ಭಟ್ಕಳ: ನಾಯಿಯನ್ನು ಶೆಡ್‌ನೊಳಗೆ ಕರೆತಂದ ವಿಚಾರಕ್ಕೆ ಆರಂಭವಾದ ಮಾತಿನ ಚಕಮಕಿಯು ಬಿಯರ್ ಬಾಟಲಿಯಿಂದ (beer bottle) ಹಲ್ಲೆ ನಡೆಸುವ ಮಟ್ಟಕ್ಕೆ ತಿರುಗಿ, ವ್ಯಕ್ತಿಯೊಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ನಗರದಲ್ಲಿ ನಡೆದಿದೆ. ಗಾಯಾಳು ಮೈನುದ್ದಿನ್ ಗೌಸ್ ಮೋಹಿದ್ದಿನ್ ಯಾದವಾಡ (೪೪) ಅವರ ಪತ್ನಿ ಮುಬೀನಾ ಬಾನು ಮೈನುದ್ದಿನ್ ಯಾದವಾಡ ನೀಡಿದ ದೂರಿನ ಮೇರೆಗೆ ಭಟ್ಕಳ (Bhatkal) ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ದೂರಿನ ಪ್ರಕಾರ, ಮಧ್ಯಾಹ್ನ ಸುಮಾರು ೧.೧೦ರ ವೇಳೆಗೆ ಮೈನುದ್ದಿನ್ ಅವರು ನಗರದ ೪ಸೀಸನ್ ಬಾರ್ & ರೆಸ್ಟೋರೆಂಟ್ ಪಕ್ಕದ ಶೆಡ್‌ನಲ್ಲಿ ಮದ್ಯಪಾನ ಮಾಡುತ್ತಿದ್ದರು. ಇದೇ ವೇಳೆ ಸಾಗರ (Sagar) ತಾಲೂಕಿನ ನಾಗುವಳ್ಳಿ-ಕೋಗಾರ ನಿವಾಸಿ ದಿನೇಶ ಪರಶು ಮರಾಠ (೨೮) ನಾಯಿಯನ್ನು ಕರೆದುಕೊಂಡು ಅಲ್ಲಿಗೆ ಬಂದಿದ್ದರು. ನಾಯಿಯನ್ನು ಹೊರಗೆ ಕರೆದೊಯ್ಯುವಂತೆ ಮೈನುದ್ದಿನ್ ಹೇಳಿದ್ದರಿಂದ ಇಬ್ಬರ ನಡುವೆ ವಾಗ್ವಾದ ನಡೆದಿದೆ ಎನ್ನಲಾಗಿದೆ. ಈ ವೇಳೆ ಆಕ್ರೋಶಗೊಂಡ ದಿನೇಶ, ಅವಾಚ್ಯ ಶಬ್ದಗಳಿಂದ ನಿಂದಿಸಿ ತನ್ನ ಕೈಯಲ್ಲಿದ್ದ ಖಾಲಿ ಬಿಯರ್ ಬಾಟಲಿಯಿಂದ (beer bottle) ಮೈನುದ್ದಿನ್ ಅವರ ತಲೆಗೆ ಹೊಡೆದಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

Mankal Vaidya/ ಮಂಕಾಳ ವೈದ್ಯಗೆ ತಪ್ಪಿದ ಸಚಿವ ಸ್ಥಾನ: ಅಭಿಮಾನಿಗಳಲ್ಲಿ ಅಸಮಾಧಾನ

ಬಳಿಕ ಒಡೆದ ಬಾಟಲಿಯಿಂದ ಎದೆ ಭಾಗಕ್ಕೆ ಚುಚ್ಚಲು ಯತ್ನಿಸಿದ್ದು, ಆತ್ಮರಕ್ಷಣೆಗಾಗಿ ಕೈ ಮುಂದಿಟ್ಟ ಮೈನುದ್ದಿನ್ ಅವರ ಎಡ ಮೊಣಕೈ ಸಮೀಪ ಗಂಭೀರ ಗಾಯವಾಗಿದೆ. ಗಾಯಾಳುವನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಾಹಿತಿ ಪಡೆದ ಭಟ್ಕಳ ನಗರ ಠಾಣೆಯ ಪಿಎಸೈ ನವೀನ ನಾಯ್ಕ ಹಾಗೂ ಸಿಬ್ಬಂದಿ ಗಾಯಾಳುವನ್ನು ಹೆದ್ದಾರಿ ಗಸ್ತು ವಾಹನದಲ್ಲಿ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದು ಪ್ರಾಥಮಿಕ ಚಿಕಿತ್ಸೆ ಕೊಡಿಸಿದ್ದು, ಬಳಿಕ ಹೆಚ್ಚಿನ ಚಿಕಿತ್ಸೆಗೆ ಉಡುಪಿ (Udupi) ಜಿಲ್ಲಾ ಆಸ್ಪತ್ರೆಗೆ ರವಾನಿಸಿದ್ದಾರೆ. ಪ್ರಕರಣ ಸಂಬಂಧ ಆರೋಪಿ ದಿನೇಶ ಪರಶು ಮರಾಠ ಬಂಧನಕ್ಕೊಳಗಾಗಿದ್ದು ಪೊಲೀಸರು, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಭಟ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

Murinakatte/ ಮುರಿನಕಟ್ಟೆ ಸ್ಥಳದಲ್ಲಿ ರಸ್ತೆ ಕಾಮಗಾರಿ: ಬಿಗು ಬಂದೋಬಸ್ತ್