ಭಟ್ಕಳ: ಅಕ್ರಮವಾಗಿ ಜಾನುವಾರುಗಳನ್ನು ಸಾಗಾಟ ಮಾಡಿ ವಧೆ ಮಾಡಲು ಯತ್ನಿಸಿದ ಪ್ರಕರಣವನ್ನು ಪೊಲೀಸರು ಭೇದಿಸಿ, ಎರಡು ಎತ್ತುಗಳನ್ನು ರಕ್ಷಿಸಿ (bulls rescued) ವಶಕ್ಕೆ ಪಡೆದಿದ್ದಾರೆ. ಬಂದರ್ ರಸ್ತೆಯ ೩ನೇ ಕ್ರಾಸ್ ನಿವಾಸಿ ಮಹಮ್ಮದ್ ಶಿಯಾಮ್ (೪೨) ಸೇರಿದಂತೆ ಇತರರು ಸೇರಿಕೊಂಡು ಸುಮಾರು ₹೨ ಲಕ್ಷ ಮೌಲ್ಯದ ಎರಡು ಎತ್ತುಗಳನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದರೆಂದು ಆರೋಪಿಸಲಾಗಿದೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಆರೋಪಿಗಳು ಬಂದರ್ ರಸ್ತೆಯ ೬ನೇ ಕ್ರಾಸ್ ಸಮೀಪದ ಖಾಲಿ ಜಾಗಕ್ಕೆ ವಾಹನದ ಮೂಲಕ ಎತ್ತುಗಳನ್ನು ತಂದು, ಅವುಗಳಿಗೆ ನೀರು ಹಾಗೂ ಮೇವು ನೀಡದೆ ಕಟ್ಟಿ ಹಾಕಿ, ವಧೆ ಮಾಡುವ ಉದ್ದೇಶದಿಂದ ಬೇರೆಡೆಗೆ ಸಾಗಿಸಲು ಸಿದ್ಧತೆ ನಡೆಸುತ್ತಿದ್ದರು ಎನ್ನಲಾಗಿದೆ. ಖಚಿತ ಮಾಹಿತಿಯ ಮೇರೆಗೆ ಪೊಲೀಸರು ದಾಳಿ ನಡೆಸಿ, ಸ್ಥಳದಲ್ಲಿದ್ದ ಎರಡು ಎತ್ತುಗಳನ್ನು ರಕ್ಷಿಸಿ (bulls rescued) ವಶಕ್ಕೆ ಪಡೆದಿದ್ದಾರೆ.
camels transporting/ ೮ ಒಂಟೆ ಸಾಗಿಸುತ್ತಿದ್ದ ಮೂವರ ಬಂಧನ
ಈ ಸಂಬಂಧ ಆರೋಪಿಯ ವಿರುದ್ಧ ಸರ್ಕಾರದ ಪರವಾಗಿ ಭಟ್ಕಳ (Bhatkal) ಶಹರ ಠಾಣೆಯ ಪಿಎಸ್ಐ ತಿಮ್ಮಪ್ಪ ಎಸ್ ದೂರು ದಾಖಲಿಸಿದ್ದಾರೆ (case filed). ಆರೋಪಿಗಳ ವಿರುದ್ಧ ಕರ್ನಾಟಕ ಗೋಹತ್ಯೆ ನಿರ್ಬಂಧ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.



