ಭಟ್ಕಳ: ನಾವುಂದ (Navunda) ಮರವಂತೆಯ (maravanthe) ಅಂಗವಿಕಲನೋರ್ವನಿಗೆ ಅವಶ್ಯಕತೆ ಇದ್ದ ವೀಲ್ ಚೇರನ್ನು ಭಟ್ಕಳದ (Bhatkal) ಆಟೋ ಚಾಲಕ (auto driver) ಚಂದ್ರು ನಾಯ್ಕ ನೀಡಿ ಮಾನವೀಯತೆ (Humanitarian)ಮೆರೆದಿದ್ದಾರೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಉಡುಪಿ (Udupi) ಜಿಲ್ಲೆಯ ನಾವುಂದ ಗ್ರಾಮದ ಮಂಜುನಾಥ ಖಾರ್ವಿಯವರು ತನ್ನ ಎರಡು ಕಾಲುಗಳನ್ನು ಕಳೆದುಕೊಂಡಿದ್ದಾರೆ. ಇವರಿಗೆ ವೀಲ್ ಚೇರ್ ಅವಶ್ಯಕತೆ ಇರುವುದನ್ನು ಮುಳುಗು ತಜ್ಞ (Dive expert) ದಿನೇಶ ಖಾರ್ವಿ ತಂಡ ಗಮನಿಸಿದರು. ಬಳಿಕ ಇಂತಹ ಅಂಗವಿಕಲರಿಗೆ ಎರಡು ಬಾರಿ ವೀಲ್ ಚೇರ್ ನೀಡಿದ್ದ ಭಟ್ಕಳದ ಹನುಮಾನ ನಗರ ಮೂಲದ ಆಟೋ ಚಾಲಕ ಚಂದ್ರು ನಾಯ್ಕ ಅವರನ್ನು ಸಂಪರ್ಕಿಸಿದರು. ಎರಡು ಕಾಲುಗಳನ್ನು ಕಳೆದುಕೊಂಡ ಮಂಜುನಾಥ ಖಾರ್ವಿಯವರ ಬಗ್ಗೆ ತಿಳಿಸಿದಾಗ ತಕ್ಷಣ ಚಂದ್ರು ನಾಯ್ಕ ಇದಕ್ಕೆ ಸ್ಪಂದಿಸುವ ಮೂಲಕ ಅವರಿಗೆ ಅವಶ್ಯಕತೆ ಇರುವ ವೀಲ್ ಚೇರ್ ನೀಡಿ, ಮಾನವೀಯತೆ (Humanitarian) ಮೆರೆದಿದ್ದು, ಇನ್ನುಳಿದವರಿಗೆ ಮಾದರಿಯಾಗಿದ್ದಾರೆ.

Murinakatte/ ಮುರಿನಕಟ್ಟೆ ವಿವಾದ ಶೀಘ್ರ ಪರಿಹಾರಕ್ಕೆ ಶಬರಿಮಲೈಯಲ್ಲಿ ಪ್ರಾರ್ಥನೆ

ಬಳಿಕ ಮುಳುಗು ತಜ್ಞ ದಿನೇಶ ಖಾರ್ವಿ ತಂಡ ಮಂಜುನಾಥ ಖಾರ್ವಿಯವರ ಮನೆಗೆ ತೆರಳಿ ಚಂದ್ರು ನಾಯ್ಕ ನೀಡಿರುವ ವೀಲ್ ಚೇರ್ ನೀಡಿ, ಚಂದ್ರು ನಾಯ್ಕರ ಸಹಾಯಕ್ಕೆ ಧನ್ಯವಾದ ತಿಳಿಸಿದರು.

Farmer leader/ ರೈತ ಮುಖಂಡ ಶ್ರೀಧರ ಹೆಬ್ಬಾರ ನಿಧನ