ಭಟ್ಕಳ: ಇಲ್ಲೊಬ್ಬ ವಿದ್ಯಾರ್ಥಿ ಇತರರಿಗೂ ಮಾದರಿಯಾಗಿದ್ದಾನೆ. ಚಿಕಿತ್ಸೆಗೆ ಹಣ ಇಲ್ಲದೆ ಆರ್ಥಿಕ ಸಂಕಷ್ಟದಿಂದ ಬಳಲುತ್ತಿದ್ದ ಬಡ ಕುಟುಂಬಕ್ಕೆ ನೆರವಾಗುವ ಮೂಲಕ ಮಾನವೀಯತೆ (humanity) ಮೆರೆದಿದ್ದಾನೆ. ರಾಜ್ಯ ಮಟ್ಟದ ಚಿತ್ರಕಲಾ ಸ್ಪರ್ಧೆಯಲ್ಲಿ ಬಂದ ಹಣವನ್ನು ತನ್ನ ಶಾಲೆಯ ಹಳೇ ವಿದ್ಯಾರ್ಥಿಯ ಚಿಕಿತ್ಸೆಗೆ ದಾನ ಮಾಡಿದ್ದಾನೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಹೌದು, ಭಟ್ಕಳ (Bhatkal) ತಾಲೂಕಿನ ಶಿರಾಲಿ ಚಿತ್ರಾಪುರದ ಶ್ರೀವಲ್ಲಿ ಪ್ರೌಢಶಾಲೆಯ ಪ್ರತಿಭಾವಂತ ವಿದ್ಯಾರ್ಥಿ ಹರ್ಷದ ಮಂಜು ಗೊಂಡ ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯವರು ನಡೆಸಿದ ”ಕಲಾ ಪ್ರತಿಭೋತ್ಸವ ” ಕಿಶೋರ ವಿಭಾಗದ ಚಿತ್ರಕಲಾ ಸ್ಪರ್ಧೆಯಲ್ಲಿ (drawing competition) ೧೫೦೦೦ ರೂಪಾಯಿ ಬಹುಮಾನದೊಂದಿಗೆ ರಾಜ್ಯ ಮಟ್ಟದಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾನೆ. ತಾನು ಬಹುಮಾನವಾಗಿ ಪಡೆದ ೧೫೦೦೦ ರೂಪಾಯಿಗಳಲ್ಲಿ ೧೦೦೦೦ ರೂಪಾಯಿಗಳನ್ನು ತನ್ನ ಶಾಲೆಯ ಹಳೆಯ ವಿದ್ಯಾರ್ಥಿ ಸಂಜೀವ ನಾಯ್ಕ ಅವರು ಕಿಡ್ನಿ ಹಾಗೂ ಲೀವ‌ರ್ ವೈಫಲ್ಯದಿಂದ ಬಳಲುತ್ತ ಆರ್ಥಿಕ ಸಂಕಷ್ಟದಲ್ಲಿರುದನ್ನು ಗಮನಿಸಿ ಚಿಕಿತ್ಸೆಗಾಗಿ ಕೊಟ್ಟು ಸಹಾಯ ಮಾಡಿದ್ದಾನೆ (humanity). ಶಾಲೆಯ ಮುಖ್ಯಾಧ್ಯಾಪಕಿ ಮಮತಾ ಮಡಿವಾಳ ಮೂಲಕ ಸಂಜೀವ ನಾಯ್ಕ ಅವರ ಅಣ್ಣನಿಗೆ ಹಣವನ್ನು ನೀಡಿದ್ದಾರೆ. ಚಿತ್ರಕಲಾ ಶಿಕ್ಷಕ ಸಂಜಯ ಗುಡಿಗಾರ ಈ ಸಂದರ್ಭದಲ್ಲಿ ಇದ್ದರು.

car-scooter collision/ ಕಾರು-ಸ್ಕೂಟರ್ ಡಿಕ್ಕಿಯಲ್ಲಿ ಭಟ್ಕಳ ವ್ಯಕ್ತಿ ಗಂಭೀರ 

ಪ್ರತಿಭೆಯ ಜೊತೆಯಲ್ಲಿ ನಿಷ್ಕಲ್ಮಶ ಮನಸ್ಸು ಹೊಂದಿರುವ ಈತನ ಈ ಮಾನವೀಯ ಮೌಲ್ಯ ಎಲ್ಲರಿಗೂ ಸ್ಫೂರ್ತಿದಾಯಕವಾಗಿದೆ. ಅವನ ದಯಾಮಯ ಮನೋಭಾವನೆಗೆ ಶಾಲಾ ಆಡಳಿತ ಮಂಡಳಿ, ಮುಖ್ಯಾಧ್ಯಾಪಕರು, ಶಾಲಾ ಶಿಕ್ಷಕ ಶಿಕ್ಷಕೇತರ ಸಿಬ್ಬಂದಿ ಅಭಿನಂದಿದ್ದಾರೆ. ದೇವರು ಬಾಲಕನ ಮುಗ್ಧ ಮನಸ್ಸಿಗೆ ಸದಾ ಆತನ ಜೊತೆಯಲ್ಲಿದ್ದು ಕಾಪಾಡಲಿ. ಸಮಾಜದಲ್ಲಿ ಒಳ್ಳೆಯ ಸ್ಥಾನ ಮಾನ ಸಿಗುವಂತಾಗಲಿ ಎಂದು ‘ಭಟ್ಕಳ ಡೈರಿ’ ಹಾರೈಸುತ್ತದೆ.

Sachin Memorial Trophy/ ಸಚಿನ್ ಮೆಮೋರಿಯಲ್ ಟ್ರೋಫಿ: ಗೋಲ್ಡನ್ ಸ್ಟಾರ್ ಚಾಂಪಿಯನ್