವಾಸನೆ ಹಾಗೂ ಅನೈರ್ಮಲ್ಯದ ವಾತಾವರಣ ಉಂಟಾಗಿದ್ದು, ನಾಯಿಗಳು ಮತ್ತು ಜಾನುವಾರುಗಳು ತ್ಯಾಜ್ಯವನ್ನು ಎಳೆದೊಯ್ಯುತ್ತಿದ್ದ ಕಾರಣ ಸ್ಥಳೀಯರು ತೊಂದರೆ ಅನುಭವಿಸುತ್ತಿದ್ದರು.

Murudeshwar/ ಗೃಹಪ್ರವೇಶಕ್ಕೆ ಹೋದಾಗ ಸ್ಕೂಟಿ ಕಳವು

ಈ ಕುರಿತು ‘ರಸ್ತೆಯಲ್ಲೇ ತ್ಯಾಜ್ಯ ರಾಶಿ: ಭಟ್ಕಳ (Bhatkal) ನಗರಸಭೆ ಮೌನ’ ಎಂಬ ಶೀರ್ಷಿಕೆಯಡಿ ‘ಭಟ್ಕಳ ಡೈರಿ‘ ವರದಿ ಪ್ರಕಟಿಸಿತ್ತು. ತ್ಯಾಜ್ಯ ಎಸೆಯುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಹಾಗೂ ಸ್ಥಳವನ್ನು ನಿಯಮಿತವಾಗಿ ಸ್ವಚ್ಛಗೊಳಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದರು. ನಗರಸಭೆ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಕ್ರಮವಾಗಿಲ್ಲ ಎಂಬ ಆರೋಪವೂ ಕೇಳಿಬಂದಿತ್ತು. ಈ ಬಗ್ಗೆ ಜಿಲ್ಲಾಧಿಕಾರಿಯವರ ವಾಟ್ಸಾಪ್ ಸಂಖ್ಯೆಗೆ ಕೂಡ ದೂರು ಸಲ್ಲಿಸಲಾಗಿತ್ತು.

Social work/ ವಾಲಿಬಾಲ್ ಪಂದ್ಯಾಟ ನಡೆಸಿ ಪ್ರೊಜೆಕ್ಟರ್ ತಂದ ಯುವಕರು

ವರದಿ ಪ್ರಕಟವಾದ ಬಳಿಕ ನಗರಸಭೆ ತಕ್ಷಣ ಸ್ಥಳಕ್ಕೆ ತೆರಳಿ ತ್ಯಾಜ್ಯವನ್ನು ತೆರವುಗೊಳಿಸಿರುವುದಕ್ಕೆ (Impact) ಸ್ಥಳೀಯರು ಸಂತಸ ವ್ಯಕ್ತಪಡಿಸಿದ್ದಾರೆ. ನಗರಸಭೆಯ ಪೌರಕಾರ್ಮಿಕರು ಸ್ಥಳವನ್ನು ಸ್ವಚ್ಛಗೊಳಿಸಿದ ಫೋಟೋ ಹಾಗೂ ವಿಡಿಯೋಗಳನ್ನು ‘ಭಟ್ಕಳ ಡೈರಿ’ಗೆ ಕಳುಹಿಸಿ ತಮ್ಮ ಸಂತಸ ಹಂಚಿಕೊಂಡಿದ್ದಾರೆ. ಸಮಸ್ಯೆಯನ್ನು ಬೆಳಕಿಗೆ ತಂದು ನಗರಸಭೆಯ ಗಮನ ಸೆಳೆದ ‘ಭಟ್ಕಳ ಡೈರಿ‘ಗೆ ಸ್ಥಳೀಯರು ಅಭಿನಂದನೆ ಸಲ್ಲಿಸಿದ್ದಾರೆ.

Karate Championship/ ಉಡುಪಿಯಲ್ಲಿ ಕರಾಟೆ ಚಾಂಪಿಯನ್ಶಿಪ್: ಭಟ್ಕಳದ ನಾಗಶ್ರೀ ವಿದ್ಯಾರ್ಥಿಗಳ ಸಾಧನೆ 

ಸಿಸಿ ಕ್ಯಾಮೆರಾ ಅಳವಡಿಕೆಗೆ ಆಗ್ರಹ:

ಸ್ಥಳ ಸ್ವಚ್ಛಗೊಂಡಿರುವುದು ಸ್ವಾಗತಾರ್ಹವಾದರೂ, ಸಮಸ್ಯೆ ಮತ್ತೆ ಮರುಕಳಿಸದಂತೆ ಶಾಶ್ವತ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ. ಸಾರ್ವಜನಿಕರು ರಸ್ತೆ ಬದಿಯಲ್ಲಿ ತ್ಯಾಜ್ಯ ಎಸೆಯುವುದನ್ನು ಸಂಪೂರ್ಣವಾಗಿ ನಿಲ್ಲಿಸಬೇಕು. ತ್ಯಾಜ್ಯ ಎಸೆಯುವವರನ್ನು ಪತ್ತೆಹಚ್ಚಿ ದಂಡ ವಿಧಿಸಲು ಸ್ಥಳದಲ್ಲಿ ಸಿಸಿ ಕ್ಯಾಮೆರಾಗಳನ್ನು (cc camera) ಅಳವಡಿಸಬೇಕು. ನಗರಸಭೆಯು ಸ್ಥಳವನ್ನು ನಿಯಮಿತವಾಗಿ ಪರಿಶೀಲಿಸಿ ಅಗತ್ಯವಿದ್ದಾಗ ತ್ಯಾಜ್ಯ ತೆರವುಗೊಳಿಸಬೇಕು ಎಂದು ಆಗ್ರಹಿಸಲಾಗಿದೆ.

Passenger shelter/ ತೆರ‍್ನಮಕ್ಕಿಯಲ್ಲಿ ಪ್ರಯಾಣಿಕರ ತಂಗುದಾಣ ಲೋಕಾರ್ಪಣೆ