ಭಟ್ಕಳ: ಸೋಡಿಗದ್ದೆ (Sodigadde) ಶ್ರೀ ಮಹಾಸತಿ ದೇವಸ್ಥಾನದ ಕಟ್ಟಡವನ್ನು ನೂತನ ಶಿಲಾಮಯವಾಗಿ ಜೀರ್ಣೋದ್ಧಾರದ ಮೊದಲ ಹಂತವಾದ ಕಲಾ ವಿಸರ್ಜನೆ ಮತ್ತು ಬಾಲಾಲಯದಲ್ಲಿ ಶ್ರೀ ದೇವರ ಸ್ಥಾಪನೆ (Installation) ಕಾರ್ಯಕ್ರಮವು ಮಾರ್ಚ ೨೭ರಂದು ನಡೆಯಲಿದೆ ಎಂದು ಸೋಡಿಗದ್ದೆ ಶ್ರೀ ಮಹಾಸತಿ ದೇವಸ್ಥಾನ ಅಭಿವೃದ್ಧಿ ಸಮಿತಿ ಅಧ್ಯಕ್ಷ ದೇವಿದಾಸ ಮೊಗೇರ ತಿಳಿಸಿದರು. ಅವರು ಶುಕ್ರವಾರದಂದು ಇಲ್ಲಿನ ಪ್ರವಾಸಿ ಮಂದಿರದಲ್ಲಿ ಕರೆಯಲಾದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದರು.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
‘ಸೋಡಿಗದ್ದೆ ಶ್ರೀ ಮಹಾಸತಿ ದೇವಿಯು ಲಕ್ಷಾಂತರ ಜನರ ಆರಾಧ್ಯ ದೇವಿಯಾಗಿದ್ದಾಳೆ. ಈ ಹಿನ್ನೆಲೆ ಶ್ರೀ ಮಹಾಸತಿ ದೇವಸ್ಥಾನದ ಕಟ್ಟಡವನ್ನು ನೂತನ ಶಿಲಾಮಯವಾಗಿ ಜೀರ್ಣೋದ್ದಾರ ಮಾಡಲು ಉಭಯ ಗ್ರಾಮಸ್ಥರು ತೀರ್ಮಾನಿಸಿ, ಸರಕಾರದಿಂದಲೂ ಅನುಮತಿಯನ್ನು ಪಡೆದು, ಪ್ರಾರಂಭದ ಹಂತವಾಗಿ ಕಲಾವಿಸರ್ಜನೆ ಮತ್ತು ಶ್ರೀ ದೇವಿಯ ಮೂಲ ಸನ್ನಿಧಿಯನ್ನು ಬಾಲಾಲಯದಲ್ಲಿ ಪ್ರತಿಷ್ಠಾಪಿಸುವ (Installation) ಕಾರ್ಯಕ್ರಮದ ಭಾಗವಾಗಿ ಶ್ರೀ ಪರಾಭವ ನಾಮ ಸಂವತ್ಸರದ ಮೀನ ಮಾಸ ದಿನ ೧೩ಕ್ಕೆ ಸಲ್ಲುವ ಚೈತ್ರ ಶುಕ್ಲ ೯ಯು ಗುರುವಾರ ಮಾರ್ಚ ೨೬ ಮತ್ತು ಶುಕ್ರವಾರ ೨೭ರಂದು ಗರಿಗೆಮಠ ಆಗಮ ಪ್ರವೀಣ ಶೈವಸಿದ್ಧಾಂತಿ ವೇ ಮೂ ರಾಮಪ್ರಸಾದ ಅಡಿಗರ ನೇತೃತ್ವದಲ್ಲಿ “ಬಾಲಾಲಯದಲ್ಲಿ ಶ್ರೀ ದೇವರ ಸ್ಥಾಪನೆ”ಧಾರ್ಮಿಕ ಕಾರ್ಯಕ್ರಮವು ನಡೆಯಲಿದೆ.
cattle rescued/ ಜಾಗಟೆಬೈಲ್ ಪ್ರದೇಶದಲ್ಲಿ ೯ ಜಾನುವಾರು ರಕ್ಷಣೆ
ಮಾರ್ಚ ೨೬ ಗುರುವಾರದಂದು ಸಂಜೆ ಬಾಲಾಲಯದಲ್ಲಿ ವಾಸ್ತು-ರಾಕ್ಷೋಘ್ನ ಹೋಮ, ಪೂಜಾ-ಬಲಿ, ಪ್ರಸಾದ ಶುದ್ಧಿ-ರಕ್ಷೆ, ಕಲಾವಿಸರ್ಜನಾಂಗ ಹೋಮಾದಿಗಳು, ಜೀವಕುಂಬ ಸ್ಥಾಪನೆ ಕಾರ್ಯಕ್ರಮಗಳು ನಡೆಯಲಿವೆ. ಮಾರ್ಚ ೨೭ ಶುಕ್ರವಾರದಂದು ಬೆಳಿಗ್ಗೆ ೬-೩೧ಕ್ಕೆ ಬ್ರಾಹ್ಮಿ ಮುಹೂರ್ತದಲ್ಲಿ ಶ್ರೀ ದೇವತಾ ಪ್ರತಿಷ್ಠೆ, ಪ್ರತಿಷ್ಠಾಂಗ ಹೋಮಾದಿಗಳು, ಕಲಶಾಭಿಷೇಕ, ಮಹಾಪೂಜೆ ನೆರವೆರಲಿದೆ. ಮಧ್ಯಾಹ್ನ ೧೨.೩೦ ಗಂಟೆಗೆ ಅನ್ನಸಂತರ್ಪಣೆ ನಡೆಯಲಿದೆ ಎಂದು ಅವರು ತಿಳಿಸಿದರು.
arrested/ ಭಟ್ಕಳದಲ್ಲಿ ಜಾನುವಾರು ಅಕ್ರಮ ಸಾಗಾಟ: ಒಬ್ಬ ಸೆರೆ, ಇನ್ನೊಬ್ಬ ಪರಾರಿ
ಸೋಡಿಗದ್ದೆ ಶ್ರೀ ಮಹಾಸತಿ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ನಾಗರಾಜ ಈ ಎಚ್ ಮಾತನಾಡಿ ‘ ಈ ಮೊದಲು ಇದ್ದಂತಹ ಶ್ರೀ ಮಹಾಸತಿ ದೇವಸ್ಥಾನದ ಮೂರ್ತಿಗಳನ್ನು ಅದೇ ರೀತಿಯಾಗಿ ಬಾಲಾಲಯದಲ್ಲಿ ಮಾರ್ಚ ೨೭ರಂದು ಪ್ರತಿಷ್ಠಾಪಿಸಲಾಗುವುದು. ಅದರ ಬಳಿಕ ದೇವಸ್ಥಾನದ ಹರಕೆ, ಸೇವೆ ಯಥಾಸ್ಥಿತಿ ಮುಂದುವರೆಯಲಿದೆ ಎಂದರು.
SSLC exams/ ಎಸ್ಎಸ್ಎಲ್ಸಿ ಪರೀಕ್ಷೆಗೆ ಭಟ್ಕಳದಲ್ಲಿ ಮೊದಲ ದಿನ ೩೫ ವಿದ್ಯಾರ್ಥಿಗಳು ಗೈರು
ಈ ಸಂದರ್ಭದಲ್ಲಿ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಉಪಾಧ್ಯಕ್ಷ ಅಚ್ಯುತ ನಾಯ್ಕ, ಕಾರ್ಯದರ್ಶಿ ಮಾಸ್ತಿ ನಾಯ್ಕ, ಸದಸ್ಯರುಗಳಾದ ಆರ್ ಜೆ ನಾಯ್ಕ, ಶೇಖರ ನಾಯ್ಕ, ಡಿ ಎಲ್ ನಾಯ್ಕ, ಅಭಿವೃದ್ಧಿ ಸಮಿತಿ ಸದಸ್ಯರಾದ ಗುರುದಾಸ ಮೋಗೇರ, ಮೋಹನ ನಾಯ್ಕ, ಮಾದೇವ ನಾಯ್ಕ, ತಿಮ್ಮಪ್ಪ ನಾಯ್ಕ ಮುಂತಾದವರು ಉಪಸ್ಥಿತರಿದ್ದರು.



