ಭಟ್ಕಳ: ತಾಲೂಕಿನ ಪ್ರತಿಷ್ಠಿತ ಹಾಗೂ ಹೆಮ್ಮೆಯ ಹಣಕಾಸು ಸಂಸ್ಥೆಗಳಲ್ಲಿ ಒಂದಾದ ಗುರುಕೃಪಾ ಪತ್ತಿನ ಸಹಕಾರಿ ಸಂಘ ನಿಯಮಿತ ಇದರ ಆಡಳಿತ ಮಂಡಳಿಯ ನೂತನ ಅಧ್ಯಕ್ಷರಾಗಿ ಹರೀಶ ವೆಂಕಟೇಶ ನಾಯ್ಕ ಹಾಗೂ ಉಪಾಧ್ಯಕ್ಷರಾಗಿ ಕುಮಾರ ಮಾದೇವ ನಾಯ್ಕ ಅವಿರೋಧವಾಗಿ ಆಯ್ಕೆಯಾಗಿದ್ದಾರೆ (elected). ೨೦೨೬-೨೭ನೇ ಸಾಲಿನಿಂದ ೨೦೩೦-೩೧ನೇ ಸಾಲಿನ ಅವಧಿವರೆಗೆ ಇವರಿಗೆ ಅಧಿಕಾರಾವಧಿ ನಿಗದಿಯಾಗಿದೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಫೆಬ್ರವರಿ ೮ರಂದು ಇಲ್ಲಿನ ಮಣ್ಕುಳಿ ಪ್ರಾಥಮಿಕ ಶಾಲೆಯಲ್ಲಿ ನಡೆದ ಆಡಳಿತ ಮಂಡಳಿಯ ಚುನಾವಣೆಯ ಬಳಿಕ, ಮಾರ್ಚ್ ೧೨ರಂದು ಗೋಪಾಲಕೃಷ್ಣ ಸಭಾಭವನದಲ್ಲಿ ನಡೆದ ಮತ ಎಣಿಕೆಯಲ್ಲಿ ಹಿಂದಿನ ನಿರ್ದೇಶಕರ ಮಂಡಳಿಯೇ ಪುನಃ ಆಯ್ಕೆಯಾಗಿತ್ತು (elected).
Stone pelting/ ಭಟ್ಕಳದಲ್ಲಿ ಪಲ್ಲಕ್ಕಿ ಮೆರವಣಿಗೆ ವೇಳೆ ಕಲ್ಲೆಸೆತ
ನೂತನ ನಿರ್ದೇಶಕರಾಗಿ ಸುರೇಶ ವಾಸುದೇವ ನಾಯ್ಕ, ಮೋಹನ ರಾಮ ನಾಯ್ಕ, ರಾಜೇಶ ಮಾದೇವ ನಾಯ್ಕ, ವೆಂಕಟೇಶ ಸಣ್ಣಯ್ಯ ನಾಯ್ಕ, ಶಬರೀಶ ಕೃಷ್ಣ ನಾಯ್ಕ, ಸತೀಶ ತಿಮ್ಮಯ್ಯ ನಾಯ್ಕ, ಭಾರತಿ ಈರಪ್ಪ ನಾಯ್ಕ, ವಿಜಯಾ ಮಂಜುನಾಥ ನಾಯ್ಕ, ಸುರೇಶ ಅಣ್ಣಪ್ಪ ಮೊಗೇರ, ಜಯಂತ ಮಾಸ್ತಿ ಗೊಂಡ ಹಾಗೂ ಲಿಖಿತಾ ಪದ್ಮಪ್ರಸಾದ ಆಯ್ಕೆಯಾಗಿದ್ದಾರೆ.
punctuality/ ಯುವಕನ ಸಮಯಪ್ರಜ್ಞೆ: ಮಹಿಳೆ ಅಪಾಯದಿಂದ ಪಾರು
ಇದೀಗ ಸಂಘದ ಪ್ರಧಾನ ಕಚೇರಿಯಲ್ಲಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಯಿತು. ಈ ಸಂದರ್ಭದಲ್ಲಿ ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕ ವಾಸು ನಾಯ್ಕ ಉಪಸ್ಥಿತರಿದ್ದರು.
Chariot Festival/ ಭಟ್ಕಳ ಶ್ರೀ ಚನ್ನಪಟ್ಟಣ ಹನುಮಂತ ದೇವರ ಬ್ರಹ್ಮ ರಥೋತ್ಸವಕ್ಕೆ ಸಂಭ್ರಮದ ತಯಾರಿ



