ಭಟ್ಕಳ: ಅಕ್ರಮವಾಗಿ ಜಾನುವಾರು ಸಾಗಾಟ ಮಾಡುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರ ವಿರುದ್ಧ ದೂರು ದಾಖಲಾಗಿದೆ. ಇಬ್ಬರು ಆರೋಪಿತರಲ್ಲಿ ಒಬ್ಬನನ್ನು ಬಂಧಿಸಲಾಗಿದ್ದು (arrested), ಇನ್ನೊಬ್ಬ ಪರಾರಿಯಾಗಿದ್ದಾನೆ. ಹಾವೇರಿ (Haveri) ಜಿಲ್ಲೆಯ ಶಿಗ್ಗಾಂವ ತಾಲೂಕಿನ ಹಿರೇಬೆಂಡೆಗಿರಿಯ ನಿವಾಸಿ ಹಜರತ್ ಅಲಿ ತಹಸಿಲ್ದಾರ್ ಹಾಗೂ ಧಾರವಾಡ (Dharwad) ಜಿಲ್ಲೆಯ ಕಲಘಟಗಿ ತಾಲೂಕಿನ ನಾಲಬಂಧ ಓಣಿಯ ಮೊಹಮ್ಮದ ಆಸೀಪ್ (32) ಆರೋಪಿತರಾಗಿದ್ದಾರೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಶಿರಾಲಿಯಿಂದ ಭಟ್ಕಳ (Bhatkal) ಕಡೆಗೆ ಟಾಟಾ ಲಾರಿಯಲ್ಲಿ ಸುಮಾರು ₹೧೪ ಲಕ್ಷ ಮೌಲ್ಯದ ೧೪ ಜಾನುವಾರುಗಳನ್ನು ಹಿಂಸಾತ್ಮಕವಾಗಿ ಕಟ್ಟಿ, ನೀರು ಮತ್ತು ಹುಲ್ಲು ನೀಡದೆ, ವಧೆ ಉದ್ದೇಶದಿಂದ ಸಾಗಾಟ ಮಾಡಲಾಗುತ್ತಿತ್ತು ಎಂದು ಆರೋಪಿಸಲಾಗಿದೆ. ಸಾಗಾಟಕ್ಕೆ ಅಗತ್ಯ ಪರವಾನಿಗೆ ಪಡೆಯಲಾಗಿರಲಿಲ್ಲ ಎನ್ನಲಾಗಿದೆ.
SSLC exams/ ಎಸ್ಎಸ್ಎಲ್ಸಿ ಪರೀಕ್ಷೆಗೆ ಭಟ್ಕಳದಲ್ಲಿ ಮೊದಲ ದಿನ ೩೫ ವಿದ್ಯಾರ್ಥಿಗಳು ಗೈರು
ಪರಿಶೀಲನೆ ವೇಳೆ ಹಜರತ್ ಅಲಿ ತಹಶಿಲ್ದಾರ ಪರಾರಿಯಾಗಿದ್ದು, ಚಾಲಕ ಮೊಹಮ್ಮದ ಆಸೀಪ್ ವಾಹನ ಸಮೇತ ಪತ್ತೆಯಾಗಿದ್ದಾನೆ (arrested). ಈ ಸಂಬಂಧ ಸಿಪಿಐ ಮಲ್ಲಿಕಾರ್ಜುನಯ್ಯ ಕೊರಾಣಿ ಅವರು ಆರೋಪಿತರ ವಿರುದ್ಧ ಕಾನೂನುಕ್ರಮ ಕೈಗೊಳ್ಳಲು ದೂರು ದಾಖಲಿಸಿದ್ದಾರೆ.



