ಭಟ್ಕಳ: ಲೈಂಗಿಕ ಕಿರುಕುಳ ನೀಡುವ ಉದ್ದೇಶದಿಂದ ಯುವತಿ ಕಾರಿನಲ್ಲಿ ಬಲವಂತವಾಗಿ ಕರೆದುಕೊಂಡು ಹೋಗಿದ್ದ  ಆರೋಪದ ಮೇಲೆ ಭಟ್ಕಳದ ಯುವಕನ ವಿರುದ್ಧ ಭಟ್ಕಳ (Bhatkal) ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ (Case registered).

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಕಾರಗದ್ದೆ ೨ನೇ ಕ್ರಾಸ್ ನಿವಾಸಿ, ಸೇಲ್ಸಮನ್ ಕೆಲಸ ಮಾಡುವ ಶಾಹಿದ್ ಸೈಫ್ ಖಾನ್ (೨೧) ವಿರುದ್ಧ ಅಪಹರಣಕ್ಕೊಳಗಾದ anphaal ಸುಪರ್ ಮಾರ್ಕೇಟಿನಲ್ಲಿ ಕೆಲಸ ಮಾಡುತ್ತಿರುವ ೨೧ ವರ್ಷದ ಯುವತಿ ದೂರು ದಾಖಲಿಸಿದ್ದಾರೆ.

Complaint/ ಹಿಂದು ಯುವತಿಯೊಂದಿಗೆ ಮುಸ್ಲಿಂ ಯುವಕ; ತಡೆದ ಹಿಂದೂ ಕಾರ್ಯಕರ್ತರ ಮೇಲೆ ದೂರು

ಪಿರ್ಯಾದಿಯ ಇಚ್ಛೆ ಇಲ್ಲದಿದ್ದರೂ ಪ್ರೀತಿಸುವಂತೆ ಒತ್ತಾಯ ಮಾಡುತ್ತಿದ್ದ ಆರೋಪಿಯು ಜೂನ್ ೧೭ರಂದು ಬೆಳಗ್ಗೆ ೭.೩೦ ಗಂಟೆಗೆ ಅನ್ಫಾಲ್ ಸುಪರ್ ಮಾರುಕಟ್ಟೆ ಹಿಂಬಾಗದ ಹಾಸ್ಟೆಲ್ ಹತ್ತಿರ ಬಂದು ಪಿರ್ಯಾದಿಗೆ ಹೊರಗಡೆ ಬರುವಂತೆ ಹೇಳಿದ್ದಾನೆ. ಹೊರಗಡೆ ಆರೋಪಿ ಇದ್ದಲ್ಲಿಗೆ ಯುವತಿ ಬಂದಾಗ ಆರೋಪಿ ಯುವಕ ಮಾತನಾಡುವುದಿದೆ ಅಂತಾ ಹೇಳಿ ಒತ್ತಾಯ ಪೂರ್ವಕವಾಗಿ ಕಾರಿನಲ್ಲಿ ಹತ್ತಿಸಿಕೊಂಡಿದ್ದಾನೆ. ಕಾರಿನ ಬಾಗಿಲುಗಳನ್ನು ಹಾಕಿಕೊಂಡು ಕಾರಿನ ಸೀಟ್ ಬೆಲ್ಲ ಹಾಕಿ ಕಾರನ್ನು ವೇಗವಾಗಿ ಚಲಾಯಿಸಿಕೊಂಡು ಹೋಗಿದ್ದಾನೆ.

Chippikallu Tragedy/ ಚಿಪ್ಪಿಕಲ್ಲು ದುರಂತ ಸಂತ್ರಸ್ತರಿಗೆ ನೆರವಾಗಲು ಬ್ರಹ್ಮಾನಂದ ಸರಸ್ವತಿ ಸ್ವಾಮಿ ಸೂಚನೆ 

ಕಾರು ಭಟ್ಕಳದಿಂದ ಮಾರುಕೇರಿ ಕಡೆಗೆ ಹೋಗುವಾಗ ಬೆಳಗ್ಗೆ ೧೦-೩೦ ಗಂಟೆ ಸುಮಾರಿಗೆ ಭಟ್ಕಳ ತಾಲೂಕಿನ ಕಡಸಲಗದ್ದೆ ಪುರಸಭೆ ಕಸ ವಿಲೇವಾರಿ ಘಟಕದ ಹತ್ತಿರ ಪೊಲೀಸರಿಗೆ ಸಿಕ್ಕಿದ್ದಾನೆ. ಯುವತಿಗೆ ಲೈಂಗಿಕ ಕಿರುಕುಳ ನೀಡುವ ಉದ್ದೇಶದಿಂದ ಕಾರಿನಲ್ಲಿ ಬಲವಂತವಾಗಿ ಕರೆದುಕೊಂಡು ಹೋಗಲಾಗಿತ್ತು ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ಕುರಿತು ಭಟ್ಕಳ ಗ್ರಾಮೀಣ ಠಾಣೆಯ ಪಿಎಸ್ಐ (PSI) ಭರಮಪ್ಪ ಬೆಳಗಲಿ ಪ್ರಕರಣ ದಾಖಲಿಸಿಕೊಂಡು (Case registered) ತನಿಖೆ ಕೈಗೊಂಡಿದ್ದಾರೆ.

Bhatkal man dies/ ದುಬೈನಲ್ಲಿ ಕ್ರಿಕೆಟ್ ಆಡುತ್ತಿದ್ದಾಗ ಭಟ್ಕಳದ ಯುವಕ ಸಾವು