ಭಟ್ಕಳ: ಸೆಪ್ಟೆಂಬರ್ ೬ ಮತ್ತು ೭ರಂದು ದುಬೈನಲ್ಲಿ (Dubai) ನಡೆಯುತ್ತಿರುವ ವಿಶ್ವ ಜನಪದ ಉತ್ಸವ ಮೇಳಕ್ಕೆ ಭಟ್ಕಳದ (Bhatkal) ಹಾಡುವಳ್ಳಿಯ ಹಿರೇಬೀಳು ಶ್ರೀ ದುರ್ಗಾ ಡಕ್ಕೆ ಕುಣಿತ (Dakke Kunita) ಕಲಾ ತಂಡಕ್ಕೆ ಆಹ್ವಾನ ನೀಡಲಾಗಿದೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಕರ್ನಾಟಕ ಜಾನಪದ ಪರಿಷತ್ ಯುಎಇ (ದುಬೈ) ಘಟಕದ ಉದ್ಘಾಟನೆಯ ಅಂಗವಾಗಿ ಕರ್ನಾಟಕ ಜನಪದ ಪ್ರಕಾರಗಳಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಉತ್ತೇಜನ ನೀಡಲು ಜಾನಪದ ಉತ್ಸವ ಆಯೋಜನೆ ಮಾಡಲಾಗಿದೆ. ಈ ಉತ್ಸವದಲ್ಲಿ ಕರ್ನಾಟಕದ ಪ್ರಸಿದ್ಧ ಹತ್ತಕ್ಕೂ ಅಧಿಕ ಜನಪದ ಕಲಾತಂಡಗಳು ಪ್ರದರ್ಶನ ನೀಡಲಿವೆ. ಇದರಲ್ಲಿ ಉತ್ತರ ಕನ್ನಡ (Uttara Kannada) ಜಿಲ್ಲೆಯ ಭಟ್ಕಳ ತಾಲೂಕಿನ ಹಾಡುವಳ್ಳಿಯ ಹಿರೇಬೀಳು ಶ್ರೀ ದುರ್ಗಾಪರಮೇಶ್ವರಿ ಡಕ್ಕೆ ಕುಣಿತ (Dakke Kunita) ತಂಡಕ್ಕೆ ಭಾಗವಹಿಸಲು ಅವಕಾಶ ನೀಡಲಾಗಿದೆ.
ಇದನ್ನೂ ಓದಿ: Breaking News/ ಟ್ಯಾಂಕರ್ ಚಕ್ರದಡಿ ಸಿಲುಕಿ ಬೈಕ್ ಸವಾರ ಸ್ಥಳದಲ್ಲೇ ಸಾವು



