ಭಟ್ಕಳ: ಮುರಿನಕಟ್ಟೆಗೆ (Murinakatte) ಪರ್ಯಾಯವಾಗಿ ಜಿಲ್ಲಾಡಳಿತದ ನಿರ್ಮಾಣ ಹಲವು ಅನುಮಾನ, ಆಕ್ರೋಶಕ್ಕೆ ಕಾರಣವಾಗಿದೆ. ಇದು ಕೇವಲ ಹಿಂದೂಗಳ ಕಣ್ಣೊರೆಸುವ ತಂತ್ರ ಎಂದು ಹಿಂದೂ ಸಂಘಟನೆಗಳ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಹೆದ್ದಾರಿಯ ಡಿವೈಡರ್ ಮಧ್ಯದಲ್ಲಿ ೭*೧೫ ಅಡಿ ಜಾಗ ಮೀಸಲಿಟ್ಟು, ಅದಕ್ಕೆ ಸಿಮೆಂಟ್ ನಿಂದ ಬೆಡ್ ಹಾಕಿ, ಗ್ರೀಲ್ ಅಳವಡಿಸಿ ಮುರಿನಕಟ್ಟೆ ಎಂದು ಗುರುತಿಸಲಾಗಿದ್ದು, ಮತ್ತೆ ವಿವಾದ ಭುಗಿಲೇಳುವಂತೆ ಮಾಡಲಾಗಿದೆ.

Bhatkal/ ಭಟ್ಕಳದ ವಿದ್ಯಾರ್ಥಿಗೆ ಚಲಿಸುತ್ತಿರುವ ರೈಲಿನಿಂದ ದೂಡಿದ್ರಾ ?

ಹೆದ್ದಾರಿ ಕಾಮಗಾರಿಗಾಗಿ ತೆರವುಗೊಳಿಸಿದ್ದ ಅಮ್ಮನ ಹೊರೆ ಇಡುವ ಮುರಿನಕಟ್ಟೆಗೆ ಬದಲಾಗಿ ಕಳೆದ ಮೇ ೨೪ರಂದು ತಾಲೂಕು ಆಡಳಿತ ಹಾಗೂ ಸ್ಥಳೀಯರ ಸಹಕಾರದೊಂದಿಗೆ ೧೦*೧೦ ಅಡಿ ಕಟ್ಟೆ ನಿರ್ಮಿಸಲಾಗಿತ್ತು. ಆದರೆ ಅದೇ ದಿನ ಮತಾಂಧ ದುಷ್ಕರ್ಮಿಗಳು ಅದನ್ನು ಧ್ವಂಸಗೊಳಿಸಿದ್ದರು. ಈ ಘಟನೆಯನ್ನು ಖಂಡಿಸಿ ಬಿಜೆಪಿ (BJP) ಹಾಗೂ ಹಿಂದೂ ಸಂಘಟನೆಗಳು (Hindu organisation) ಪ್ರತಿಭಟನೆ ನಡೆಸಿದ್ದವು. ಬಳಿಕ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ (Kageri) ಅವರು ಹೆದ್ದಾರಿ ಡಿವೈಡರ್‌ನಲ್ಲಿ ಪರ್ಯಾಯ ವ್ಯವಸ್ಥೆ ನಿರ್ಮಿಸಲಾಗುವುದು ಎಂದು ತಿಳಿಸಿದ್ದರು. ಆದರೆ, ಇದೀಗ ನಿರ್ಮಿಸಿರುವ ವ್ಯವಸ್ಥೆ ಹಿಂದೂ ಭಾವನೆಗೆ ಧಕ್ಕೆ ತರುವಂತಾಗಿದ್ದು, ಹಿಂದೂಗಳ ಧಾರ್ಮಿಕ ಭಾವನೆಗೆ ತಕ್ಕಂತೆ ಇಲ್ಲ ಎಂದು ಹಿಂದೂ ಸಂಘಟನೆಗಳ ಕಾರ್ಯಕರ್ತರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

Followup/ ಸಾಲ ತಗೊಂಡವ ಮರಳಿಸದ್ದೆ ವಿದ್ಯಾರ್ಥಿನಿ ಸಾವಿಗೆ ಕಾರಣವಾಯಿತಾ?

ಸಭೆಯಲ್ಲಿ ತೋರಿಸಿದ ನಕ್ಷೆಯಂತೆ ಕಟ್ಟೆ ನಿರ್ಮಾಣವಾಗಿಲ್ಲ ಎಂದು ಹಿಂದೂ ಮುಖಂಡರು ದೂರಿದ್ದಾರೆ. “೩ ಅಡಿ ಎತ್ತರದ ಕಟ್ಟೆ ನಿರ್ಮಿಸಿ ಅದರ ಸುತ್ತ ಗ್ರೀಲ್ ಅಳವಡಿಸಬೇಕೆಂದು ಆಗ್ರಹಿಸಿದ್ದೇವು. ಆದರೆ, ನೆಲಕ್ಕೆ ಕಾಂಕ್ರಿಟ್ ಹಾಕಿ ಗ್ರೀಲ್ ಅಳವಡಿಸಲಾಗಿದೆ. ಈಗ ಮಾಡಿರುವ ವ್ಯವಸ್ಥೆ ಮೂಲ ಮುರಿನಕಟ್ಟೆಯ ಅಸ್ತಿತ್ವವನ್ನೇ ಪ್ರಶ್ನಿಸುವಂತಿದೆ” ಎಂದು ಅಸಮಾಧಾನ ಹೊರಹಾಕಿದ್ದಾರೆ.

municipal officials/ ಸ್ಪಂದಿಸದ ನಗರಸಭೆ ಅಧಿಕಾರಿಗಳು: ಹೆದ್ದಾರಿ ತಡೆ ಪ್ರತಿಭಟನೆಯ ಎಚ್ಚರಿಕೆ 

ಬಿಜೆಪಿಯ ಪ್ರಮುಖರು ಈ ವಿಷಯವನ್ನು ಸಂಸದರ ಗಮನಕ್ಕೆ ತಂದಿದ್ದಾರೆ. ಭಟ್ಕಳಕ್ಕೆ ಬಂದು ಪರಿಸ್ಥಿತಿ ಅವಲೋಕಿಸುವಂತೆ ಮನವಿ ಮಾಡಿದ್ದಾರೆ. ಸಂಸದರು ಅತಿ ಶೀಘ್ರದಲ್ಲಿ ಬರುವ ಮುನ್ಸೂಚನೆಯೂ ಸಿಕ್ಕಿದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.

College Student/ ಭಟ್ಕಳದ ಕಾಲೇಜು ವಿದ್ಯಾರ್ಥಿನಿ ಬಾವಿಯಲ್ಲಿ ಶವವಾಗಿ ಪತ್ತೆ

ಅಧಿಕಾರಿಗಳು ತರಾತುರಿಯಲ್ಲಿ ಮಾಡಿದ ಕೆಲಸಕ್ಕೆ ಭಟ್ಕಳದ ಹಿಂದೂ ಸಮಾಜ ತೀವ್ರ ವಿರೋಧ ವ್ಯಕ್ತಪಡಿಸಿದೆ. “ಗ್ರಾಮಸ್ಥರ ಜೊತೆ ಸೇರಿ ಮುರಿನಕಟ್ಟೆಗಾಗಿ ಹೋರಾಟ ಮಾಡಿದ್ದಾಗಿತ್ತು. ಆದರೆ ಅಧಿಕಾರಿಗಳು ಯಾರದೋ ವ್ಯಕ್ತಿಗಳಿಗೆ ಸಮಾಧಾನ ಪಡಿಸಲು ಈ ರೀತಿ ಮಾಡಿದಂತಿದೆ” ಎಂದು ದೇವಿಯ ಶಕ್ತಿ ಸ್ಥಳಕ್ಕಾಗಿ ಹೋರಾಟ ಮಾಡಿದವರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. “ನಾವು ಈ ಕಟ್ಟೆಗಾಗಿ ಹೋರಾಟ ಮಾಡಿದ್ದಾ?” ಎಂಬ ಪ್ರಶ್ನೆ ಹೊರಹಾಕುತ್ತಿದ್ದಾರೆ.

BJP/ ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಸುಬ್ರಾಯ ದೇವಾಡಿಗ ಅಸಮಾಧಾನ: ಫೇಸ್‌ಬುಕ್ ಪೋಸ್ಟ್‌ಗೆ ಕಾರ್ಯಕರ್ತರಿಂದ ಮಿಶ್ರ ಪ್ರತಿಕ್ರಿಯೆ