ಕುಮಟಾ: ಸಾಂಪ್ರದಾಯಿಕ ಭತ್ತದ ತಳಿಗಳನ್ನು ಸಂರಕ್ಷಿಸಿ ಭಾರತೀಯ ನೆಲಮೂಲದ ಸಾಂಪ್ರದಾಯಿಕ ಕೃಷಿ ಪದ್ಧತಿಯನ್ನು ಉತ್ತೇಜಿಸಲು ಬೀಜ ಬ್ಯಾಂಕ (seed bank) ಸ್ಥಾಪಿಸಲಾಗಿದೆ ಎಂದು ಜರ್ಮನ್ (German) ಕನ್ಸೂಲೇಟ್‌ನ ವೈಸ್ ಕನ್ಸೂಲ್ ಆದ ಕಾಜಾ ಶ್ವಾರ್ಮ ಹೇಳಿದರು.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಕುಮಟಾ (Kumta) ತಾಲೂಕಿನ ಕಾಗಾಲ ಗ್ರಾಮದ ಕಡ್ಲೆಮನೆಯಲ್ಲಿ ಸ್ಥಾಪಿಸಲಾಗಿರುವ ಸಮುದಾಯಾಧಾರಿತ ಬೀಜ ಬ್ಯಾಂಕ್ (seed bank) ಲೋಕಾರ್ಪಣಾ ಸಮಾರಂಭ ಉದ್ಘಾಟಿಸಿ ಮಾತನಾಡುತ್ತಿದ್ದರು. ಶಿರಸಿಯ ಸ್ಕೊಡ್‌ವೆಸ್ (Scodwes) ಸಂಸ್ಥೆ ಮತ್ತು ಜರ್ಮನ್ ಕನ್ಸೂಲೇಟ್ ಬೆಂಗಳೂರು (Bengaluru) ಅವರ ಸಹಾಯದೊಂದಿಗೆ ಅಳಿವಿನಂಚಿನಲ್ಲಿರುವ ೬೦೦ಕ್ಕೂ ಅಧಿಕ ಭತ್ತದ ತಳಿಗಳನ್ನು ಸಂರಕ್ಷಿಸುವ ಉದ್ದೇಶದಿಂದ ಈ ಬೀಜ ಬ್ಯಾಂಕ್ ಸ್ಥಾಪಿಸಲಾಗಿದ್ದು, ರೈತರು ಈ ಬೀಜ ಬ್ಯಾಂಕ್‌ನ ಸದುಪಯೋಗ ಪಡೆದುಕೊಂಡು ಸಾಂಪ್ರದಾಯಿಕ ಭತ್ತದ ಬೀಜಗಳನ್ನು ಸಂರಕ್ಷಿಸಬೇಕು ಎಂದರು.
Women’s Day/ ಬೆಂಗ್ರೆಯಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಸಂಭ್ರಮ
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬೀಜ ಬ್ಯಾಂಕ್ ಸಂಸ್ಥಾಪಕ ಟ್ರಸ್ಟಿ ಸುಭಾಷ ಶಿರಾಲಿ ಮಾತನಾಡಿ, ರಾಜ್ಯಕ್ಕೆ ಮಾದರಿಯಾಗುವ ರೀತಿಯಲ್ಲಿ ಭತ್ತದ ತಳಿಗಳ ಸಂರಕ್ಷಣೆಗಾಗಿ ಬೀಜ ಬ್ಯಾಂಕ್‌ನ್ನು ಸ್ಥಾಪಿಸಲಾಗಿದ್ದು, ಸ್ಥಳೀಯ ಆಸಕ್ತ ರೈತರಿಗೆ ಈ ಬೀಜಗಳನ್ನು ವಿತರಣೆ ಮಾಡಿ ಅವರಿಂದ ವಿನಿಮಯ ಮಾಡಿಕೊಂಡು ಭತ್ತದ ಬೀಜಗಳನ್ನು ಪಡೆಯಲಾಗುವುದು. ಈಗಾಗಲೇ ಈ ಬೀಜ ಬ್ಯಾಂಕ್‌ಗಳಲ್ಲಿ ೬೦೦ಕ್ಕೂ ಅಧಿಕ ಬಗೆಯ ಭತ್ತದ ಬೀಜಗಳನ್ನು ಸಂಗ್ರಹಿಸಲಾಗಿದ್ದು, ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಸಾಂಪ್ರದಾಯಿಕ ಬೀಜಗಳನ್ನು ಸಂಗ್ರಹಿಸುವ ಉದ್ದೇಶ ಹೊಂದಲಾಗಿದೆ ಎಂದರು.
Islamic flag/ ಹಸಿರು ಬಾವುಟ ತೆರವಿಗೆ ಮುಸ್ಲಿಮರ ಆಕ್ಷೇಪ: ಮತ್ತೆ ಬಾವುಟ ಹಾರಾಟಕ್ಕೆ ಪೊಲೀಸರ ತಡೆ
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಜಿಐಝಡ್ ರಾಜ್ಯ ಯೋಜನಾ ಸಮನ್ವಯಾಧಿಕಾರಿ ನಮೆರ್ತಾ ಶರ್ಮಾ, ಕಾರವಾರ (Karwar) ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಶಿವಪ್ರಸಾದ್ ಗಾಂವಕರ, ಶಿರಸಿ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥೆ ಡಾ ರೂಪಾ ಪಾಟೀಲ, ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ ನ ಪ್ಲಾಂಟ್ ಸೈಂಟಿಸ್ಟ್ ಡಾ ಎಮ್ ಡಿ ಸುಭಾಷ್ ಚಂದ್ರನ್, ಕಾಗಾಲ ಗ್ರಾಮದ ಪಂಚಾಯತ್ ಅಭಿವೃದ್ಧಿ ಅಧಿಕಾರಿ ನವೀನ ನಾಯ್ಕ ಸಂದರ್ಭೋಚಿತವಾಗಿ ಮಾತನಾಡಿದರು.
CM medal/ ಶಹರ ಠಾಣೆಯ ಪಿಎಸ್‌ಐಗೆ ಮುಖ್ಯಮಂತ್ರಿ ಬಂಗಾರದ ಪದಕ
ಕಾರ್ಯಕ್ರಮದಲ್ಲಿ ೧೫೦ಕ್ಕೂ ಹೆಚ್ಚು ಸಾಂಪ್ರದಾಯಿಕ ಭತ್ತದ ತಳಿಗಳನ್ನು ಸಂವರ್ಧಸಿದ ಆರ್ ಜಿ ಭಟ್ ದೇವತೆಮನೆ ಹಾಗೂ ೬೦೦ಕ್ಕೂ ಹೆಚ್ಚಿನ ಭತ್ತದ ತಳಿಗಳನ್ನು ಸಂಗ್ರಹಿಸಿದ ನಾಗರಾಜ ನಾಯ್ಕರವರನ್ನು ಗೌರವಿಸಿ ಸನ್ಮಾನಿಸಲಾಯಿತು. ಸ್ಕೊಡ್‌ವೆಸ್ ಸಂಸ್ಥೆಯ ಕಾರ್ಯಕ್ರಮಾಧಿಕಾರಿ ಡಾ ನಾರಾಯಣ ಹೆಗಡೆ ಪ್ರಾಸ್ತಾವಿಕವಾಗಿ ಮಾತನಾಡಿ ಬೀಜ ಬ್ಯಾಂಕ್‌ನ ಕಾರ್ಯವೈಖರಿ, ವಿಶೇಷತೆ ಮತ್ತು ಉದ್ದೇಶವನ್ನು ವಿವರಿಸಿ, ಸ್ವಾಗತಿಸಿದರು. ಸ್ಕೊಡ್‌ವೆಸ್‌ನ ಯೋಜನಾ ಸಂಯೋಜಕ ಗಂಗಾಧರ ನಾಯ್ಕ ಕಾರ್ಯಕ್ರಮ ನಿರ್ವಹಿಸಿ, ವಂದಿಸಿದರು. ಕಾರ್ಯಕ್ರಮದಲ್ಲಿ ೧೫೦ಕ್ಕೂ ಅಧಿಕ ಪ್ರಗತಿಪರ ಕೃಷಿಕರು ಭಾಗವಹಿಸಿದ್ದರು.



