ಭಟ್ಕಳ: ಅಕ್ರಮವಾಗಿ ಒಂಟೆಗಳನ್ನು ಸಾಗಾಟ ಮಾಡುತ್ತಿದ್ದ (camels transporting) ಮೂವರು ಆರೋಪಿಗಳನ್ನು ಭಟ್ಕಳ (Bhatkal) ಗ್ರಾಮೀಣ ಪೊಲೀಸ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ಮಧ್ಯಪ್ರದೇಶದ (Madhya Pradesh) ಕರಣ ಬಾಬರ (೨೬), ಕೊಲ್ಲಾಪುರದ (Kolhapur) ಸುಹಾಸ ಸೂರ್ಯವಂಶಿ (೨೨) ಹಾಗೂ ಯಶ ಗೋಟಕಿಂಡೆ (೧೯) ಎಂದು ಗುರುತಿಸಲಾಗಿದೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಪೊಲೀಸರ ಮಾಹಿತಿ ಪ್ರಕಾರ, ಶಿರಾಲಿ ಕಡೆಯಿಂದ ಉಳ್ಳಾಲ (Ullal) ಕಡೆಗೆ ಲಾರಿ ಮೂಲಕ ಸುಮಾರು ₹ ೩.೭೫ ಲಕ್ಷ ರೂಪಾಯಿ ಮೌಲ್ಯದ ೮ ಒಂಟೆಗಳನ್ನು ಹಿಂಸಾತ್ಮಕವಾಗಿ ಕಟ್ಟಿ ಸಾಗಾಟ ಮಾಡಲಾಗುತ್ತಿತ್ತು (camels transporting). ಆರೋಪಿಗಳು ಒಂಟೆಗಳಿಗೆ ನೀರು ಹಾಗೂ ಮೇವು ನೀಡದ, ಜಾನುವಾರು ಸಾಗಾಟಕ್ಕೆ ಅಗತ್ಯವಾದ ಸಕ್ಷಮ ಪ್ರಾಧಿಕಾರದ ಪರವಾನಿಗೆಯಿಲ್ಲದೇ ಅಕ್ರಮವಾಗಿ ಸಾಗಾಟ ನಡೆಸುತ್ತಿದ್ದರು ಎಂದು ತಿಳಿದುಬಂದಿದೆ.

horticulture/ ತೋಟಗಾರಿಕೆಗೆ ಸಹಾಯಧನ ಬೇಕೇ? ಅರ್ಜಿ ಸಲ್ಲಿಸಿ

ಈ ವೇಳೆ ಪೊಲೀಸರು ಲಾರಿಯನ್ನು ತಡೆದು ಪರಿಶೀಲನೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಲಾರಿ ಸಹಿತ ಒಂಟೆಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಕುರಿತು ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯ ದೂರು ದಾಖಲಾಗಿದೆ.

Leopards/ ಕೋಣಾರ ಭಾಗದಲ್ಲಿ ಚಿರತೆಗಳ ಓಡಾಟ