ಭಟ್ಕಳ: ಕಳೆದ ಒಂದೆರಡು ತಿಂಗಳಿನಿಂದ ಭಟ್ಕಳ (Bhatkal) ನಗರಸಭೆ ವ್ಯಾಪ್ತಿಯ ಮಣ್ಕುಳಿಯ ರಾಷ್ಟ್ರೀಯ ಹೆದ್ದಾರಿ (National Highway) ಪಕ್ಕದಲ್ಲಿರುವ ಒಳ ಚರಂಡಿಯ (Internal sewer) ಹೊಂಡ (pothole) ಬಾಯಿ ತೆರೆದಿದ್ದು, ಇಲ್ಲಿನ ಸ್ಥಳೀಯರಿಗೆ ಹಾಗೂ ವಾಹನ ಸವಾರರಿಗೆ ದಿನನಿತ್ಯ ಕಿರಿಕಿರಿ ಉಂಟಾಗಿದೆ.
Anxiety/ ಕರಾವಳಿಯಲ್ಲಿ ಮೀನುಗಾರರ ಸಾವು ಏರಿಕೆ: ಉತ್ತರ ಕನ್ನಡ ಜಿಲ್ಲೆಗಿಲ್ಲ ಲೈಫ್ ಜಾಕೆಟ್
ಕಳೆದ ಮೂರ್ನಾಲ್ಕು ತಿಂಗಳಿನ ಹಿಂದೆ ಈ ಭಾಗದಲ್ಲಿ ಒಳ ಚರಂಡಿಯ ನೀರು ಸ್ಥಳೀಯ ನಿವಾಸಿಗಳಿಗೆ ಬಾವಿಗೆ ಸೇರುತ್ತಿರುವುದರಿಂದ ಅದನ್ನು ಪರಿಶೀಲನೆ ಮಾಡಲು ಹೆದ್ದಾರಿ ಪಕ್ಕದಲ್ಲಿದ್ದ ಒಳ ಚರಂಡಿ ತೆರೆದು ಅಲ್ಲಿಂದ ನೀರು ಸರಾಗವಾಗಿ ಹರಿಯುತ್ತಿದ್ದೇಯೋ ಎಂದು ಪರಿಶೀಲಿಸಲು ಈ ಒಳ ಚರಂಡಿಯನ್ನು ತೆರೆದಿದ್ದರು. ಆದರೆ ಒಂದೆರಡು ತಿಂಗಳು ಕಳೆದರೂ ಚರಂಡಿಯ ಹೊಂಡ (pothole) ಮುಚ್ಚದೇ ಹಾಗೆ ಇದ್ದು, ಈ ಭಾಗದ ನಿವಾಸಿಗಳಿಗೆ ಹಾಗೂ ದಿನ ನಿತ್ಯ ಸಂಚರಿಸುವ ವಾಹನ ಸವಾರರಿಗೆ ತೊಂದರೆ ಉಂಟಾಗುತ್ತಿದೆ. ಇನ್ನು ಕೆಲವು ಬೈಕ್ ಸವಾರರು ಬೈಕ್ ಸಮೇತ ಬಿದ್ದಿರುವ ಉದಾಹರಣೆಗಳು ಕೂಡ ಇವೆ.
Impact/ ‘ಭಟ್ಕಳ ಡೈರಿ’ ವರದಿ ಫಲಶ್ರುತಿ: ವರದಿ ಬೆನ್ನಲ್ಲೇ ತ್ಯಾಜ್ಯ ತೆರವು
ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿ ತೆರೆದ ಒಳಚರಂಡಿ ಹೊಂಡ ಸಾರ್ವಜನಿಕರಿಗೆ ದೊಡ್ಡ ಅಪಾಯವಾಗಿವೆ. ಬ್ಯಾರಿಕೇಡ್ ಅಳವಡಿಸಿದರು ಕೂಡ ವಾಹನ ಸವಾರರು ಮತ್ತು ಪಾದಚಾರಿಗಳು ರಾತ್ರಿ ವೇಳೆ ಗುಂಡಿಗಳನ್ನು ಗುರುತಿಸಲಾಗದೆ ಅಪಘಾತಕ್ಕೀಡಾಗುತ್ತಿದ್ದಾರೆ.
Waste/ ರಸ್ತೆಯಲ್ಲೇ ತ್ಯಾಜ್ಯ ರಾಶಿ: ಸಾರ್ವಜನಿಕರ ನಿರ್ಲಕ್ಷ್ಯಕ್ಕೆ ನಗರಸಭೆಯ ಮೌನ!
ಈ ಬಗ್ಗೆ ಮಾತನಾಡಿದ ಸ್ಥಳೀಯ ನಿವಾಸಿ ರಾಜೇಶ ದುರ್ಗಾ ನಾಯ್ಕ, ಈ ಒಳ ಚರಂಡಿ ಹೊಂಡವನ್ನು ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಮುಚ್ಚಿಸಿ ಸರಿಪಡಿಸಬೇಕು. ನಾನು ದಿನನಿತ್ಯ ಈ ಭಾಗದಲ್ಲೇ ಸಂಚಾರಿಸುತ್ತೇನೆ. ಇದರಿಂದ ದ್ವಿಚಕ್ರ ವಾಹನ ಸವಾರರು ಕೆಳಗೆ ಬಿದ್ದು ಗಾಯಗೊಳ್ಳುತ್ತಿದ್ದಾರೆ. ವಾಹನಗಳು ಪಕ್ಕಕ್ಕೆ ಸರಿಯುವಾಗ ಸಂಚಾರಕ್ಕೆ ತೊಂದರೆಯಾಗುತ್ತದೆ. ಆದಷ್ಟು ಬೇಗ ಸಂಬಂಧಪಟ್ಟ ಅಧಿಕಾರಿಗಳು ಹೊಂಡ ಮುಚ್ಚಿ ಸಾರ್ವಜನಿಕರು ಹಾಗೂ ವಾಹನ ಸವಾರರು ನಿರ್ಭೀತಿಯಿಂದ ಸಂಚಾರ ಮಾಡಲು ಅನುವು ಮಾಡಿಕೊಡಬೇಕು ಎಂದು ಆಗ್ರಹಿಸಿದ್ದಾರೆ. ನಗರಸಭೆ ಅಧಿಕಾರಿಗಳು ತಕ್ಷಣ ಇತ್ತ ಗಮನಹರಿಸಿ ಈ ಸಮಸ್ಯೆ ಬಗೆಹರಿಸಬೇಕಾಗಿದೆ.


