ಭಟ್ಕಳ (Bhatkal) : ಅರಣ್ಯದಲ್ಲಿ ಕೋಳಿ ಅಂಕ ಆಡುತ್ತಿದ್ದ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು (Police raid) ೩,೫೬,೪೭೦ ರೂ ಮೌಲ್ಯದ ಸ್ವತ್ತುಗಳೊಂದಿಗೆ ಮೂವರನ್ನು ಬಂಧಿಸಿದ್ದು, ಏಳು ಜನರು ಪರಾರಿಯಾಗಿದ್ದಾರೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಮಂಜುನಾಥ ಎ ಲಿಂಗಾರೆಡ್ಡಿ ನೇತೃತ್ವದ ತಂಡ ಈ ದಾಳಿ ನಡೆಸಿತ್ತು (police raid). ಆರೋಪಿತರು ಜೂ ೨೮ರಂದು ಸಾಯಂಕಾಲ ೭ ಗಂಟೆಗೆ ಭಟ್ಕಳ ತಾಲೂಕಿನ ಹಡಿಲ್ ಸಬ್ಬತ್ತಿ ಅರಣ್ಯದಲ್ಲಿ ತಮ್ಮ ಲಾಭಕ್ಕೋಸ್ಕರ ಹುಂಜಗಳ ಕಾಲುಗಳಿಗೆ ಕತ್ತಿ ಕಟ್ಟಿ ಕಾದಾಟಕ್ಕೆ ಬಿಟ್ಟು ಅದರ ಮೇಲೆ ಹಣವನ್ನು ಪಂಥ ಕಟ್ಟಿ ಕೋಳಿ ಅಂಕ ಜೂಗಾರಾಟ ಆಡುತ್ತಿದ್ದರು.

ಇದನ್ನು ಓದಿ: felicitation ceremony/ ಕನ್ನಡ ನಾಡು-ನುಡಿಯ ಅಭಿಮಾನ ಸದಾ ಜೀವಂತ ವಾಗಿರಬೇಕು : ಡಿ ಬಿ ನಾಯ್ಕ

ಭಟ್ಕಳ ತಾಲೂಕಿನವರಾದ ಸಬ್ಬತ್ತಿಯ ನಾಗರಾಜ, ಬೇಂಗ್ರೆ ಸಾರದಹೊಳೆಯ ಜಗದೀಶ ಮಾಸ್ತಿ ನಾಯ್ಕ (೩೦), ಹಡೀಲ್ ನಿವಾಸಿ ಶಶಿಕಾಂತ ತಂದೆ ನಾಗೇಶ ನಾಯ್ಕ (೨೬), ಸಬ್ಬತ್ತಿಯ ನಾರಾಯಣ ಕುಪ್ಪಯ್ಯ ನಾಯ್ಕ (೩೫), ತಲಾಂದ ನಿವಾಸಿ ಗಣಪತಿ ವಿಠ್ಠಲ, ಮುಟ್ಟಳ್ಳಿ ನಿವಾಸಿಗಳಾದ ಧನು ಮತ್ತು ಪ್ರದೀಪ, ಶಿರೂರು ನಿವಾಸಿಗಳಾದ ಸಂತೋಷ ಮತ್ತು ಸುಪ್ರೀತ ಹಾಗೂ ಬೈಂದೂರಿನ (Byndoor) ರಾಜು ವಿರುದ್ಧ ಪ್ರಕರಣ ದಾಖಲಾಗಿದೆ (complaint filed).

ಇದನ್ನು ಓದಿ: Brothers challenge/ ಮುರ್ಡೇಶ್ವರದಲ್ಲಿ ಸಹೋದರರ ಸವಾಲ್