ಕುಮಟಾ: ಗೋಕರ್ಣ (Gokarna) ಮತ್ತು ಕುಮಟಾ (Kumta) ರೈಲ್ವೆ ನಿಲ್ದಾಣದ ನಡುವೆ ಹಳಿಯ ಮೇಲೆ ಭಟ್ಕಳದ (Bhatkal) ಯುವಕನೊಬ್ಬ ರಕ್ತದ ಮಡುವಿನಲ್ಲಿ ಸಾವನಪ್ಪಿದ್ದು, ಕುಟುಂಬದವರು ಆಘಾತಕ್ಕೊಳಗಾಗಿದ್ದಾರೆ. ಈ ಮಾರ್ಗದಲ್ಲಿ ಸಂಚರಿಸುತ್ತಿದ್ದ ರೈಲಿನಿಂದ (moving train) ಭಟ್ಕಳದ ಯುವಕನನ್ನು ಸಹ ಪ್ರಯಾಣಿಕರು ರೈಲಿನಿಂದ ದೂಡಿ ಸಾಯಿಸಿರಬೇಕೆಂಬ ಅನುಮಾನ ಯುವಕನ ಪಾಲಕರನ್ನು ಕಾಡುತ್ತಿದೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಭಟ್ಕಳ (Bhatkal) ತಾಲೂಕಿನ ಹೆಬಳೆಯ ಗಾಂಧಿನಗರದ ಬುಸಾರಮನೆಯ ಯತೀನ್ ಲಕ್ಷ್ಮಣ ಮೊಗೇರ ಮೃತ ದುರ್ದೈವಿ. ೧೮ ವರ್ಷದ ಯತೀನ್ ಕಾಲೇಜು ವಿದ್ಯಾರ್ಥಿಯಾಗಿದ್ದು, ಜೂನ್ ೧೨ರ ಸಂಜೆ ಗೋಕರ್ಣದಿಂದ ಭಟ್ಕಳದ ಕಡೆ ಸಾಗುವ ರೈಲಿನಲ್ಲಿ ಸಂಚರಿಸುತ್ತಿದ್ದರು. ಆ ರೈಲು ನುಶಿಕೋಟೆ ಬಳಿ ಬಂದಾಗ ಯತೀನ್ ಮೊಗೇರ ಅವರು ರೈಲಿನಿಂದ ಕೆಳಗೆ ಬಿದ್ದಿದ್ದಾರೆ. ಅಲ್ಲಿಯೇ ಅವರು ಗಾಯಗೊಂಡು ಸಾವನ್ನಪ್ಪಿದ್ದಾರೆ. ಸಂಜೆ ೫.೩೦ರಿಂದ ೭.೩೦ರ ಅವಧಿಯಲ್ಲಿ ಈ ಅವಘಡ ನಡೆದಿದೆ.
Followup/ ಸಾಲ ತಗೊಂಡವ ಮರಳಿಸದ್ದೆ ವಿದ್ಯಾರ್ಥಿನಿ ಸಾವಿಗೆ ಕಾರಣವಾಯಿತಾ?
ಯತೀನ್ ಮೊಗೇರ ಅವರು ಆತ್ಮಹತ್ಯೆ ಮಾಡಿಕೊಳ್ಳುವ ಮನಸ್ಥಿತಿಯವರಲ್ಲ. ಕಾಲು ಜಾರಿ ರೈಲಿನಿಂದ ಬೀಳುವ ಸಾಧ್ಯತೆ ಕಡಿಮೆ. ಅವರ ಜೊತೆಯಿದ್ದವರೇ ರೈಲಿನಿಂದ ದೂಡಿ ಕೊಲೆ ಮಾಡಿದ್ದಾರೆ ಎಂದು ಮಗನ ಸಾವಿನ ಬಗ್ಗೆ ಲಕ್ಷ್ಮಣ ನಾರಾಯಣ ಮೊಗೇರ ಅವರು ಅನುಮಾನ ವ್ಯಕ್ತಪಡಿಸಿದ್ದಾರೆ. ಸಾವಿನ ಸಮಗ್ರ ತನಿಖೆ ನಡೆಯಬೇಕು ಎಂದು ಅವರು ಒತ್ತಾಯಿಸಿದ್ದಾರೆ. ಗೋಕರ್ಣ ಪೊಲೀಸರು ಪ್ರಕರಣ ದಾಖಲಿಸಿದ್ದು, ತನಿಖೆ ಶುರು ಮಾಡಿದ್ದಾರೆ.
Vader Swami/ ವಡೇರ ಸ್ವಾಮಿ ಭಟ್ಕಳದಲ್ಲಿ ವಾಸ್ತವ್ಯ: ಆಶೀರ್ವಾದ ಪಡೆದ ಸುನೀಲ ನಾಯ್ಕ



