ಭಟ್ಕಳ: ತಾಲೂಕಿನ ಶಿರಾಲಿಯ ಕೋಟೆಬಾಗಿಲಿನ ಸೇಂಟ್ ಥಾಮಸ್ ಇಂಗ್ಲಿಷ್ ಮೀಡಿಯಂ ಶಾಲೆಯ ವಿದ್ಯಾರ್ಥಿನಿ ಶ್ರೀಶಾ ಶ್ರೀಧರ ಶೇಟ ಈ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯ (SSLC exam) ಮರುಮೌಲ್ಯಮಾಪನದ (revaluation) ನಂತರ ನಾಲ್ಕು ಅಂಕ ಹೆಚ್ಚು ಗಳಿಸಿ ರಾಜ್ಯಕ್ಕೆ ೧೦ನೇ ರ‍್ಯಾಂಕ್ ಗಳಿಸಿದ್ದಾಳೆ.

ವಿಡಿಯೋ ಸುದ್ದಿಗಾಗಿ ಮತ್ತು ಮಾಹಿತಿಗಾಗಿ ಭಟ್ಕಳ ಡೈರಿ ಫೇಸ್ಬುಕ್ ಪೇಜ್ ಲಿಂಕ್ ಇಲ್ಲಿ ಕ್ಲಿಕ್ ಮಾಡಿ

ಯಾವುದೇ ಕೋಚಿಂಗ್ ಅಥವಾ ಟ್ಯೂಶನ್ ಗೆ ಹೋಗದೆ, ಗುರುಗಳು ಮತ್ತು ಪಾಲಕರು ಕಲಿಸಿದ್ದನ್ನು ಅಧ್ಯಯನ ಮಾಡಿ, ಈ ವರ್ಷದ  ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ (SSLC exam) ೬೨೫ ಅಂಕಗಳಿಗೆ ೬೧೬ ಅಂಕಗಳನ್ನು (ಶೇ.೯೮.೫೬) ಗಳಿಸಿ ರಾಜ್ಯಕ್ಕೆ ಹತ್ತನೇ ರ‍್ಯಾಂಕ್ ಮತ್ತು ಶಿರಾಲಿಯ ಸೇಂಟ್ ಥಾಮಸ್ ಇಂಗ್ಲಿಷ್ ಮೀಡಿಯಂ ಶಾಲೆಗೆ ಪ್ರಥಮ ರ‍್ಯಾಂಕ್ ಗಳಿಸಿರುತ್ತಾಳೆ.

car collision/ ಭಟ್ಕಳದಲ್ಲಿ ಎರಡು ಕಾರುಗಳು ಡಿಕ್ಕಿ ಹೊಡೆದು ನಾಲ್ವರಿಗೆ ಗಾಯ 

ಬಹುಮುಖ ಪ್ರತಿಭೆಯ ವಿದ್ಯಾರ್ಥಿನಿಯಾಗಿರುವ ಈಕೆ, ಪಠ್ಯೇತರ ಚಟುವಟಿಕೆಗಳಲ್ಲೂ ಮುಂದಿದ್ದು, ಉತ್ತಮ ಚಿತ್ರ ಕಲಾವಿದೆಯೂ ಆಗಿ ಹೆಸರು ಮಾಡಿದ್ದಾಳೆ. ಭಟ್ಕಳದ (Bhatkal) ಝೇಂಕಾರ್ ಕಲಾ ಶಾಲೆಯ ಚಿತ್ರಕಲಾ ಶಿಕ್ಷಕ ಸಂಜಯ ಗುಡಿಗಾರರವರಲ್ಲಿ ತರಬೇತಿ ಪಡೆದಿದ್ದು, ಜ್ಯೂನಿಯರ್ ಮತ್ತು ಸಿನೀಯರ್ ಗ್ರೇಡ್ ಪರೀಕ್ಷೆಗಳನ್ನು ಅತ್ಯುತ್ತಮ ಶ್ರೇಣಿಯಲ್ಲಿ ಉತ್ತೀರ್ಣಳಾಗಿರುತ್ತಾಳೆ. ಭಟ್ಕಳ ತಾಲೂಕಿನ ಅಳ್ವೆಕೋಡಿಯಲ್ಲಿ ಜರುಗಿದ ೧೧ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಇವಳ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನ ಏರ್ಪಡಿಸಲಾಗಿತ್ತು. ಉತ್ತಮ ಭಾಷಣಗಾರ್ತಿ ಮತ್ತು ಕಾರ್ಯಕ್ರಮ ನಿರೂಪಕಿ ಎಂಬ ಹೆಗ್ಗಳಿಕೆಗೆ ಪಾತ್ರಳಾಗಿರುವ ಈಕೆ ಯಕ್ಷಗಾನ ನೃತ್ಯದಲ್ಲೂ ಪಳಗಿದ್ದಾಳೆ.

Gonda community/ ಪರಿಶಿಷ್ಟ ಜಾತಿ ಪ್ರಮಾಣ ಪತ್ರಕ್ಕೆ ಆಗ್ರಹಿಸಿ ಗೊಂಡ ಸಮುದಾಯದ ಬೃಹತ್ ಪ್ರತಿಭಟನಾ ಮೆರವಣಿಗೆ

ಇವಳು ರಾಜ್ಯ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಹಾಗೂ ಸಾಹಿತಿ ಶ್ರೀಧರ ಶೇಟ್ ಶಿರಾಲಿ ಮತ್ತು ಶಿಕ್ಷಕಿ ಹೇಮಲತಾ ದಂಪತಿಯ ಸುಪುತ್ರಿ. ಈಕೆಯ ಈ ಸಾಧನೆಗೆ ಶಾಲಾ ಮುಖ್ಯೋಪಾಧ್ಯಾಯ ಸ್ಯಾಮ್ಯುಯೆಲ್ ವರ್ಗಿಸ್, ಶಿಕ್ಷಕ ವೃಂದ ಮತ್ತು ಸಂಘ ಸಂಸ್ಥೆಗಳ ಮುಖ್ಯಸ್ಥರು ಅಭಿನಂದನೆ ತಿಳಿಸಿದ್ದಾರೆ.

power outages/ ಮಣ್ಣಕುಳಿ ಭಾಗದಲ್ಲಿ ನಿರಂತರ ವಿದ್ಯುತ್ ವ್ಯತ್ಯಯ: ಹೆಸ್ಕಾಂ ವಿರುದ್ಧ ಸಾರ್ವಜನಿಕರ ಆಕ್ರೋಶ