ಭಟ್ಕಳ: ಮುರುಡೇಶ್ವರ (Murudeshwar) ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶುಕ್ರವಾರ ಮಧ್ಯಾಹ್ನ ಸರ್ಕಾರಿ ಸಾರಿಗೆ ಬಸ್‌ಗೆ ಏಕಾಏಕಿ ಬೆಂಕಿ ತಗುಲಿದ (fire in bus) ಘಟನೆ ಸಂಭವಿಸಿದ್ದು, ಚಾಲಕನ ಸಮಯೋಚಿತ ಕ್ರಮದಿಂದ ೨೩ ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಕುಮಟಾದಿಂದ ಭಟ್ಕಳ ಬಸ್ ನಿಲ್ದಾಣದತ್ತ ಸಾಗುತ್ತಿದ್ದ ಸಾರಿಗೆ ಸಂಸ್ಥೆಯ ಬಸ್ ರಾಷ್ಟ್ರೀಯ ಹೆದ್ದಾರಿಯ ಮುರುಡೇಶ್ವರ (Murudeshwar) ನಾಕಿಯಿಂದ ಬಸ್ ನಿಲ್ದಾಣದತ್ತ ತೆರಳುವ ವೇಳೆ ಜನತಾ ವಿದ್ಯಾಲಯ ಸಮೀಪ ಬಸ್ಸಿನ ಮುಂದಿನ ಎಡ ಚಕ್ರ ಜಾಮ್ ಆಗಿದೆ. ಇದನ್ನು ಗಮನಿಸಿದ ಚಾಲಕ ಗಣಪತಿ ಚಿದಾನಂದ ಚೌಡಕಿ ಅವರು ತಕ್ಷಣ ಬಸ್ಸನ್ನು ನಿಲ್ಲಿಸಿದರು.
champion/ ಮಣ್ಕುಳಿ ಪ್ರೀಮಿಯರ್ ಲೀಗ್: ರಾಯಲ್ ಸಾಮ್ರಾಟ ಚಾಂಪಿಯನ್
ಪರಿಶೀಲನೆ ನಡೆಸುವಾಗ ಇಂಜಿನ್ ಭಾಗದಿಂದ ಹೊಗೆ ಕಾಣಿಸಿಕೊಂಡು ಕೆಲವೇ ಕ್ಷಣಗಳಲ್ಲಿ ಬೆಂಕಿ ಹೊತ್ತಿಕೊಂಡಿತು. ಪರಿಸ್ಥಿತಿ ಗಂಭೀರವಾಗುತ್ತಿರುವುದನ್ನು ಅರಿತ ಚಾಲಕ ಹಾಗೂ ನಿರ್ವಾಹಕ ಶ್ರೀಪಾದ ಹನುಮಂತ ಮಡಿವಾಳ ಅವರು ಬಸ್ಸಿನಲ್ಲಿದ್ದ ಪ್ರಯಾಣಿಕರನ್ನು ತಕ್ಷಣ ಕೆಳಗಿಳಿಸಿದರು.
arrested/ ಕೋರ್ಟ್ ಜಾಮೀನಿಗೆ ನಕಲಿ ದಾಖಲೆ ನೀಡಲು ಯತ್ನಿಸಿ ಪರಾರಿಯಾಗಿದ್ದ ಮಂಗಳೂರು ವ್ಯಕ್ತಿ ಬಂಧನ
ನಂತರ ಸ್ಥಳೀಯ ಆಟೋ ಚಾಲಕ ಮಂಜುನಾಥ ಮೊಗೇರ, ಬಸ್ ಸಿಬ್ಬಂದಿ ಹಾಗೂ ಅಗ್ನಿಶಾಮಕ ದಳದ ಸಹಕಾರದಿಂದ ಬೆಂಕಿಯನ್ನು ನಂದಿಸಲಾಯಿತು. ಭಟ್ಕಳ ಡಿಪೋದಿಂದ ಮೆಕಾನಿಕ್‌ಗಳು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು. ಪ್ರಾಥಮಿಕ ಮಾಹಿತಿಯಂತೆ, ಐದು ವರ್ಷ ಹಳೆಯದಾದ ಈ ಬಸ್ಸಿನ ಚಕ್ರದ ಲೈನರ್ ಜಾಮ್ ಆಗಿರುವುದೇ ಬೆಂಕಿಗೆ ಕಾರಣವಾಗಿರಬಹುದು ಎಂದು ಶಂಕಿಸಲಾಗಿದೆ.
fishing/ ಮೀನುಗಾರಿಕೆಗೆ ತೆರಳಿದ ವ್ಯಕ್ತಿ ಸಮುದ್ರದಲ್ಲಿ ಮುಳುಗಿ ಸಾವು



