ಭಟ್ಕಳ: ಅಂಕೋಲಾದ (Ankola) ಶೆಟಗೇರಿಯ ಸತ್ಯಾಗ್ರಹ ಸ್ಮಾರಕ ವಿದ್ಯಾಲಯದಲ್ಲಿ ನಡೆದ ಉತ್ತರ ಕನ್ನಡ (Uttara Kannada) ಜಿಲ್ಲಾ ಮಟ್ಟದ ಚರ್ಚಾ ಸ್ಪರ್ಧೆಯಲ್ಲಿ (debate competition) ಚಿತ್ರಾಪುರ ಮಠದ ಆಡಳಿತದಲ್ಲಿ ಬರುವ ಶ್ರೀವಲ್ಲಿ ಪ್ರೌಢಶಾಲೆಯ ವಿದ್ಯಾರ್ಥಿ ನಾಗರಾಜ ಕೃಷ್ಣ ನಾಯ್ಕ ಚರ್ಚಾ ಸ್ಪರ್ಧೆಯಲ್ಲಿ (debate competition) ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದಾನೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಸತ್ಯಾಗ್ರಹ ಸ್ಮಾರಕ ವಿದ್ಯಾಲಯ ಶೆಟಗೇರಿ ಇವರು ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಆಯೋಜನೆ ಮಾಡುತ್ತಿರುವ ಅರವತ್ತೆರಡನೇ ಚರ್ಚಾ ಸ್ಪರ್ಧೆ ಇದಾಗಿದ್ದು, “ಎಸ್ ಎಸ್ ಎಲ್ ಸಿ ತೇರ್ಗಡೆಗೆ ೩೩ ಅಂಕಗಳನ್ನು ನಿಗದಿಪಡಿಸಿರುವ ಕ್ರಮ ವಿದ್ಯಾರ್ಥಿಗಳ ಕಲಿಕೆಗೆ ಪೂರಕವಾಗಿದೆ” ಎಂಬ ವಿಷಯದ ಬಗ್ಗೆ ಪರ ಮತ್ತು ವಿರೋಧ ಕುರಿತು ಚರ್ಚಾ ಸ್ಪರ್ಧೆ ಏರ್ಪಡಿಸಲಾಗಿತ್ತು.

ಇದನ್ನು ಓದಿ: series of accidents/ ಭಟ್ಕಳದಲ್ಲಿ ಭೀಕರ ಸರಣಿ ಅಪಘಾತ 

ಈ ವಿಷಯದ ಕುರಿತು ಪರವಾಗಿ ಮಾತನಾಡಿದ ನಾಗರಾಜ ಕೃಷ್ಣ ನಾಯ್ಕ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದುಕೊಂಡಿರುತ್ತಾನೆ. ವಿರೋಧವಾಗಿ ಮಾತನಾಡಿದ ಲಿಖಿತಾ ನಾಯ್ಕ ಪ್ರೋತ್ಸಾಹದಾಯಕ ಬಹುಮಾನ ಪಡೆದುಕೊಂಡಿರುತ್ತಾಳೆ.

ಇದನ್ನು ಓದಿ: P U College/ ಪಿಯು ಕಾಲೇಜಿಗೆ ನೂತನ ಕಟ್ಟಡ

ಜಿಲ್ಲೆಯಿಂದ ಸುಮಾರು ೩೦ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಭಾಗವಹಿಸಿದ್ದು, ಈ ಸ್ಪರ್ಧೆಯಲ್ಲಿ ಸಾಧನೆಗೈದ ವಿದ್ಯಾರ್ಥಿಗಳನ್ನು ಶ್ರೀವಲ್ಲಿ ಶಿಕ್ಷಣ ಟ್ರಸ್ಟ್ ನ ಶೈಕ್ಷಣಿಕ ಸಲಹೆಗಾರರಾದ ಡಾ. ರವೀಂದ್ರ ಕಾಯ್ಕಿಣಿ, ಮುಖ್ಯ ಶಿಕ್ಷಕಿ ಮಮತಾ ಭಟ್ಕಳ, ಮಾರ್ಗದರ್ಶಿ ಶಿಕ್ಷಕಿ ರೇಷ್ಮಾ ನಾಯಕ, ಶಾಲಾ ಶಿಕ್ಷಕ ವೃಂದ ಹಾಗೂ ಶಿಕ್ಷಕೇತರ ಸಿಬ್ಬಂದಿ, ಊರ ನಾಗರಿಕರು, ಅಭಿನಂದಿಸಿ ಹಾರೈಸಿದ್ದಾರೆ.

ಇದನ್ನು ಓದಿ: Drink drive/ ದಂಡದ ಹಣ ಕೋರ್ಟ್‌ಗೆ ಜಮಾ ಮಾಡದೇ ಲೋಪ