ಭಟ್ಕಳ: ನಗರದ ವೆಂಕಟಾಪುರ ಜಾಗಟೆಬೈಲ್ ಸಮೀಪ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಅನಾದಿ ಕಾಲದಿಂದಲೂ ದೇವರ ಹೊರೆ ಇಳಿಸುತ್ತಿದ್ದ ಶ್ರದ್ಧಾ ಕೇಂದ್ರವಾದ ‘ಮುರಿನಕಟ್ಟೆ'(Murinakatte)ಯನ್ನು ರವಿವಾರ ಮುಂಜಾನೆ ಹಿಂದೂ ಜಾಗರಣಾ ವೇದಿಕೆಯ ಕಾರ್ಯಕರ್ತರು ಹಾಗೂ ಸ್ಥಳೀಯರು ಪುನಃ ಸ್ಥಾಪಿಸಿದ್ದಾರೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಕಳೆದ ಮೂರ್ನಾಲ್ಕು ವರ್ಷಗಳ ಹಿಂದೆ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಆರಂಭವಾದ ಸಮಯದಲ್ಲಿ ಅಲ್ಲಿದ್ದ ಮುರಿನಕಟ್ಟೆ(Murinakatte)ಯನ್ನು ತೆರವುಗೊಳಿಸಲಾಗಿತ್ತು. ಆದರೆ, ಹಿಂದೂಗಳ ಪವಿತ್ರ ಶ್ರದ್ಧಾ ಕೇಂದ್ರವಾಗಿದ್ದ ಈ ಕಟ್ಟೆಯನ್ನು ಅದೇ ಜಾಗದಲ್ಲಿ ಮರುನಿರ್ಮಾಣ ಮಾಡಿಕೊಡಬೇಕೆಂಬ ಸ್ಥಳೀಯರ ಹಾಗೂ ಹಿಂದೂ ಸಂಘಟನೆಗಳ ನಿರಂತರ ಮನವಿಗಳಿಗೆ ತಾಲೂಕು ಆಡಳಿತವಾಗಲಿ ಅಥವಾ ಜಿಲ್ಲಾಡಳಿತವಾಗಲಿ ಯಾವುದೇ ಸ್ಪಂದನೆ ನೀಡಿರಲಿಲ್ಲ. ಇದೇ ವೇಳೆ, ಮುರಿನಕಟ್ಟೆ ಇದ್ದ ಜಾಗವನ್ನು ಅನ್ಯಕೋಮಿನ ಕೆಲವರು ಅತಿಕ್ರಮಣ ಮಾಡಿಕೊಂಡು ಮನೆ ಕಟ್ಟಲು ಸಿದ್ಧತೆ ನಡೆಸುತ್ತಿದ್ದಾರೆಂಬ ಆತಂಕ ಸ್ಥಳೀಯರಲ್ಲಿ ಮನೆಮಾಡಿತ್ತು. ಈ ಹಿಂದೆ ಹಲವು ಬಾರಿ ಕಟ್ಟೆ ನಿರ್ಮಿಸಲು ಪ್ರಯತ್ನ ನಡೆದಿದ್ದರೂ, ಪೊಲೀಸ್ ಇಲಾಖೆ ಹಾಗೂ ತಾಲೂಕು ಆಡಳಿತದ ಅಡ್ಡಿಯಿಂದಾಗಿ ಕಾರ್ಯಕರ್ತರು ಕಾದು ನೋಡುವ ತಂತ್ರ ಅನುಸರಿಸಿದ್ದರು.
Chippikallu tragedy/ ಚಿಪ್ಪಿಕಲ್ಲು ದುರಂತ: ಮೃತರ ಕುಟುಂಬಕ್ಕೆ 5 ಲಕ್ಷ ರೂ ಪರಿಹಾರ
ಇತ್ತೀಚೆಗೆ ಮುರಿನಕಟ್ಟೆಯ ಹಿಂಬದಿಯಲ್ಲಿ ಮನೆ ನಿರ್ಮಾಣ ಕಾರ್ಯ ಆರಂಭವಾಗುತ್ತಿದ್ದಂತೆ ಎಚ್ಚೆತ್ತ ಸಂಘಟನೆಗಳು, ನಮ್ಮ ಪವಿತ್ರ ಸ್ಥಳ ನಮಗೆ ಬೇಕೇ ಬೇಕು ಎಂದು ಪಟ್ಟು ಹಿಡಿದು ಇಲಾಖೆಗೆ ಅಂತಿಮ ಗಡುವು ನೀಡಿದ್ದವು. ಇಲಾಖೆಯ ವತಿಯಿಂದಲೇ ಕಟ್ಟೆ ಮರುಸ್ಥಾಪಿಸಿಕೊಡಲಾಗುವುದು ಎನ್ನುವ ಭರವಸೆ ಹುಸಿಯಾಗಿ, ಅವರು ನೀಡಿದ್ದ ಕಾಲಾವಕಾಶವೂ ಮುಗಿದ ಹಿನ್ನೆಲೆಯಲ್ಲಿ ರವಿವಾರ ಮುಂಜಾನೆ ೬ ಗಂಟೆಯ ಸುಮಾರಿಗೆ ನೂರಾರು ಜನ ಕಾರ್ಯಕರ್ತರು ಒಟ್ಟಾಗಿ ಜಮಾಯಿಸಿದರು. ಸುರಿಯುವ ಭಾರಿ ಮಳೆಯನ್ನೂ ಲೆಕ್ಕಿಸದೆ, ಈ ಹಿಂದೆ ಮುರಿನಕಟ್ಟೆ ಇದ್ದ ಅದೇ ಜಾಗದಲ್ಲಿಯೇ ಹೊಸದಾಗಿ ಕಟ್ಟೆಯನ್ನು ನಿರ್ಮಿಸಿದರು.
Terrible tragedy/ ಭಟ್ಕಳದಲ್ಲಿ ಭೀಕರ ದುರಂತ: ಎಂಟು ಜನರ ದುರ್ಮರಣ
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಪೊಲೀಸರು ಧಾವಿಸಿದರು. ಇದೇ ವೇಳೆ ಅನ್ಯ ಕೋಮಿನ ಮುಖಂಡರು ಸ್ಥಳಕ್ಕೆ ಆಗಮಿಸಿ ತಕರಾರು ತೆಗೆಯಲು ಯತ್ನಿಸಿದರಾದರೂ, ಅದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಒಳಪಟ್ಟ ಜಾಗವಾಗಿದ್ದರಿಂದ ಅವರ ಆಕ್ಷೇಪಣೆಗಳು ಫಲ ನೀಡಲಿಲ್ಲ. ಅಧಿಕಾರಿಗಳು ಹಾಗೂ ಪೊಲೀಸ್ ಸಿಬ್ಬಂದಿ ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದು, ಮುರಿನಕಟ್ಟೆ ನಿರ್ಮಿಸಿದ ಪ್ರದೇಶದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ.
Bhatkal/ ಭಟ್ಕಳದ ಇಬ್ಬರಿಗೆ ಆರು ತಿಂಗಳು ಜಿಲ್ಲೆಯಿಂದ ಗಡಿಪಾರು: ಯಾಕೆ ಗೊತ್ತಾ?



