ಭಟ್ಕಳ: ಮುರುಡೇಶ್ವರದ ಕಡಲತೀರದಲ್ಲಿ (Murudeshwar beach) ಗಾಂಜಾ ಸೇವಿಸಿದ ಬೆಂಗಳೂರಿನ ಇಬ್ಬರು ವಿದ್ಯಾರ್ಥಿಗಳನ್ನು ಮುರುಡೇಶ್ವರ (Murudeshwara) ಪೊಲೀಸ್ ಠಾಣೆ ಪಿ ಎಸ್ ಐ ಹಣಮಂತ ಬಿರಾದಾರ ಬಂಧಿಸಿ ಕ್ರಮ ಕೈಗೊಂಡಿದ್ದಾರೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಬೆಂಗಳೂರಿನ ಬನಶಂಕರಿ ನಿವಾಸಿ ಸತೀಶ ತಂದೆ ಸೆಲ್ವರಾಜ್ (೨೧), ಬೆಂಗಳೂರು ದಕ್ಷಿಣದ ಬೊಮ್ಮನಹಳ್ಳಿ ನಿವಾಸಿ ಮೋನಿಶ್ ಬಾಬು ತಂದೆ ಭಾಸ್ಕರರೆಡ್ಡಿ (೧೮) ಬಂಧಿತ ವಿದ್ಯಾರ್ಥಿಗಳು. ಇವರಿಬ್ಬರೂ ದಿನಾಂಕ: ೨೦-೦೨-೨೦೨೬ರಂದು ಸಾಯಂಕಾಲ ೧೮-೩೦ ಗಂಟೆಯ ಸುಮಾರಿಗೆ ಮುರ್ಡೇಶ್ವರದ (Murudeshwara) ಮ್ಹಾತೋಬಾರ ದೇವಸ್ಥಾನದ ಹತ್ತಿರದ ಬೀಚ್‌ನ ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಮಾದಕ ವಸ್ತುವನ್ನು ಸೇವನೆ ಮಾಡಿದ ಅನುಮಾನದ ಮೇಲೆ ಪಿಎಸ್‌ಐ ಹಣಮಂತ ಬಿರಾದಾರ ವಶಕ್ಕೆ ಪಡೆದಿದ್ದರು. ಇವರು ಗಾಂಜಾ ಸೇವನೆ ಮಾಡಿರುವ ಬಗ್ಗೆ ಭಟ್ಕಳ ತಾಲೂಕು ಆಸ್ಪತ್ರೆಯ ವೈದ್ಯಾಧಿಕಾರಿಯಿಂದ ವೈದ್ಯಕೀಯ ಪರೀಕ್ಷೆ ಮಾಡಿಸಿದಾಗ ವೈದ್ಯಕೀಯ ಪರೀಕ್ಷಾ ವರದಿಯಲ್ಲಿ ಗಾಂಜಾ ಸೇವನೆ ಮಾಡಿರುವುದು ದೃಢಪಟ್ಟಿದೆ.

Vardhanthi utsava/ ವಾಸುಕಿ ಸರ್ಪ ದೇವಸ್ಥಾನದ ವರ್ಧಂತ್ಯುತ್ಸವ, ಗುರುವಂದನೆ