ಭಟ್ಕಳ: ಪೈಪ್ ಜೋಡಣೆಗೆ ರಸ್ತೆ ಅಗೆಯುತ್ತಿರುವುದನ್ನು ಪ್ರಶ್ನಿಸಿದ ಮಹಿಳೆ ಸಹಿತ ಇಬ್ಬರ ಮೇಲೆ ಹಲ್ಲೆ ನಡೆದಿರುವ (attacked) ಬಗ್ಗೆ ಭಟ್ಕಳ (Bhatkal) ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ನಿವೃತ್ತ ನೌಕರ ಶಿರಾಲಿಯ ಚಿತ್ರಾಪುರದ ನಿವಾಸಿ, ಮೂಲತಃ ಮುರ್ಡೇಶ್ವರದ ದೊಡ್ಡಬಲಸೆಯ ಗಣೇಶ ತಂದೆ ಅನಂತ ಆಚಾರಿ (೬೩) ಮತ್ತು ಅವರ ಸಹೋದರಿ ರೋಹಿಣಿ ಹಲ್ಲೆಗೊಳಗಾದವರು. ಚಿತ್ರಾಪುರದ ಸಿವಿಲ್ ಗುತ್ತಿಗೆದಾರ ಪ್ರಭಾಕರ ತಂದೆ ರಾಮಾ ನಾಯ್ಕ ಮತ್ತು ಅವರ ಆಳು ಕಾಯ್ಕಿಣಿ ಬಸ್ತಿಯ ದೇವೇಂದ್ರ ತಂದೆ ನಾರಾಯಣ ಬಾಕಡ ವಿರುದ್ಧ ದೂರು ದಾಖಲಾಗಿದೆ. ಮಣಿಪಾಲ ಆಸ್ಪತ್ರೆಯಲ್ಲಿ (Manipal Hospital) ಚಿಕಿತ್ಸೆಗೆ ದಾಖಲಾಗಿರುವ ಗಣೇಶ ಆಚಾರಿ ದೂರು ದಾಖಲಿಸಿದ್ದಾರೆ.
Dongarapalli/ ಭಟ್ಕಳ ಡೊಂಗರಪಳ್ಳಿ ಸಮಿತಿಗೆ ಫೈಜಾನ್ ನದ್ವಿ ಅಧ್ಯಕ್ಷ, ಇನಾಯತ್ ಗವಾಯಿ ಪ್ರಧಾನ ಕಾರ್ಯದರ್ಶಿಯಾಗಿ
ಫೆ ೨೩ರಂದು ಮಧ್ಯಾಹ್ನ ೧೨:೫೦ ಗಂಟೆಯ ಸುಮಾರಿಗೆ ಚಿತ್ರಾಪುರ ರಸ್ತೆಯಲ್ಲಿರುವ ತಮ್ಮ ಮನೆಗೆ ಹೋಗುತ್ತಿರುವಾಗ ಓಡಾಡುವ ದಾರಿಯಲ್ಲಿ ಗುತ್ತಿಗೆದಾರ ಮತ್ತು ಅವರ ಆಳು ಸೇರಿಕೊಂಡು ಓಡಾಡುವ ದಾರಿಯನ್ನು ಅಗೆದು ಪೈಪಲೈನ ಜೋಡಣೆ ಕೆಲಸ ಮಾಡುತ್ತಿದ್ದರು. ಇದನ್ನು ಗಣೇಶ ಆಚಾರಿಯ ಅವರ ತಂಗಿ ರೋಹಿಣಿ ಆಕ್ಷೇಪಿಸಿದಾಗ ಗುತ್ತಿಗೆದಾರ ಪ್ರಭಾಕರ ನಾಯ್ಕ ರೋಹಿಣಿ ಅವರನ್ನು ದೂಡಿದ್ದು, ಇದನ್ನು ನೋಡಿ ಸ್ಥಳಕ್ಕೆ ಹೋದ ಗಣೇಶ ಆಚಾರಿ ಅವರಿಗೆ ಇಬ್ಬರೂ ಆಪಾದಿತರು ಅವಾಚ್ಯ ಶಬ್ದಗಳಿಂದ ಬೈದು, ಹೊಡೆದಿದ್ದಾರೆ (attacked). ಗಣೇಶ ಆಚಾರಿ ಅವರಿಗೆ ಪ್ರಭಾಕರ ನಾಯ್ಕ ದೂಡಿದ್ದರಿಂದ ಅವರ ಬಲ ಕಾಲಿನ ತೊಡೆಗೆ ಪೆಟ್ಟಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
Makkala Santhe/ ಮಣ್ಕುಳಿಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ಸಂತೆ



