ಭಟ್ಕಳ: ಇಲ್ಲಿನ ಹನುಮಾನ ನಗರದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ (primary school) ಹಳೆಯ ವಿದ್ಯಾರ್ಥಿಗಳು ಹಾಗೂ ಜೈ ಸ್ಪೋರ್ಟ್ಸ್ ಕ್ಲಬ್ ಯುವಕರು ವಿದ್ಯಾರ್ಥಿಗಳಿಗೆ ಸಮವಸ್ತ್ರ (uniform) ರೂಪದಲ್ಲಿ ಟ್ರ್ಯಾಕ್ ಪ್ಯಾಂಟ್ (track pant) ಹಾಗೂ ಶರ್ಟ್ (shirt) ವಿತರಿಸಿದರು (Humanitarian).
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಹನುಮಾನ ನಗರದ ಶಾಲೆಯ ಎಲ್ಲಾ ವಿದ್ಯಾರ್ಥಿಗಳಿಗೆ ತಮ್ಮ ಕೈಲಾದ ಸಹಾಯ ಹಾಗೂ ಸರಕಾರಿ ಶಾಲೆಯ ಅಭಿವೃದ್ಧಿ ಹಾಗೂ ವಿದ್ಯಾರ್ಥಿಗಳಿಗೆ ಪ್ರೋಸ್ತಾಹ ಕೊಡುವ ನಿಟ್ಟಿನಿಂದ ಈ ಕಾರ್ಯ ಕೈಗೊಳ್ಳಲಾಗಿತ್ತು (Humanitarian). ೨೦೨೫-೨೬ನೇ ಸಾಲಿನಲ್ಲಿ ನಡೆಸಿದ ಕ್ರಿಕೆಟ್ ಪಂದ್ಯಾವಳಿಯಲ್ಲಿ ಉಳಿದಂತಹ ಅಲ್ಪ ಮೊತ್ತವನ್ನು ಬಳಸಿ ಹಾಗೂ ಊರಿನ ಮತ್ತು ಹಳೆ ವಿದ್ಯಾರ್ಥಿಗಳ ಧನಸಹಾಯದಿಂದ ತಮ್ಮ ಊರಿನ ಶಾಲಾ ಮಕ್ಕಳಿಗೆ ಸಮವಸ್ತ್ರ ವಿತರಿಸಿದರು.
Humanitarian/ ಅಂಗವಿಕಲಗೆ ವೀಲ್ ಚೇರ್ ಕೊಡುಗೆ: ಭಟ್ಕಳದ ಆಟೋ ಚಾಲಕನ ನೆರವು
ಭಟ್ಕಳದ (Bhatkal) ಕ್ಷೇತ್ರ ಶಿಕ್ಷಣಾಧಿಕಾರಿ (BEO) ಹಾಗೂ ನೂತನವಾಗಿ ಆಯ್ಕೆಯಾದ ಎಸ್ ಡಿ ಎಂ ಸಿ (SDMC) ಅಧ್ಯಕ್ಷ ಉಮೇಶ ನಾಯ್ಕ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಲಾ ಮುಖ್ಯೋಪಾಧ್ಯಯ ಹೆಚ್ ಪಿ ಸರ್, ವಿಲ್ಸನ್ ರೋಡ್ರಿಗ್ರಿಸ್, ಶಿಕ್ಷಕರು, ಊರಿನ ಉದ್ಯಮಿ ವಿಠ್ಠಲ ನಾಯ್ಕ, ಗುತ್ತಿಗೆದಾರ ಲಚಮಯ್ಯ ನಾಯ್ಕ, ಹನುಮಾನ ನಗರದ ನಮಧಾರಿ ಸಮಾಜದ ಅಧ್ಯಕ್ಷರು ಬಾಲಚಂದ್ರ ನಾಯ್ಕ, ಎಸ್ ಡಿ ಎಂ ಸಿ ಮಾಜಿ ಅಧ್ಯಕ್ಷರಾದ ವೆಂಕಟರಮಣ ನಾಯ್ಕ, ಈಶ್ವರ ನಾಯ್ಕ, ಊರಿನ ಪ್ರಮುಖ ಭೈರಪ್ಪ ನಾಯ್ಕ, ಜಾಲಿ ಪಟ್ಟಣ ಪಂಚಾಯಿತಿ ಸದಸ್ಯ ರಮೇಶ ಗೊಂಡ, ಜೈ ಹನುಮಾನ ಯುವಕ ಸಂಘದ ಅಧ್ಯಕ್ಷ ಸೋಮೇಶ್ವರ ನಾಯ್ಕ, ಹಳೆಯ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷ ಅಭಿಷೇಕ ನಾಯ್ಕ, ಶಾಲೆಯ ಹಿತೈಷಿಗಳಾದ ವಿನೋದ ನಾಯ್ಕ, ವಿಘ್ನೇಶ ನಾಯ್ಕ, ಶಿವರಾಜ ನಾಯ್ಕ ಉಪಸ್ಥಿತರಿದ್ದರು.
Murinakatte/ ಮುರಿನಕಟ್ಟೆ ವಿವಾದ ಶೀಘ್ರ ಪರಿಹಾರಕ್ಕೆ ಶಬರಿಮಲೈಯಲ್ಲಿ ಪ್ರಾರ್ಥನೆ



