ಭಟ್ಕಳ: ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಸಾಹಿತಿ, ಜನಾನುರಾಗಿ ವೈದ್ಯ, ಸಮಾಜ ಸೇವಕ ಡಾ ಆರ್ ವಿ ಸರಾಫ  ಅವರಿಗೆ  ನುಡಿನಮನ (tribute) ಸಲ್ಲಿಸಲಾಯಿತು.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿ ಪಿ ಆರ್ ನಾಯ್ಕ ಮಾತನಾಡಿ, ತಮ್ಮ ವೃತ್ತಿ ಜೀವನಕ್ಕೆ ಮತ್ತು ಸಾಹಿತ್ಯಕ ಕಾರ್ಯಗಳಿಗೆ  ಮಾರ್ಗದರ್ಶಿಯಾಗಿ ನಿಂತ ಬಗೆಯನ್ನು  ಸ್ಮರಿಸಿದರಲ್ಲದೆ ತಾವು ಕಲಿಸುತ್ತಿದ್ದ  ಶಾಲಾ ಮಕ್ಕಳ ಬಿಸಿಯೂಟಕ್ಕೆ ತರಕಾರಿಯನ್ನು ಸ್ವತಃ ಸರಾಫರವರೇ ತಂದುಕೊಡುತ್ತಿದ್ದ ಸಂದರ್ಭವನ್ನು ಸ್ಮರಿಸಿದರು.

social concern/ ಸಾಮಾಜಿಕ ಕಾಳಜಿ ಮೆರೆದ ಭಟ್ಕಳ ತಹಶೀಲ್ದಾರ

ಕಸಾಪ ತಾಲೂಕಾಧ್ಯಕ್ಷ ಗಂಗಾಧರ ನಾಯ್ಕ ಮಾತನಾಡಿ, ವೈದ್ಯರಾಗಿ ಕೈಯಲ್ಲಿ ಚಿಕಿತ್ಸೆ, ಮನಸಿನಲ್ಲಿ ಕರುಣೆ, ಮಾತಿನಲ್ಲಿ ಸಾಂತ್ವನವನ್ನು  ನೀಡಿದ ಡಾ ಸರಾಫ ಅವರು ಸಾಮಾಜಿಕ, ಸಾಹಿತ್ಯಕ, ಧಾರ್ಮಿಕ, ಶಿಕ್ಷಣ ಹೀಗೆ ಎಲ್ಲ ಕ್ಷೇತ್ರಗಳಿಗೆ  ಅವಿಸ್ಮರಣೀಯ ಕೊಡುಗೆ ನೀಡಿದರು. ಸಾಹಿತ್ಯ ಪರಿಷತ್ತನ್ನು ನಡೆಸಿಕೊಂಡು ಬರುವಲ್ಲಿ ಡಾ ಸರಾಫ ಅವರ ಮಾರ್ಗದರ್ಶನ ಸ್ಮರಣೀಯ. ಪ್ರತಿವರ್ಷ ಶಿಕ್ಷಣ, ವೈದ್ಯಕೀಯ, ಸಾಮಾಜಿಕ ಕ್ಷೇತ್ರದಲ್ಲಿ ಸಮಾಜಮುಖಿ ಸೇವೆಯನ್ನು  ಸಲ್ಲಿಸಿರುವ ಓರ್ವರಿಗೆ ಡಾ ಆರ್ ವಿ ಸರಾಫ ಹೆಸರಿನ  ಪ್ರಶಸ್ತಿಯನ್ನು ಸಾಹಿತ್ಯ ಪರಿಷತ್ತಿನ ವತಿಯಿಂದ ನೀಡಲಾಗುವುದೆಂದು  ಘೋಷಿಸಿದರು.

Bhatkal/ ಭಟ್ಕಳದಲ್ಲಿ ಕಾರು ಸಹಿತ ಯುವಕ ವಶಕ್ಕೆ

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಜನತಾ ವಿದ್ಯಾಲಯದ ಪ್ರಾoಶುಪಾಲ ಜಿ ಎಸ್ ಹೆಗಡೆ ಮಾತನಾಡಿ ವೈದ್ಯಕೀಯ ವೃತ್ತಿಯನ್ನು ಸೇವೆಯಾಗಿ ಸ್ವೀಕರಿಸಿದ ಡಾ ಸರಾಫರವರು ಜನತಾ ವಿದ್ಯಾಲಯದ ಪೂರ್ವ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ಶಾಲೆಯ ಪ್ರಗತಿಗೆ ನೀಡಿದ ಕೊಡುಗೆಗಳನ್ನು ಸ್ಮರಿಸಿದರು (tribute).

demands/ ಮಂಕಾಳ ವೈದ್ಯರ ಪುತ್ರಿ, ಸಹೋದರನ ವಿರುದ್ಧ ಕ್ರಮಕ್ಕೆ ಆಗ್ರಹ

ಮಾನಾಸುತ  ಶಂಭು ಹೆಗಡೆ, ಜನತಾ ವಿದ್ಯಾಲಯದ ಮುಖ್ಯಾಧ್ಯಾಪಕಿ ಆಶಾ ಕಲ್ಮನೆ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಂ ಎನ್ ನಾಯ್ಕ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಉಮೇಶ ಕೆರೆಕಟ್ಟೆ,  ಕಸಾಪ ಗೌರವ ಕಾರ್ಯದರ್ಶಿ ನಾರಾಯಣ ನಾಯ್ಕ, ಸಂಘಟನಾ ಕಾರ್ಯದರ್ಶಿ ಸಂತೋಷ ಆಚಾರ್ಯ, ಸಾಹಿತಿ ಮತ್ತು ಕಾರ್ಯಕಾರಿ ಸಮಿತಿಯ ಪೂರ್ಣಿಮಾ ಕರ್ಕಿಕರ ಹಾಗೂ ಕೃಷ್ಣ ಮೊಗೇರ ಅವರು ಡಾಕ್ಟರ್ ಸರಾಫ್ ಅವರ ಒಡನಾಟದ ಅವಿಸ್ಮರಣೀಯ ಕ್ಷಣಗಳನ್ನು ಸ್ಮರಿಸಿಕೊಂಡರು.

Kalashabhisheka/ ಭಟ್ಕಳದ ಕಾಮಾಕ್ಷಿ ದೇವಸ್ಥಾನದಲ್ಲಿ ವಿಶೇಷ ಕಲಶಾಭಿಷೇಕ 

ಸಾಹಿತಿ ಶ್ರೀಧರ ಶೇಟ ಅವರು ಸರಾಫ ಅವರ ಸಾಹಿತ್ಯಕ, ಸಾಮಾಜಿಕ, ಧಾರ್ಮಿಕ, ಪತ್ರಿಕಾ ಕ್ಷೇತ್ರ ಹೀಗೆ ಹಲವು ಕ್ಷೇತ್ರದ ಸಾಧನೆಗಳನ್ನು ಸ್ಮರಿಸಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದ ಆರಂಭದಲ್ಲಿ ಡಾ ಆರ್ ವಿ ಸರಾಫ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಲಾಯಿತು. ಇತ್ತೀಚಿಗೆ ಶಿರಾಲಿಯ ಚಿಪ್ಪೇಕಲ್ಲು ಆಯುವ ಸಂದರ್ಭದಲ್ಲಿನ ದುರಂತದಲ್ಲಿ ಅಗಲಿದ ಚೇತನಗಳಿಗೆ ಮೌನಾಚರಣೆಯ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು.

CEIR portal/ ಕಾಣೆಯಾದ 3 ಮೊಬೈಲ್‌ಗಳ ಪತ್ತೆ: ವಾರಸುದಾರರಿಗೆ ಹಸ್ತಾಂತರ