ಭಟ್ಕಳ ಡೈರಿ ವರದಿ
ಭಟ್ಕಳ: ತಾಲೂಕಿನ ಟ್ಯಾಕ್ಸಿ ಚಾಲಕ–ಮಾಲಕರ ಸಂಘದ (Bhatkal Taxi Drivers and Owners Association) ಮಹಾಸಭೆ ಆ ೧೫ರಂದು ಭಟ್ಕಳದಲ್ಲಿ ನಡೆಯಿತು. ಭಟ್ಕಳ (Bhatkal) ತಾಲೂಕಿನ ವಿವಿಧ ಭಾಗಗಳಿಂದ ಆಗಮಿಸಿದ್ದ ಟ್ಯಾಕ್ಸಿ ಚಾಲಕರು ಹಾಗೂ ಮಾಲಕರು (Taxi Drivers and Owners) ಸಭೆಯಲ್ಲಿ ಭಾಗವಹಿಸಿದ್ದರು.
new DySP/ ಐಪಿಎಸ್ ಅಧಿಕಾರಿ ಭಟ್ಕಳದ ಹೊಸ ಡಿವೈಎಸ್‌ಪಿ
ಸಭೆಯಲ್ಲಿ ಸಂಘದ ಅಭಿವೃದ್ಧಿ, ಟ್ಯಾಕ್ಸಿ ಚಾಲಕರು ಮತ್ತು ಮಾಲಕರು ಎದುರಿಸುತ್ತಿರುವ ಸಮಸ್ಯೆಗಳು ಹಾಗೂ ಅವರ ಹಿತಾಸಕ್ತಿಗಳ ಕುರಿತು ಸಮಗ್ರ ಚರ್ಚೆ ನಡೆಯಿತು. ಸಂಘವನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ನೂತನ ಪದಾಧಿಕಾರಿಗಳನ್ನು (New office bearers) ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
Forecast/ ಕರಾವಳಿಯಲ್ಲಿ ಮಳೆ ಇಳಿಕೆ; ಅಲ್ಲಲ್ಲಿ ತುಂತುರು ಮಳೆ ಸಾಧ್ಯತೆ
ನೂತನ ಸಮಿತಿಗೆ ಫೈರೋಜ್ ಅಧ್ಯಕ್ಷರಾಗಿ, ಜಯಂತ ನಾಯ್ಕ ಉಪಾಧ್ಯಕ್ಷರಾಗಿ, ದಿನೇಶ ಮೊಗೇರ ಕಾರ್ಯದರ್ಶಿಯಾಗಿ, ನಾರಾಯಣ ನಾಯ್ಕ ಖಜಾಂಚಿಯಾಗಿ, ಇಸ್ಮಾಯಿಲ್ ಸಹ ಕಾರ್ಯದರ್ಶಿಯಾಗಿ ಹಾಗೂ ಮೊಹಮ್ಮದ್ ಸಲ್ಮಾನ್ ಸಹ ಖಜಾಂಚಿಯಾಗಿ ಆಯ್ಕೆಯಾಗಿದ್ದಾರೆ. ಇದರೊಂದಿಗೆ ಎಂಟು ಮಂದಿ ಸದಸ್ಯರನ್ನು ಸಹ ಸಮಿತಿಗೆ ಆಯ್ಕೆ ಮಾಡಲಾಗಿದೆ.
fighting cancer/ ಕ್ಯಾನ್ಸರ್ ವಿರುದ್ಧ ಹೋರಾಡಿ ಕಾಲು ಉಳಿಸಿದ ವೈದ್ಯರ ಸಾಧನೆ
ನೂತನ ಪದಾಧಿಕಾರಿಗಳು (New office bearers) ಸಂಘದ ಎಲ್ಲ ಸದಸ್ಯರ ಸಹಕಾರದೊಂದಿಗೆ ಟ್ಯಾಕ್ಸಿ ಚಾಲಕರು ಹಾಗೂ ಮಾಲಕರ ಹಿತಾಸಕ್ತಿಗಾಗಿ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುವುದಾಗಿ ತಿಳಿಸಿದರು. ಚಾಲಕರು ಮತ್ತು ಮಾಲಕರು ಎದುರಿಸುತ್ತಿರುವ ಸಮಸ್ಯೆಗಳಿಗೆ ಸೂಕ್ತವಾಗಿ ಸ್ಪಂದಿಸುವುದು, ಸದಸ್ಯರ ನಡುವೆ ಒಗ್ಗಟ್ಟು ಹಾಗೂ ಸಹಕಾರವನ್ನು ಹೆಚ್ಚಿಸುವುದು ಮತ್ತು ಸಂಘವನ್ನು ಮತ್ತಷ್ಟು ಸದೃಢಗೊಳಿಸುವುದು ನೂತನ ಸಮಿತಿಯ ಪ್ರಮುಖ ಉದ್ದೇಶ ಎಂದು ಸಭೆಯಲ್ಲಿ ತಿಳಿಸಲಾಯಿತು.
Devotional Songs/ ಕುಂದಾಪುರದಲ್ಲಿ ಜನಮನ ಸೆಳೆದ ಗುರುರಾಯರ ಭಕ್ತಿ ಗಾನಾಮೃತ
