ಭಟ್ಕಳ: ಜಾನುವಾರುಗಳನ್ನು ಹತ್ಯೆ ಮಾಡುವ ಉದ್ದೇಶದಿಂದ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಆರೋಪದ ಮೇಲೆ ವ್ಯಕ್ತಿಯೊಬ್ಬರ ವಿರುದ್ಧ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು (case filed), ಜಾನುವಾರುಗಳನ್ನು ರಕ್ಷಿಸಲಾಗಿದೆ (cattle rescued).

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಹೊನ್ನಾವರ (Honnavar) ತಾಲೂಕಿನ ನಾಥಗೇರಿ ಮೂಲದ ಮುಜಾಫರ್ (೪೧) ಆರೋಪಿಯಾಗಿದ್ದು, ಪ್ರಸ್ತುತ ಭಟ್ಕಳದ (Bhatkal) ಮೂಸಾನಗರ ೪ನೇ ಕ್ರಾಸ್‌ನಲ್ಲಿ ವಾಸವಾಗಿದ್ದಾರೆ. ಆರೋಪಿ ಇತರರೊಂದಿಗೆ ಸೇರಿಕೊಂಡು ಸುಮಾರು ₹೨.೮೦ ಲಕ್ಷ ರೂ ಮೌಲ್ಯದ ೩ ಎತ್ತುಗಳು ಹಾಗೂ ₹೪೦ ಸಾವಿರ ರೂ ಮೌಲ್ಯದ ೨ ಗಂಡು ಕರುಗಳನ್ನು ಬಂದರ್ ರೋಡ್ ೬ನೇ ಕ್ರಾಸ್‌ನಲ್ಲಿರುವ ಶೆಡ್‌ನಲ್ಲಿ ಯಾರಿಗೂ ತಿಳಿಯದಂತೆ ಇಟ್ಟು, ನೀರು-ಮೇವು ನೀಡದೆ ಹಿಂಸಾತ್ಮಕವಾಗಿ ಕಟ್ಟಿ ಹಾಕಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

literary festival/ ನಿನಾದ ಯುಗಾದಿ ಸಾಹಿತ್ಯ ಸಂಭ್ರಮದಲ್ಲಿ ಕವಿತೆಗಳ ಕಲರವ

ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು ೩ ಎತ್ತುಗಳು ಹಾಗೂ ೨ ಕರುಗಳನ್ನು ಹಗ್ಗ ಸಮೇತ ವಶಕ್ಕೆ ಪಡೆದಿದ್ದಾರೆ (cattle rescued). ಈ ಕುರಿತು ನಗರ ಠಾಣೆಯ ಪಿಎಸೈ ನವೀನ ನಾಯ್ಕ ದೂರು ನೀಡಿದ್ದು, ಜಾನುವಾರು ಹತ್ಯೆ ತಡೆ ಮತ್ತು ಸಂರಕ್ಷಣಾ ಕಾಯ್ದೆಯಡಿ ಪಿಎಸೈ ಸೋಮನಾಥ ರಾಠೋಡ ಪ್ರಕರಣ ದಾಖಲಿಸಿ ತನಿಖೆ ಮುಂದುವರೆಸಿದ್ದಾರೆ.

Installation/ ಮಾ ೨೭ರಂದು ಬಾಲಾಲಯದಲ್ಲಿ ಸೋಡಿಗದ್ದೆ ಶ್ರೀ ದೇವಿಯ ಮೂಲ ಸನ್ನಿಧಿ ಪ್ರತಿಷ್ಠಾಪನೆ