ಭಟ್ಕಳ: ೨೦೨೫-೨೬ನೇ ಸಾಲಿನಲ್ಲಿ ನಡೆದ ಭಟ್ಕಳ ವಲಯ ಮಟ್ಟದ ಹಾಗೂ ತಾಲೂಕು ಮಟ್ಟದ ಇಲಾಖಾ ಕ್ರೀಡಾಕೂಟದಲ್ಲಿ ಮಣ್ಕುಳಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳು ಚೆಸ್ (Chess) ಸ್ಪರ್ಧೆಯಲ್ಲಿ ಉತ್ತಮ ಸಾಧನೆಗೈದಿದ್ದಾರೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಭಟ್ಕಳ (Bhatkal) ನಗರದ ಸರಕಾರಿ ಹೆಣ್ಣು ಮಕ್ಕಳ ಶಾಲೆಯಲ್ಲಿ ನಡೆದ ವಲಯ ಮಟ್ಟದ ಕ್ರೀಡಾಕೂಟದ ಚೆಸ್ (Chess) ಸ್ಪರ್ಧೆ ಯಲ್ಲಿ ೭ನೇ ತರಗತಿಯ ವಿದ್ಯಾರ್ಥಿ ಗಗನ್ ನಿಲೇಶ ನಾಯ್ಕ ಮತ್ತು ಮನ್ವಿತಾ ಶ್ರೀಕಾಂತ ನಾಯ್ಕ ಜಯಗಳಿಸುವುದರ ಮೂಲಕ ತಾಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದರು. ನಂತರ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ತಾಲೂಕಾ ಮಟ್ಟದ ಕ್ರೀಡಾಕೂಟದಲ್ಲಿ ಗಗನ್ ನಿಲೇಶ ನಾಯ್ಕ ಪ್ರಥಮ ಸ್ಥಾನ ಜಯಗಳಿಸುವುದರ ಮೂಲಕ ಉತ್ತರ ಕನ್ನಡ (Uttara Kannada) ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾನೆ.

ಇದನ್ನೂ ಓದಿ: Lok Adalat/ ಸೆ ೧೩ರಂದು ಭಟ್ಕಳದಲ್ಲಿ ಲೋಕ ಅದಾಲತ್‌