ಭಟ್ಕಳ: ಗ್ರಾಮದೇವ ಶ್ರೀ ಚನ್ನಪಟ್ಟಣ ಹನುಮಂತ ದೇವಸ್ಥಾನದ ಧ್ವಜಾರೋಹಣ ಹಾಗೂ ವಾರ್ಷಿಕ ರಥೋತ್ಸವ (Chariot Festival) ಕಾರ್ಯಕ್ರಮದ ಪೂರ್ವ ನಿಮಿತ್ತ ಧಾರ್ಮಿಕ ಕಾರ್ಯಕ್ರಮಗಳು ಮಾರ್ಚ ೨೦ ಶುಕ್ರವಾರದಂದು ಆರಂಭಗೊಂಡಿದ್ದು, ಮಾರ್ಚ ೨೭ ಶುಕ್ರವಾರದಂದು ಬ್ರಹ್ಮ ರಥೋತ್ಸವ (Chariot Festival) ಜರುಗಲಿದೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಜಿಲ್ಲೆಯ ಪ್ರಸಿದ್ಧ ಜಾತ್ರೆಗಳಲ್ಲೊಂದಾದ ಶ್ರೀ ಚೆನ್ನಪಟ್ಟಣ ಹನುಮಂತ ದೇವರ ಜಾತ್ರೆಗೆ ಮಾರ್ಚ ೨೦ರಂದು ಬೆಳಿಗ್ಗೆಯಿಂದಲೇ ಧಾರ್ಮಿಕ ಕಾರ್ಯಕ್ರಮಗಳು ಆರಂಭವಾಗಿದ್ದು, ಗೋಕರ್ಣದ (Gokarna) ತಾಂತ್ರಿಕರಾದ ವೇದಮೂರ್ತಿ ಶ್ರೀನಿವಾಸ ಅಡಿಗರ ತಾಂತ್ರಿಕತ್ವದಲ್ಲಿ ದೇವಸ್ಥಾನದ ಅರ್ಚಕ ಪ್ರಮೋದ ಶಂಕರ‌ ಭಟ್ಟ ಬಚ್ಚೋಡಿ ಅವರ ಅರ್ಚಕತ್ವದಲ್ಲಿ ನಡೆಸಲಾಗಿದೆ. ಬೆಳಿಗ್ಗೆ ಧ್ವಜಸ್ಥಂಭಕ್ಕೆ ಗರುಡ ಪಟ ಕಟ್ಟುವ ಮೂಲಕ ಧ್ವಜಾರೋಹಣದೊಂದಿಗೆ ರಥೋತ್ಸವದ ವಿಧಿವಿಧಾನಗಳು ವಿಧ್ಯುಕ್ತವಾಗಿ ಚಾಲನೆಗೊಂಡಿದ್ದವು. ಬೆಳಿಗ್ಗೆಯಿಂದಲೇ ಧಾರ್ಮಿಕ ಕಾರ್ಯಕ್ರಮಗಳು ಆರಂಭವಾಗಿ, ಹೋಮ ಹವನಾದಿಗಳು ನಡೆದವು. ನಂತರ ಗರುಡನ ಪಟವನ್ನು ಪೂಜಿಸಿ, ಧ್ವಜಸ್ತಂಭಕ್ಕೆ ಕಟ್ಟುವ ಮೂಲಕ ರಥೋತ್ಸವದ ವಿಧಿವಿಧಾನಗಳು ವಿಧ್ಯುಕ್ತವಾಗಿ ಆರಂಭಗೊಂಡಿತು.

Stone pelting/ ಭಟ್ಕಳದಲ್ಲಿ ಪಲ್ಲಕ್ಕಿ ಮೆರವಣಿಗೆ ವೇಳೆ ಕಲ್ಲೆಸೆತ

ಮಾರ್ಚ ೨೦ ಶುಕ್ರವಾರದಂದು ಧ್ವಜಾರೋಹಣ, ಶಿಭಿಕಾ ಯಂತ್ರೋತ್ಸವ, ಮಾರ್ಚ ೨೧ರಂದು ಶನಿವಾರ ಶಿಖಿ ವಾಹನೋತ್ಸವ, ಮಾರ್ಚ ೨೨ ರವಿವಾರ ಡೋಲಾ ಯಂತ್ರೋತ್ಸವ, ಮಾರ್ಚ ೨೩ ಸೋಮವಾರದಂದು ಪುಷ್ಪ ಮಂಟಪೋತ್ಸವ, ಮಾರ್ಚ ೨೪ ಮಂಗಳವಾರದಂದು ಅತೀವೇಗ ವಾಹನೋತ್ಸವ, ಮಾರ್ಚ ೨೫ ಬುಧವಾರದಂದು ಗಜ ವಾಹನೋತ್ಸವ, ರಾತ್ರಿ ಪುಷ್ಪ ರಥೋತ್ಸವ ಯಶಸ್ವಿಯಾಗಿ ನಡೆದಿದೆ.

passes away/ ಸಮಾಜಸೇವಕ ಸೈಯದ್ ಹಸನ್ ಬರ್ಮಾವರ್ ನಿಧನ

ಮಾರ್ಚ ೨೬ ಗುರುವಾರ ಸಿಂಹ ವಾಹನೋತ್ಸವ, ರಾತ್ರಿ ಪುಷ್ಪ ರಥೋತ್ಸವ ಜರುಗಲಿದೆ. ಮಾರ್ಚ ೨೭ ಶುಕ್ರವಾರದಂದು ಬೆಳಿಗ್ಗೆ ರಥಾರೋಹಣ ನಡೆಯಲಿದ್ದು ರಥ ಕಾಣಿಕೆ ಸಮರ್ಪಣೆಯೊಂದಿಗೆ ಸಂಜೆ ೫ ಗಂಟೆಗೆ ಬ್ರಹ್ಮರಥೋತ್ಸವ ಬಹು ವಿಜೃಂಭಣೆಯಿಂದ ಸಾವಿರಾರು ಜನರ ಜಯಘೋಷದೊಂದಿಗೆ ನಡೆಯಲಿದೆ. ಮಾರ್ಚ ೨೮ ಶನಿವಾರದಂದು ಅಶ್ವವಾಹನೋತ್ಸವ, ಚೂಣೋತ್ಸವ, ಅವಭ್ರಥದೊಂದಿಗೆ ಜಾತ್ರಾ ಧಾರ್ಮಿಕ ಉತ್ಸವಗಳು ಮುಕ್ತಾಯವಾಗಲಿದೆ. ಅಂದು ರಾತ್ರಿ  ೯ ಗಂಟೆಗೆ ಭಟ್ಕಳದ ಶ್ರೀ ಮಾರುತಿ ಪ್ರಸಾದಿತ ಯಕ್ಷಗಾನ ಮಂಡಳಿ ಇವರಿಂದ ಯಕ್ಷಗಾನ ಬಯಲಾಟ ನಡೆಯಲಿದೆ.

Woman injured/ ದುಡುಕಿನ ಚಾಲನೆಗೆ ಮಹಿಳೆಗೆ ಗಾಯ; ಬೈಕ್ ಸವಾರನ ವಿರುದ್ಧ ಪ್ರಕರಣ

ದೇವಳದ ಒಳಗೆ ಹನುಮ ದೇವರ ಸಕಲ ಪೂಜಾ ಧಾರ್ಮಿಕ ವಿಧಿವಿಧಾನಗಳು ನಡೆಯುತ್ತಿದ್ದು, ಪ್ರತಿನಿತ್ಯ ಜಾತ್ರಾ ಮಹೋತ್ಸವ ಕಾರ್ಯಕ್ರಮಗಳು ದೇವಳದಲ್ಲಿ ನಡೆಯುತ್ತಿವೆ. ಊರ ಹಬ್ಬವಾದ ಈ ಜಾತ್ರೆಯೂ ತಾಲುಕೂ ಅಷ್ಟೇ ಅಲ್ಲದೇ ಜಿಲ್ಲೆ, ರಾಜ್ಯದಿಂದಲೂ ಜನರು ಜಾತ್ರೆಯಲ್ಲಿ  ಪಾಲ್ಗೊಳ್ಳುವುದುಂಟು. ದೇವಸ್ಥಾನದ ಪ್ರಾಂಗಣ ಹಾಗೂ ಹೊರಾಂಗಣಗಳಿಗೆ ಸುಣ್ಣ ಬಣ್ಣ ಬಳಿದು ಅಲಂಕಾರ ಮಾಡಿದ್ದು, ದೇವಾಲಯವೂ ಜಾತ್ರಾ ರಥೋತ್ಸವಕ್ಕೆ ಕಂಗೊಳಿಸುವಂತೆ ಸಜ್ಜುಗೊಂಡಿದೆ. ಸುಂದರ ರಥಕ್ಕೆ ಬಣ್ಣ ಬಳಿದು, ರಥ ಕಟ್ಟುವ ಕಾರ್ಯ ಮುಕ್ತಾಯಗೊಂಡಿದೆ.

Murdeshwar/ ಮುರ್ಡೇಶ್ವರಕ್ಕೆ ಲಯನ್ಸ್ ಗವರ್ನರ್ ಭೇಟಿ: ಪ್ರಶಸ್ತಿ ಪ್ರದಾನ, ಸನ್ಮಾನ

ಒಟ್ಟಿನಲ್ಲಿ ಭಕ್ತರಲ್ಲಿ ಭಟ್ಕಳ ಜಾತ್ರೆ ವಿಶೇಷವಾಗಿದ್ದು, ರಥೋತ್ಸವಕ್ಕೆ ಒಂದೇ ದಿನ ಬಾಕಿಯಿದ್ದು ಕ್ಷಣಗಣನೆ ನಡೆಯುತ್ತಿದೆ. ಭಟ್ಕಳ ಸಂಪೂರ್ಣ ಊರಿನ ಜಾತ್ರೆಗೆ ಸಜ್ಜುಗೊಂಡಿದ್ದು, ಭಟ್ಕಳಿಗರಲ್ಲಿ ಸಂಭ್ರಮದ ವಾತಾವರಣ ಸೃಷ್ಟಿಯಾಗಿದೆ.

vardhanthi utsava/ ಶ್ರೀ ವಲ್ಮೀಕ ನಾಗ-ಚೌಡೇಶ್ವರಿ ದೇವಸ್ಥಾನದ ೫ನೇ ವರ್ಷದ ವರ್ಧಂತಿ ಉತ್ಸವ ಏ ೧ರಂದು

ಭಟ್ಕಳ ಪುರಸಭೆಯಿಂದ ನಗರಸಭೆಯಾಗಿ ಮೇಲ್ದರ್ಜೆಗೊಂಡ ಬಳಿಕ ನೇಮಕಗೊಂಡ ನೂತನ ನಗರಸಭೆ ಪೌರಾಯುಕ್ತ ಬಾಬಾ ಸಾಹೇಬ್ ಮಾನೆ ಅವರು ಚೆನ್ನಪಟ್ಟಣ ಹನುಮಂತ ದೇವಸ್ಥಾನದ ಜಾತ್ರಾ ತಯಾರಿಯ ಸ್ಥಳಕ್ಕೆ ಭೇಟಿ ನೀಡಿ, ರಸ್ತೆ ದುರಸ್ತಿ, ಬೀದಿ ದೀಪ ದುರಸ್ತಿ ಸೇರಿದಂತೆ ಜಾತ್ರಾ ರಥೋತ್ಸವದ ಅನೂಕೂಲಕ್ಕೆ ಇಂಜಿನಿಯರ್ ಹಾಗೂ ಸಿಬ್ಬಂದಿಗೆ ಸೂಚನೆ ನೀಡಿದರು.

autorickshaws/ ಭಟ್ಕಳದಲ್ಲಿ ಎಲ್‌ಪಿಜಿ ಪೂರೈಕೆ ಸ್ಥಗಿತ: ರಸ್ತೆಗಿಳಿಯದ ಆಟೋರಿಕ್ಷಾಗಳು

ಪೋಲಿಸ್ ಸರ್ಪಗಾವಲು: ಮಾರ್ಚ ೨೭ರಂದು ನಡೆಯಲಿರುವ ಭಟ್ಕಳ ಜಾತ್ರಾ ಮಹೋತ್ಸವದಲ್ಲಿ ಉತ್ತರ ಕನ್ನಡ (Uttara Kannada) ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ದೀಪನ್ ಎಂ ಎನ್ ಅವರ ಮಾರ್ಗದರ್ಶನದಲ್ಲಿ  ಭಟ್ಕಳ (Bhatkal) ಉಪ ವಲಯ ಪೋಲೀಸ್ ಉಪ ಅಧೀಕ್ಷಕ ಗಿರೀಶ ಬಿ ನೇತೃತ್ವದಲ್ಲಿ ಭಟ್ಕಳ ಶಹರ ಠಾಣೆಯ ಪಿಐ ದಿವಾಕರ್ ಬಂದೋಬಸ್ತ ವ್ಯವಸ್ಥೆ ಕಲ್ಪಿಸಿದ್ದಾರೆ. ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳ ಜೊತೆಗೆ ಮೂವರು ಡಿವೈಎಸ್ಪಿಗಳು, ಸಿಪಿಐ, ಪಿಎಸ್ಐ ಹಾಗೂ ಎಎಸೈಗಳು ಸೇರಿದಂತೆ ೨೭೦ಕ್ಕೂ ಅಧಿಕ ಜಿಲ್ಲೆಯ ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದೆ. ಸಿಬ್ಬಂದಿಗೆ ಬಂದೋಬಸ್ತ ಕುರಿತಾಗಿ ಮಾಹಿತಿ ನೀಡಿ ಆಯಕಟ್ಟಿನ ಜಾಗದಲ್ಲಿ ನೇಮಿಸಲಾಗಿದೆ.

women’s adoration/ ಜಾಲಿಯಲ್ಲಿ ಅರ್ಥಪೂರ್ಣವಾಗಿ ನೆರವೇರಿದ ಸ್ತ್ರೀ ನಮನ ಕಾರ್ಯಕ್ರಮ