ಭಟ್ಕಳ: ಅಕ್ರಮವಾಗಿ ಜಾನುವಾರು ಸಾಗಾಟ ನಡೆಸಿದ ಪ್ರಕರಣದಲ್ಲಿ ಭಟ್ಕಳ ಗ್ರಾಮೀಣ ಠಾಣೆಯ ಪೊಲೀಸರು ನಿರೀಕ್ಷಕ ವೆಂಕಟೇಶ ಮುರನಾಳ ಅವರ ನೇತೃತ್ವದಲ್ಲಿ ದಾಳಿ ನಡೆಸಿ ಜಾನುವಾರುಗಳನ್ನು ರಕ್ಷಣೆ ಮಾಡಿದ್ದಾರೆ (cattle rescued).
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಭಟ್ಕಳ (Bhatkal) ತಾಲೂಕಿನ ಜಾಗಟೆಬೈಲ್ ಪ್ರದೇಶದ ಮ್ಯಾಂಗೋ ಫಾರ್ಮ್ ಹತ್ತಿರ ವಾಸವಾಗಿರುವ ಮುಸದ್ದೀಕ್ ಅಬ್ದುಲ್ ರೆಹಮಾನ (೩೬) ಹಾಗೂ ಇತರರು ಸೇರಿ, ವಧೆ ಮಾಡಿ ಮಾಂಸ ಮಾರಾಟ ಮಾಡುವ ಉದ್ದೇಶದಿಂದ ಸಕ್ಷಮ ಪ್ರಾಧಿಕಾರದ ಅನುಮತಿ ಪಡೆಯದೆ ಜಾನುವಾರುಗಳನ್ನು ಸಾಗಾಟ ಮಾಡಿರುವುದು ತಿಳಿದುಬಂದಿದೆ.
arrested/ ಭಟ್ಕಳದಲ್ಲಿ ಜಾನುವಾರು ಅಕ್ರಮ ಸಾಗಾಟ: ಒಬ್ಬ ಸೆರೆ, ಇನ್ನೊಬ್ಬ ಪರಾರಿ
ಆರೋಪಿತರು ಸುಮಾರು ೯ ಲಕ್ಷ ರೂ ಮೌಲ್ಯದ ೯ ಜಾನುವಾರುಗಳನ್ನು ಯಾವುದೋ ವಾಹನದಲ್ಲಿ ಖರೀದಿ ಮಾಡಿ ಭಟ್ಕಳಕ್ಕೆ ಸಾಗಾಟ ಮಾಡಿ ಕಟ್ಟಿ ಹಾಕಿರುವಾಗ, ಪೊಲೀಸರ ದಾಳಿ ವೇಳೆ ಸಿಕ್ಕಿಬಿದ್ದಿದ್ದಾರೆ (cattle rescued). ಈ ಬಗ್ಗೆ ಗ್ರಾಮಿಣ ಠಾಣೆ ಪಿಎಸೈ ಮಲ್ಲಿಕಾರ್ಜುನ ಕೊರಾಣಿ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.
SSLC exams/ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಭಟ್ಕಳದಲ್ಲಿ ಮೊದಲ ದಿನ ೩೫ ವಿದ್ಯಾರ್ಥಿಗಳು ಗೈರು



