ಭಟ್ಕಳ: ರೈಲಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಯುವ ಕಾರ್ಮಿಕನೊಬ್ಬ ಕೆಳಗೆ ಬಿದ್ದು (falling from train) ಮೃತಪಟ್ಟ ದುರ್ಘಟನೆ ತಾಲೂಕಿನ ಗೊರಟೆ ಸಮೀಪದಲ್ಲಿ ನಡೆದಿದೆ. ಮೃತನನ್ನು ಬಿಹಾರ (Bihar) ರಾಜ್ಯದ ನಿವಾಸಿ ಅಭಿನಾಶ್ ಕುಮಾರ್ ತಂದೆ ಶಂಕರ್ ಮಡಲ್ (೨೮) ಎಂದು ಗುರುತಿಸಲಾಗಿದೆ. ಅವರು ಕೂಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದರು.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ನಿಜಾಮುದ್ದೀನ್‌ನಿಂದ (Nizamuddin) ಎರ್ನಾಕುಳಂಗೆ (Ernakulam) ತೆರಳುತ್ತಿದ್ದ ಮಂಗಳೂರು (Bengaluru) ಲಕ್ಷದ್ವೀಪ ಎಕ್ಸ್‌ಪ್ರೆಸ್ (Lakshadweep express) ರೈಲಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ, ಭಟ್ಕಳ (Bhatkal) ತಾಲೂಕಿನ ಗೊರಟೆ ಸಮೀಪ ರೈಲು ಸಂಚರಿಸುತ್ತಿದ್ದಾಗ ಅಚಾನಕ್ ನಿಯಂತ್ರಣ ತಪ್ಪಿ ಕೆಳಗೆ ಬಿದ್ದ ಪರಿಣಾಮ (falling from train) ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಈ ಕುರಿತು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
bike Owner fined / ಅಪ್ರಾಪ್ತಗೆ ಬೈಕ್ ಚಾಲನೆಗೆ ಅವಕಾಶ: ಮಾಲೀಕಗೆ ₹25 ಸಾವಿರ ದಂಡ



