ಭಟ್ಕಳ: ಇಲ್ಲಿನ ರೈಲ್ವೆ ಸ್ಟೇಷನ್ನಲ್ಲಿ (railway station) ನಡೆದ ಘಟನೆಯಲ್ಲಿ ಯುವಕನ ಸಮಯಪ್ರಜ್ಞೆಯಿಂದ (punctuality) ಮಹಿಳೆಯೊಬ್ಬರು ಅಪಾಯದಿಂದ ಪಾರಾದ ಘಟನೆ ನಡೆದಿದೆ.
ಈ ಸುದ್ದಿಯ ವಿಡಿಯೋವನ್ನು ಯೂಟ್ಯೂಬ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂ ನಲ್ಲಿ ವೀಕ್ಷಿಸಬಹುದು.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಬೆಂಗಳೂರಿನಿಂದ (Bengaluru) ಕಾರವಾರದತ್ತ (Karwar) ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬರು ಬೆಳಗಿನ ಜಾವ ತಮ್ಮ ಬ್ಯಾಗ್ ಕಳೆದುಕೊಂಡ ಪರಿಣಾಮ ಆತಂಕಕ್ಕೊಳಗಾಗಿ, ಗಾಬರಿಯಲ್ಲಿ ಚಲಿಸುತ್ತಿದ್ದ ರೈಲಿನಿಂದ ಇಳಿದು ಪ್ಲಾಟಫಾರಂನಲ್ಲಿ ಬಿದ್ದರು. ಈ ಸಂದರ್ಭದಲ್ಲಿ ಭಟ್ಕಳ (Bhatkal) ತೆಂಗಿನಗುಂಡಿ ನಿವಾಸಿ ಸಂದೀಪ್ ಶೆಟ್ಟಿ ಅವರು ತಕ್ಷಣ ಸ್ಪಂದಿಸಿ ಮಹಿಳೆಯನ್ನು ಎಳೆದು ಸುರಕ್ಷಿತ ಸ್ಥಳಕ್ಕೆ ಕೊಂಡೊಯ್ಯುವ ಮೂಲಕ ಸಂಭವನೀಯ ಅಪಾಯವನ್ನು ತಪ್ಪಿಸಿದರು (punctuality). ಇದಲ್ಲದೆ, ಮಹಿಳೆಯ ಕಳೆದುಹೋದ ಬ್ಯಾಗ್ನ್ನು ಮರಳಿ ದೊರಕಿಸಲು ಸಹ ಅವರು ಪ್ರಯತ್ನಿಸಿದ್ದು, ಅವರ ಮಾನವೀಯತೆ ಹಾಗೂ ಸಮಯಪ್ರಜ್ಞೆಗೆ ಸಾರ್ವಜನಿಕರಿಂದ ಪ್ರಶಂಸೆ ವ್ಯಕ್ತವಾಗಿದೆ.
Chariot Festival/ ಭಟ್ಕಳ ಶ್ರೀ ಚನ್ನಪಟ್ಟಣ ಹನುಮಂತ ದೇವರ ಬ್ರಹ್ಮ ರಥೋತ್ಸವಕ್ಕೆ ಸಂಭ್ರಮದ ತಯಾರಿ



