ಭಟ್ಕಳ: ಕರಾವಳಿ ನಗರ (coastal city) ಭಟ್ಕಳದಲ್ಲಿ (Bhatkal) ಬುಧವಾರ ಸಂಜೆ ನಡೆದ ದುರ್ಘಟನೆಯಲ್ಲಿ (Tragedy) ಅರಬ್ಬಿ ಸಮುದ್ರದಲ್ಲಿ (Arabian sea) ಮುಳುಗಿ ಇಬ್ಬರು ಯುವಕರು ಮೃತಪಟ್ಟ ಘಟನೆ ಮುಂಡಳ್ಳಿ ಸಮೀಪದ ಪ್ರಸಿದ್ಧ ಪ್ರವಾಸಿ ತಾಣವಾದ ನೆಸ್ತಾರ್ ಬೀಚ್‌ನಲ್ಲಿ ನಡೆದಿದೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಮೃತರನ್ನು ಉತ್ತರ ಪ್ರದೇಶ (Uttara Pradesh) ಮೂಲದ ಮಹಮ್ಮದ್ ಅಫ್ರೋಜ್ ತಂದೆ ನೂರ್ ಮೊಹಮ್ಮದ್ (೩೪) ಹಾಗೂ ರಿಜ್ವಾನ್ ಮಹಮ್ಮದ್ ಸಾಕಿರ್ (೨೭) ಎಂದು ಗುರುತಿಸಲಾಗಿದೆ. ಇವರು ಭಟ್ಕಳದ ಸ್ಥಳೀಯ ಗಾರ್ಮೆಂಟ್ಸ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ.

Janaspandan/ ಜನಸ್ಪಂದನ ಸಭೆಯಲ್ಲಿ ಸಾರ್ವಜನಿಕರ ಅಹವಾಲು ಸ್ವೀಕಾರ: ಸೀಮೆ ಎಣ್ಣೆ ದರ ಇಳಿಕೆಗೆ ಕ್ರಮಕ್ಕೆ ಮೀನುಗಾರರ ಮನವಿ

ಏಳು ಜನರ ತಂಡ ಬುಧವಾರ ಸಂಜೆ ವಾಯುವಿಹಾರಕ್ಕಾಗಿ ಬೀಚ್‌ಗೆ ತೆರಳಿತ್ತು. ಸಂಜೆ ಸುಮಾರು ೪ ಗಂಟೆ ವೇಳೆಗೆ ತಂಡದ ಮೂವರು ಸಮುದ್ರ ತೀರದಲ್ಲಿ ಕುಳಿತಿದ್ದರೆ, ಉಳಿದ ನಾಲ್ವರು ಸಮೀಪದ ಬಂಡೆ ಪ್ರದೇಶಕ್ಕೆ ಏರಿ ಸಮುದ್ರದ ಸೌಂದರ್ಯ ವೀಕ್ಷಿಸುತ್ತಿದ್ದರು. ಈ ವೇಳೆ ಏಕಾಏಕಿ ಅಬ್ಬರದ ಅಲೆ ಬಂದು ಬಂಡೆಯ ಮೇಲೆ ನಿಂತಿದ್ದ ಇಬ್ಬರನ್ನು ಸಮುದ್ರಕ್ಕೆ ಎಳೆದುಕೊಂಡು ಹೋಗಿದೆ ಎನ್ನಲಾಗಿದೆ (Tragedy).

encroachment/ ರುದ್ರಭೂಮಿ ಅತಿಕ್ರಮಣಕ್ಕೆ ಅರಣ್ಯ ಇಲಾಖೆ ಮೌನ: ಜಾಲಿಯ ದೇವಿನಗರದಲ್ಲಿ ಗ್ರಾಮಸ್ಥರ ಆಕ್ರೋಶ

ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ನೂರಾರು ಜನರು ಜಮಾಯಿಸಿದರು. ಸಾಮಾಜಿಕ ಕಾರ್ಯಕರ್ತ ಸೌದ್ ಗೌವಾಯಿ ಅವರು ಸಿಯಾನ್ ಹಾಗೂ ಸಾಜಪ್ ಸೇರಿ ಮೂವರೊಂದಿಗೆ ಪ್ರಾಣಾಪಾಯವನ್ನೂ ಲೆಕ್ಕಿಸದೆ ಸಮುದ್ರಕ್ಕಿಳಿದು ರಕ್ಷಣಾ ಕಾರ್ಯಕ್ಕೆ ಮುಂದಾದರೂ, ಅಷ್ಟರಲ್ಲೇ ಇಬ್ಬರೂ ಮೃತಪಟ್ಟಿದ್ದರು.

book released/ ಸುಧಾ ಭಂಡಾರಿ ಅವರ ೧೧ ನೇ ಕೃತಿ ಬಿಡುಗಡೆ, ರಾಗ ಲಹರಿ ಕಾರ್ಯಕ್ರಮ

ಬಳಿಕ ರಕ್ಷಣಾ ತಂಡ ಇಬ್ಬರ ಮೃತದೇಹಗಳನ್ನು ಸಮುದ್ರದಿಂದ ಹೊರತೆಗೆದಿತು. ಮಾಹಿತಿ ಪಡೆದ ಭಟ್ಕಳ ಡಿವೈಎಸ್ಪಿ ಗಿರೀಶ, ಗ್ರಾಮೀಣ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ವೆಂಕಟೇಶ ಹಾಗೂ ಕರಾವಳಿ ಭದ್ರತಾ ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

Karate students/ ಎಸ್ಸೆಸ್ಸೆಲ್ಸಿಯಲ್ಲಿ ಉತ್ತಮ ಸಾಧನೆ ಮಾಡಿದ ಕರಾಟೆ ವಿದ್ಯಾರ್ಥಿಗಳಿಗೆ ಸನ್ಮಾನ