ಭಟ್ಕಳ: ತಾಲೂಕಿನ ಜಾಲಿಯಲ್ಲಿರುವ ನಾಮಧಾರಿ ಸಭಾಭವನದಲ್ಲಿ ರವಿವಾರದಂದು ಜಾಲಿಯ ಸ್ವಾಮಿ ವಿವೇಕಾನಂದ ಜನಸ್ಪಂದನ ಫೌಂಡೇಶನ್ ವತಿಯಿಂದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಹಮ್ಮಿಕೊಳ್ಳಲಾದ “ಸ್ತ್ರೀ ನಮನ” (women’s adoration) ಕಾರ್ಯಕ್ರಮ ಅರ್ಥಪೂರ್ಣವಾಗಿ ನೆರವೇರಿತು.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ನೂರಕ್ಕೂ ಅಧಿಕ ಹೆರಿಗೆಗಳಿಗೆ ಸಹಾಯ ಮಾಡಿದ ಸೂಲಗಿತ್ತಿಯರು ಹಾಗೂ ಸಾಂಪ್ರದಾಯಿಕ ಕಾರ್ಯಕ್ರಮಗಳಲ್ಲಿ ಸೋಬಾನ ಪದಗಳನ್ನು ಹಾಡಿ ಸಮಾಜ ಸೇವೆಗಳನ್ನು ಮಾಡಿದ ಲಕ್ಷ್ಮೀ ತಿಮ್ಮಯ್ಯ ನಾಯ್ಕ ಹಾಗೂ ಮಳ್ಳಿ ದುರ್ಗಪ್ಪ ನಾಯ್ಕರವರನ್ನು ಸನ್ಮಾನಿಸಲಾಯಿತು. ಆಶಾ ಕಾರ್ಯಕರ್ತೆ ಸೋಮಾವತಿ ರಾಮಕೃಷ್ಣ ಮೊಗೇರ, ಶ್ರೀ ಸಿದ್ಧಿವಿನಾಯಕ ಭಜನಾ ಮಂಡಳಿಯ ಸದಸ್ಯೆ ಸುಜಾತ ನಿಲೇಶ ಆಚಾರ್ಯ ಮತ್ತು ವೈದ್ಯೆ ಮೇಘನಾ ಮೊಗೇರ ಅವರನ್ನು ಗೌರವಿಸಲಾಯಿತು (women’s adoration).

humanity/ ಮಾನವೀಯತೆ ಮೆರೆದ ಶ್ರೀವಲ್ಲಿ ಪ್ರೌಢಶಾಲೆಯ ವಿದ್ಯಾರ್ಥಿ

ಕಾರ್ಯಕ್ರಮದ ಉದ್ಘಾಟಕರಾಗಿ ಆಗಮಿಸಿದ ಶಿಕ್ಷಕಿ ಶ್ವೇತಾ ರಾಠೋಡ್ ಮಹಿಳಾ ನಾಯಕತ್ವದ ಮಹತ್ವದ ಕುರಿತು ಉಪನ್ಯಾಸ ನೀಡಿ ಫೌಂಡೇಷನ್ ಸೇವಾ ಕಾರ್ಯವನ್ನು ಕೊಂಡಾಡಿದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಪೂರ್ಣಿಮಾ ಸೋಮಕುಮಾರ, ಫೌಂಡೇಷನ್ನ ಜನಪರ ಕಾರ್ಯಕ್ರಮಗಳನ್ನು ವಿವರಿಸಿದರು.

car-scooter collision/ ಕಾರು-ಸ್ಕೂಟರ್ ಡಿಕ್ಕಿಯಲ್ಲಿ ಭಟ್ಕಳ ವ್ಯಕ್ತಿ ಗಂಭೀರ 

ಈ ಸಂದರ್ಭದಲ್ಲಿ ಮಹಿಳೆಯರಿಗಾಗಿ ನೃತ್ಯ – ಗಾಯನ ಹಾಗೂ  ವಿವಿಧ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು, ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು. ವೇದಿಕೆಯಲ್ಲಿ ಯಮುನಾ ಅಣ್ಣಪ್ಪ ಮೊಗೇರ, ಲಿಲಾವತಿ, ಗಜಾನನ ಆಚಾರ್ಯ, ದಿವ್ಯಾ ಶ್ರೀಧರ ಖಾರ್ವಿ, ಶ್ರೀದೇವಿ ಗೊಂಡ ಹಾಗೂ ನೇತ್ರಾ ರಮೇಶ ನಾಯ್ಕ ಉಪಸ್ಥಿತರಿದ್ದರು.

Sachin Memorial Trophy/ ಸಚಿನ್ ಮೆಮೋರಿಯಲ್ ಟ್ರೋಫಿ: ಗೋಲ್ಡನ್ ಸ್ಟಾರ್ ಚಾಂಪಿಯನ್