ಭಟ್ಕಳ: ಮುರ್ಡೇಶ್ವರದ (Murudeshwar) ಮಾತೋಬಾರ ದೇವಸ್ಥಾನ ಸಮೀಪದ ಬೀಚ್‌ನಲ್ಲಿ ಸಾರ್ವಜನಿಕವಾಗಿ ಗಾಂಜಾ ಸೇವನೆ ಮಾಡುತ್ತಿದ್ದಾನೆಂಬ ಆರೋಪದ ಮೇಲೆ ಯುವಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಬಂಧಿತನನ್ನು ಹಿರೇದೊಮ್ಮಿ, ಮಾವಳ್ಳಿ-0೧ ನಿವಾಸಿ ಮೊಹಮ್ಮದ್ ಕೈಫ್ (20) ಎಂದು ಗುರುತಿಸಲಾಗಿದೆ. ಮುರ್ಡೇಶ್ವರ (Murudeshwar) ಪೊಲೀಸ್ ಠಾಣೆಯ ಪಿಎಸ್‌ಐ ಹಣಮಂತ ಬಿರಾದಾರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿತನನ್ನು ವಶಕ್ಕೆ ಪಡೆದಿದ್ದಾರೆ.

Train collision/ ರೈಲು ಡಿಕ್ಕಿ: ವೃದ್ಧೆ ಸ್ಥಳದಲ್ಲೇ ಮೃತ್ಯು

ಆರೋಪಿತನನ್ನು ಬಳಿಕ ಭಟ್ಕಳ (Bhatkal) ತಾಲೂಕು ಆಸ್ಪತ್ರೆಗೆ ಕರೆದೊಯ್ದು ವೈದ್ಯಕೀಯ ಪರೀಕ್ಷೆ ನಡೆಸಲಾಗಿದ್ದು, ವರದಿಯಲ್ಲಿ ಗಾಂಜಾ ಸೇವನೆ ಪಾಸಿಟಿವ್ ಎಂದು ದೃಢಪಟ್ಟಿದೆ. ಈ ಸಂಬಂಧ ಮುರ್ಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ಕ್ರಮ ಕೈಗೊಳ್ಳಲಾಗಿದೆ.

Bike collision/ ಬೈಕ್ ಡಿಕ್ಕಿ: ಹಿಂಬದಿ ಸವಾರಗೆ ಗಾಯ