ಭಟ್ಕಳ: ಚಿಪ್ಪಿಕಲ್ಲು ದುರಂತದಲ್ಲಿ (Chippikallu Tragedy) ಮಡಿದ ಕುಟುಂಬದ ಮಕ್ಕಳ ನೆರವಿಗೆ ಸಮಾಜ ಸದಾ ಸಿದ್ಧವಾಗಿರಬೇಕು. ಅವರಿಗೆ ಏನಾದರೂ ಸಮಸ್ಯೆಗಳು ಉಂಟಾದರೆ ತಕ್ಷಣ ಸ್ಪಂದಿಸಬೇಕು ಎಂದು ಕನ್ಯಾಡಿ ಶ್ರೀರಾಮ ಕ್ಷೇತ್ರ ಮಹಾಸಂಸ್ಥಾನದ ಪೀಠಾಧಿಪತಿ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮಿ ಸೂಚಿಸಿದರು.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಭಟ್ಕಳ (Bhatkal) ತಾಲೂಕಿನ ಅಳ್ವೆಕೋಡಿಯಲ್ಲಿ ನಡೆದ ಚಿಪ್ಪಿಕಲ್ಲು ದುರಂತದಲ್ಲಿ (Chippikallu Tragedy) ಸಾವನ್ನಪ್ಪಿದವರ ಮನೆಗಳಿಗೆ ಭೇಟಿ ನೀಡಿ ಸಂತ್ರಸ್ತ ಕುಟುಂಬಗಳಿಗೆ ಸಾಂತ್ವನ ಹೇಳಿ ಪ್ರಸಾದ ವಿತರಿಸಿ ಮಾತನಾಡಿದರು. “ಈ ಘಟನೆ ನಡೆಯುವ ಸಂದರ್ಭದಲ್ಲಿ ನಾನು ಅಯೋಧ್ಯೆಯಲ್ಲಿ ಇದ್ದು, ಘಟನೆ ನಡೆದ ಕೂಡಲೇ ಸಮಾಜದ ಮುಖಂಡರಿಗೆ ಕರೆ ಮಾಡಿ ಸಂತ್ರಸ್ತ ಕುಟುಂಬಗಳ ಜತೆ ಸಹಕರಿಸುವಂತೆ ತಿಳಿಸಿದ್ದೆ. ಮಾಜಿ ಸಚಿವ ಮಂಕಾಳ ವೈದ್ಯರಿಗೆ (Mankal Vaidya) ಪರಿಹಾರ ಮೊತ್ತವನ್ನು ಹೆಚ್ಚಿಸುವಂತೆ ಮಾರ್ಗದರ್ಶನ ನೀಡಿದ್ದೆ” ಎಂದು ತಿಳಿಸಿದರು.
Humanitarian/ ಮಕ್ಕಳಿಗೆ ಸಮವಸ್ತ್ರ ವಿತರಣೆ: ಜೈ ಸ್ಪೋರ್ಟ್ಸ್ ಕ್ಲಬ್ ಸಹಾಯ
“ಇಂತಹ ಘಟನೆಗಳು ಆಗಬಾರದು. ಆದರೂ ಮನುಷ್ಯನ ಅಂಕೆಗೆ ಮೀರಿ ಒಮ್ಮೊಮ್ಮೆ ಇಂತಹ ಘಟನೆಗಳು ಸಮಭವಿಸುತ್ತವೆ. ನಡೆದು ಹೋದ ಘಟನೆಯ ಕುರಿತು ಸದಾ ಚಿಂತೆ ಮಾಡುತ್ತಾ ಕುಳಿತುಕೊಳ್ಳದೆ ಮುಂದಿನ ಜೀವನದ ಕುರಿತು ಚಿಂತಿಸಬೇಕು. ಸಂತ್ರಸ್ತ ಕುಟುಂಬಗಳಲ್ಲಿ ಈಗಾಗಲೇ ಓದು ಮುಗಿಸಿದ ವಿದ್ಯಾರ್ಥಿಗಳಿಗೆ ಕೆಲಸ ನೀಡುವ ನಿಟ್ಟಿನಲ್ಲಿ ಯೋಚಿಸಬೇಕು. ನಮ್ಮ ಸಮಾಜಕ್ಕೆ ಸಂಬಂಧಿಸಿದ ಅನೇಕ ಹಣಕಾಸು ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿದ್ದು ಇಂತಹ ಸಂದರ್ಭದಲ್ಲಿ ಇದೊಂದು ವಿಶೇಷ ಪ್ರಕರಣವೆಂದು ಪರಿಗಣಿಸಿ ವಿವೇಚನಾ ಅಧಿಕಾರವನ್ನು ಬಳಸಿಕೊಂಡು ಕೆಲಸ ನೀಡಬೇಕು” ಎಂದು ಮಾರ್ಗದರ್ಶನ ನೀಡಿದರು.
Humanitarian/ ಅಂಗವಿಕಲಗೆ ವೀಲ್ ಚೇರ್ ಕೊಡುಗೆ: ಭಟ್ಕಳದ ಆಟೋ ಚಾಲಕನ ನೆರವು
ಈ ವೇಳೆ ಕುಮಾಟಾ (Kumta) ಶ್ರೀರಾಮ ಸೇವಾ ಸಮಿತಿ ವತಿಯಿಂದ ಸಂತ್ರಸ್ತ ಕುಟುಂಬಗಳಿಗೆ ತಲಾ ೧೦ ಸಾವಿರ ರೂ ಹಣಕಾಸಿನ ನೆರವು ನೀಡಿದರು. ಬಳಿಕ ನಾಮಧಾರಿ (Namadhari) ಸಭಾಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಟ್ಕಳ ನಾಮಧಾರಿ ಒಕ್ಕೂಟದಿಂದ ಸಂತ್ರಸ್ತ ಕುಟುಂಬದ ನೆರವಿಗಾಗಿ ನಡೆಸಲಾಗುತ್ತಿರುವ ಹಣ ಸಂಗ್ರಹದ ಅಭಿಯಾನಕ್ಕೆ ೧ ಲಕ್ಷ ೧೫ ಸಾವಿರ ರೂಪಾಯಿಗಳನ್ನು ಹಸ್ತಾಂತರಿಸಲಾಯಿತು. ಗುರಮಠ ನಾಮಧಾರಿ ಸಂಘದ ಅಧ್ಯಕ್ಷ ಅರುಣ ನಾಯ್ಕ ವೈಯುಕ್ತಿಕವಾಗಿ ೫೦ ಸಾವಿರ ರೂ ಹಾಗೂ ಶ್ರೀ ವೆಂಕಟೇಶ್ವರ ವಿದ್ಯಾವರ್ಧಕ ಸಂಘ ೧೦ ಸಾವಿರ ರೂಪಾಯಿಗಳನ್ನು ಹಸ್ತಾಂತರ ಮಾಡಿದರು.
Murinakatte/ ಮುರಿನಕಟ್ಟೆ ವಿವಾದ ಶೀಘ್ರ ಪರಿಹಾರಕ್ಕೆ ಶಬರಿಮಲೈಯಲ್ಲಿ ಪ್ರಾರ್ಥನೆ
ಈ ಸಂದರ್ಭದಲ್ಲಿ ಶ್ರೀ ಹಳೆಕೋಟೆ ಹನುಮಂತ ದೇವಸ್ಥಾನದ ಅಧ್ಯಕ್ಷ ನಾಗೇಂದ್ರ ನಾಯ್ಕ, ಕಾರ್ಯದರ್ಶಿ ರವಿಂದ್ರ ನಾಯ್ಕ, ಮೊಕ್ತೇಸರ ಸುಬ್ರಾಯ ನಾಯ್ಕ, ಭಟ್ಕಳ ನಾಮಧಾರಿ ಸಂಘದ ಉಪಾಧ್ಯಕ್ಷ ಎಮ್ ಕೆ ನಾಯ್ಕ, ಪ್ರಧಾನ ಕಾರ್ಯದರ್ಶಿ ಡಿ ಎಲ್ ನಾಯ್ಕ, ಶ್ರೀರಾಮ ಕ್ಷೇತ್ರ ಮಹಾಸಂಸ್ಥಾನದ ಟ್ರಸ್ಟಿ ಹಾಗೂ ಗುತ್ತಿಗೆದಾರ ಎಚ್ ಆರ್ ನಾಯ್ಕ, ಕೃಷ್ಣ ನಾಯ್ಕ ಮತ್ತಿತರರು ಉಪಸ್ಥಿತರಿದ್ದರು.



