ಹೊನ್ನಾವರ: ಶ್ರೀ ವಿಶ್ವ ವೀರಾಂಜನೇಯ ಮಹಾಸಂಸ್ಥಾನಮ್, ಹೇಮಪುರ ಮಹಾಪೀಠಮ್, ಶ್ರೀಕ್ಷೇತ್ರ ಬಂಗಾರಮಕ್ಕಿಯಲ್ಲಿ (Bangaramakki) ಮಾರ್ಚ್ ೨೭ರಿಂದ ಏಪ್ರಿಲ್ ೨ರವರೆಗೆ ಜಾತ್ರಾ ಮಹೋತ್ಸವ, ʼಸಂಸ್ಕೃತಿ ಕುಂಭ ಮಲೆನಾಡ ಉತ್ಸವ – ೨೦೨೬ ಮತ್ತು ರಾಜ್ಯ ಮಟ್ಟದ ಜಾನಪದ ನೃತ್ಯ ಹಾಗೂ ಕುಣಿತ ಭಜನೆ ಸ್ಪರ್ಧೆ ಸತತ ೭ ದಿನಗಳವರೆಗೆ ನಡೆಯಲಿದೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಇದೇ ಸಮಯದಲ್ಲಿ ಹೊರರಾಜ್ಯದ ಜಾನಪದ ನೃತ್ಯ ಪ್ರಕಾರಗಳ ಪ್ರದರ್ಶನ, ಅನುಭವಿ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮ, ಸ್ಥಳೀಯ ಪ್ರತಿಭೆಗಳಿಂದ ವೈವಿಧ್ಯಮಯ ಕಾರ್ಯಕ್ರಮಗಳ ಜೊತೆಗೆ ಶರಾವತಿ ಕುಂಭ ಸ್ನಾನ, ಶರಾವತಿ ಆರತಿ, ಪುಷ್ಪ ರಥೋತ್ಸವ, ಬ್ರಹ್ಮ ರಥೋತ್ಸವ ಕಾರ್ಯಕ್ರಮಗಳು ನಡೆಯಲಿವೆ.
ಇದನ್ನು ಓದಿ: old feud/ ಹಳೆಯ ದ್ವೇಷದ ಗಲಾಟೆಗೆ ಕಾರಣ ಬೇಕಿತ್ತು!
ಜಾನಪದ ನೃತ್ಯ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ರೂ. ೧,00,000/-, ದ್ವಿತೀಯ ಬಹುಮಾನ ರೂ. ೭೫,000/- ಹಾಗೂ ತೃತೀಯ ಬಹುಮಾನ ರೂ. ೫0,000/-, ಚತುರ್ಥ ಬಹುಮಾನ ರೂ. ೨೫,000/-, ಸಮಾಧಾನಕರ ಬಹುಮಾನ ರೂ. ೧0,000/- ಹಾಗೂ ಪ್ರಮಾಣಪತ್ರ ನೀಡಲಾಗುವುದು. ಕುಣಿತ ಭಜನೆ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ರೂ. ೭0,000/-, ದ್ವಿತೀಯ ಬಹುಮಾನ ರೂ. ೫0,000/- ಹಾಗೂ ತೃತೀಯ ಬಹುಮಾನ ರೂ. ೩0,000/-, ಚತುರ್ಥ ಬಹುಮಾನ ರೂ. ೨0,000/-, ಸಮಾಧಾನಕರ ಬಹುಮಾನ ರೂ. ೧0,000/- ಹಾಗೂ ಪ್ರಮಾಣಪತ್ರ ನೀಡಲಾಗುವುದು.
ಇದನ್ನು ಓದಿ: arrested/ ಮುರುಡೇಶ್ವರದಲ್ಲಿ ವ್ಯಾಪಾರಿ ಬಂಧನ
ಸತತ ೭ ದಿನಗಳವೆರೆಗೆ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು, ರಾಜ್ಯ ಮಟ್ಟದ ಈ ಸ್ಪರ್ಧೆಯ ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ ೯೯೮೬೭೧೦೧೨೬ನ್ನು ಸಂಪರ್ಕಿಸಲು ಪ್ರಕಟಣೆಯಲ್ಲಿ ತಿಳಿಸಿದೆ.
ಇದನ್ನು ಓದಿ: Achievements/ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಶ್ರೀವಲ್ಲಿ ವಿದ್ಯಾರ್ಥಿಗಳ ಸಾಧನೆ
ಸ್ಪರ್ಧೆಯಲ್ಲಿ ಭಾಗವಹಿಸಲಿಚ್ಛಿಸುವ ತಂಡಗಳು ಜನವರಿ ೩0ರ ಒಳಗಾಗಿ ತಮ್ಮ ಸ್ವ-ವಿವರಗಳನ್ನು ಈ ವಿಳಾಸಕ್ಕೆ ಅಂಚೆಯ ಮೂಲಕ ಕಳುಹಿಸಬೇಕು. ವಿಳಾಸ: ಜಾನಪದ ನೃತ್ಯ ಹಾಗೂ ಕುಣಿತ ಭಜನಾ ಸ್ಪರ್ಧೆ ವಿಭಾಗ, ಸಿಲೆಕ್ಟ್ ಫೌಂಡೇಶನ್, ಶ್ರೀಕ್ಷೇತ್ರ ಬಂಗಾರಮಕ್ಕಿ (Bangaramakki), ಪೋ: ಗೇರಸೊಪ್ಪ, ತಾ: ಹೊನ್ನಾವರ (ಉ.ಕ.) ೫೮೧೩೮೪.
ಇದನ್ನು ಓದಿ: Karki Shri/ ಭಟ್ಕಳದಲ್ಲಿ ‘ದೈವಜ್ಞ ದರ್ಶನ’ ಕಾರ್ಯಕ್ರಮ



